ಕರ್ನಾಟಕ

karnataka

ETV Bharat / sports

ಏಕದಿನ ಪಂದ್ಯ: ಬಾಂಗ್ಲಾದೇಶದ ವಿರುದ್ಧ ಕೊನೆಯ ಪಂದ್ಯ ಗೆದ್ದು ವೈಟ್​ವಾಶ್ ತಪ್ಪಿಸಿಕೊಂಡ ಅಫ್ಘಾನ್​ - ಐಸಿಸಿ ಏಕದಿನ ವಿಶ್ವಕಪ್ ​ ಸೂಪರ್ ಲೀಗ್​

ಕೊನೆಯ ಏಕದಿನ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 7 ವಿಕೆಟ್​ಗಳ ಜಯ ಸಾಧಿಸುವ ಮೂಲಕ ಅಫ್ಘಾನಿಸ್ತಾನ 1-2ರಲ್ಲಿ ಸರಣಿ ಸೋಲಿನ ಅಂತರವನ್ನು ತಪ್ಪಿಸಿಕೊಂಡಿದೆ.

Bangladesh beat Afghanistan by 7 wickets in 3rd ODI
ಬಾಂಗ್ಲಾದೇಶ vs ಅಫ್ಘಾನಿಸ್ತಾನ ಏಕದಿನ ಸರಣಿ

By

Published : Feb 28, 2022, 8:21 PM IST

ಚತ್ತೋಗ್ರಾಮ್​; ರಹ್ಮನುಲ್ಲಾ ಗುರ್ಬಜ್​ ಅವರ ಅಜೇಯ ಶತಕದ ನೆರವಿನಿಂದ ಅಫ್ಘಾನಿಸ್ತಾನ ತಂಡ ಬಾಂಗ್ಲಾದೇಶ ವಿರುದ್ಧ 3 ಪಂದ್ಯಗಳ ಏಕದಿ ಸರಣಿಯ ಕೊನೆಯ ಪಂದ್ಯದಲ್ಲಿ 7 ವಿಕೆಟ್​ಗಳ ಜಯ ಸಾಧಿಸುವ ಮೂಲಕ ವೈಟ್​ವಾಶ್​ ಮುಖಭಂಗವನ್ನು ತಪ್ಪಿಸಿಕೊಂಡಿದೆ.

ಐಸಿಸಿ ವಿಶ್ವಕಪ್​ ಸೂಪರ್​ ಲೀಗ್​ ಭಾಗವಾಗಿ ನಡೆದ ಸರಣಿಯಲ್ಲಿ ಈಗಾಗಲೇ ಬಾಂಗ್ಲಾದೇಶ ಸರಣಿಯನ್ನು ಗೆದ್ದುಕೊಂಡಿದೆ. ಹಾಗಾಗಿ ಇಂದಿನ ಪಂದ್ಯ ಔಪಚಾರಿಕ ಪಂದ್ಯವಾಗಿತ್ತು.

ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ಅಫ್ಘಾನ್​ ಬೌಲಿಂಗ್ ದಾಳಿಗೆ ತತ್ತರಿಸಿ 46.5 ಓವರ್​ಗಳಲ್ಲಿ 192 ರನ್​ಗಳಿಗೆ ಆಲೌಟ್​ ಆಗಿತ್ತು. ಅದ್ಭುತ ಫಾರ್ಮ್​ನಲ್ಲಿರುವ ಲಿಟನ್ ದಾಸ್​ 113 ಎಸೆತಗಳಲ್ಲಿ 7 ಬೌಂಡರಿ ಸಹಿತ 86 ರನ್​ಗಳಿಸಿ ತಂಡದ ಗರಿಷ್ಠ ಸ್ಕೋರರ್​ ಎನಿಸಿಕೊಂಡರು. ಶಕಿಬ್ ಅಲ್ ಹಸನ್​ 36 ಎಸೆತಗಳಲ್ಲಿ 30, ತಮೀಮ್ ಇಕ್ಬಾಲ್​ 11ರನ್​, ಮಹ್ಮುದುಲ್ಲಾ ಅಜೇಯ 29 ರನ್​ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್​ಗಳು ಎರಡಂಕಿ ಮೊತ್ತವನ್ನು ದಾಟಲಿಲ್ಲ.

ಅಫ್ಘಾನ್​ ಪರ ರಶೀದ್ ಖಾನ್​ 37ಕ್ಕೆ 3, ಮೊಹಮ್ಮದ್ ನಬಿ 29ಕ್ಕೆ 2, ಅಜ್ಮತುಲ್ಲಾ ಒಮಾರ್ಝೈ 29ಕ್ಕೆ1, ಫಜಲ್ಹಾಕ್​ ಫರೂಕಿ 33ಕ್ಕೆ1 ವಿಕೆಟ್ ಪಡೆದರು.

193 ರನ್​ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಅಫ್ಘಾನಿಸ್ತಾನ ತಂಡ 40.1 ಓವರ್​ಗಳಲ್ಲಿ 3 ವಿಕೆಟ್​ ಕಳೆದುಕೊಂಡು ಗುರಿ ತಲುಪಿತು.

ಗುರ್ಬಜ್​ 110 ಎಸೆತಗಳಲ್ಲಿ 7 ಬೌಂಡರಿ ಮತ್ತು 4 ಸಿಕ್ಸರ್​ಗಳ ಸಹಿತ 106 ರನ್​ಗಳಿಸಿ ಗೆಲುವಿನ ರೂವಾರಿಯಾದರು. ಇವರಿಗೆ ತಕ್ಕ ಸಾಥ್ ನೀಡಿದ ರಿಯಾಜ್ ಹಸನ್​ 35, ರಹ್ಮತ್​ ಶಾ 47ರನ್​ ಗಳಿಸಿದರು.

ಎರಡು ತಂಡಗಳ ನಡುವಿನ 2 ಪಂದ್ಯಗಳ ಟಿ20 ಸರಣಿ ಮಾರ್ಚ್​ 3ರಿಂದ ಆರಂಭವಾಗಲಿದೆ.

ಇದನ್ನೂ ಓದಿ: 3ನೇ ಕ್ರಮಾಂಕ ನನಗೆ ಉತ್ತಮವಾಗಿ ಹೊಂದುತ್ತದೆ: ಕೊಹ್ಲಿ ಸ್ಥಾನದ ಮೇಲೆ ಕಣ್ಣಿಟ್ಟ ಅಯ್ಯರ್!

ABOUT THE AUTHOR

...view details