ದುಬೈ :ಬಾಂಗ್ಲಾದೇಶದ ಆಲ್ರೌಂಡರ್ ಶಕಿಬ್ ಅಲ್ ಹಸನ್ ಹ್ಯಾಮ್ಸ್ಟಿಂಗ್ ಗಾಯಕ್ಕೊಳಗಾಗಿದ್ದು, ಪ್ರಸ್ತುತ ಟಿ20 ವಿಶ್ವಕಪ್ನಿಂದ ಹೊರ ಬಿದ್ದಿದ್ದಾರೆ ಎಂದು ಭಾನುವಾರ ಐಸಿಸಿ ದೃಢಪಡಿಸಿದೆ.
ಶಕಿಬ್ ಶುಕ್ರವಾರ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಎಡ ತೊಡೆಯ ಸ್ನಾಯುಸೆಳೆತಕ್ಕೆ ಒಳಗಾಗಿದ್ದರು. ವೈದ್ಯಕೀಯ ಪರೀಕ್ಷೆ ವೇಳೆ ಅವರಿಗೆ ಗ್ರೇಡ್ 1 ಗಾಯವಾಗಿರುವುದು ದೃಢಪಟ್ಟಿದೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಮುಖ್ಯ ಫಿಜಿಸಿಯನ್ ದೆಬಾಶಿಶ್ ಚೌದರಿ ಐಸಿಸಿ ಬಿಡುಗಡೆ ಮಾಡಿರುವ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ.
ಈ ಕಾರಣದಿಂದ ಶಕಿಬ್ ಟೂರ್ನಮೆಂಟ್ನಲ್ಲಿ ಬಾಂಗ್ಲಾದೇಶ ಆಡಲಿರುವ ಮುಂದಿನ 2 ಪಂದ್ಯಗಳಿಂದ ಹೊರ ಬಿದ್ದಿದ್ದಾರೆ ಎಂದು ಚೌದರಿ ತಿಳಿಸಿದ್ದಾರೆ. ಐಸಿಸಿ ಕೂಡ ಈ ಕುರಿತು ಟ್ವೀಟ್ ಮಾಡಿದ್ದು, "ಬಾಂಗ್ಲಾದೇಶ ತಂಡಕ್ಕೆ ಬಹುದೊಡ್ಡ ಹೊಡೆತ, ಸ್ಟಾರ್ ಆಲ್ರೌಂಡರ್ ಶಕಿಬ್ ಅಲ್ ಹಸನ್ ಐಸಿಸಿ ಟಿ20 ವಿಶ್ವಕಪ್ 2021ರಿಂದ ಹೊರ ಬಿದ್ದಿದ್ದಾರೆ" ತಿಳಿಸಿದೆ.