ಕರ್ನಾಟಕ

karnataka

ETV Bharat / sports

ರಬಾಡಾ, ಶಮ್ಸಿ ಮಾರಕ ಬೌಲಿಂಗ್: ಬಾಂಗ್ಲಾದೇಶವನ್ನ 84 ರನ್​ಗಳಿಗೆ ನಿಯಂತ್ರಿಸಿದ ಹರಿಣ ಪಡೆ -

ದಕ್ಷಿಣ ಆಫ್ರಿಕಾ ಪರ ಕಗಿಸೋ ರಬಾಡ 20ಕ್ಕೆ 3, ತಬ್ರೈಜ್ ಶಮ್ಸಿ 21ಕ್ಕೆ 2,, ಎನ್ರಿಚ್ ನಾರ್ಕಿಯಾ 8ಕ್ಕೆ 3 ಹಾಗೂ ಪ್ರೆಟೋರಿಯಸ್​ 11ಕ್ಕೆ1 ವಿಕೆಟ್ ಪಡೆದು ಬಾಂಗ್ಲಾದೇಶವನ್ನು ಅಲ್ಪ ಮೊತ್ತಕ್ಕೆ ಆಲೌಟ್ ಆಗುವಂತೆ ಮಾಡಿದರು.

South Africa vs Bangladesh super 12
ಬಾಂಗ್ಲಾದೇಶ vs ದಕ್ಷಿಣ ಆಫ್ರಿಕಾ

By

Published : Nov 2, 2021, 5:26 PM IST

ಅಬುಧಾಬಿ: ಕಗಿಸೋ ರಬಾಡ ಮತ್ತು ತಬ್ರೈಜ್ ಶಮ್ಸಿ ಅವರ ಮನಮೋಹಕ ಬೌಲಿಂಗ್ ನೆರವಿನಿಂದ ಸೆಮಿಫೈನಲ್​ ಪ್ರವೇಶಿಸಲು ಪ್ರಮುಖವಾಗಿದ್ದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಬಾಂಗ್ಲಾದೇಶವನ್ನು ಕೇವಲ 84 ರನ್​ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ.

ಸೂಪರ್​ 12ನಲ್ಲಿ ತಮ್ಮ 4ನೇ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾದೇಶಕ್ಕೆ ರಬಡಾ ಪವರ್​ ಪ್ಲೇನಲ್ಲೇ ಆಘಾತ ನೀಡಿದರು. ಅವರು ಇನ್ನಿಂಗ್ಸ್​ನ 4ನೇ ಓವರ್​ನಲ್ಲಿ ಮೊಹಮ್ಮದ್​ ನಯೀಮ್(9) ಮತ್ತು ಸೌಮ್ಯ ಸರ್ಕಾರ್(0) ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ನಂತರ ಬಂದ ಮುಶ್ಪೀಕರ್ ರಹೀಮ್ ಕೂಡ ಖಾತೆ ತೆರೆಯದೇ ರಬಾಡ ಬೌಲಿಂಗ್​ನಲ್ಲಿ ಹೆಂಡ್ರಿಕ್ಸ್ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದರು.

ವಿಕೆಟ್ ಕೀಪರ್ ಲಿಟನ್​ ದಾಸ್​ 36 ಎಸೆತಗಳಲ್ಲಿ 24 ಮತ್ತು ಮೆಹೆದಿ ಹಸನ್​ 25 ಎಸೆತಗಳಲ್ಲಿ 27 ರನ್​ಗಳಿಸಿದ್ದು ಬಿಟ್ಟರೆ ಯಾವೊಬ್ಬ ಬ್ಯಾಟ್ಸ್​ಮನ್​ ದಕ್ಷಿಣ ಆಫ್ರಿಕಾ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲವಾಯಿತು.

​ನಾಯಕ ಮಹಮದುಲ್ಲಾ 3, ಶಮೀಮ್ ಹೊಸೈನ್ 11, ತಸ್ಕಿನ್ ಅಹ್ಮದ್​ 3, ಆಫೀಫ್ ಹುಸೇನ್ ಮತ್ತು ನಸುಮ್ ಅಹ್ಮದ್​ ಖಾತೆ ತೆರೆಯದೇ ನಿರ್ಗಮಿಸಿದರು.

ದಕ್ಷಿಣ ಆಫ್ರಿಕಾ ಪರ ಕಗಿಸೋ ರಬಾಡ 20ಕ್ಕೆ 3, ತಬ್ರೈಜ್ ಶಮ್ಸಿ 21ಕ್ಕೆ 2,, ಎನ್ರಿಚ್ ನಾರ್ಕಿಯಾ 8ಕ್ಕೆ 3 ಹಾಗೂ ಪ್ರೆಟೋರಿಯಸ್​ 11ಕ್ಕೆ1 ವಿಕೆಟ್ ಪಡೆದು ಬಾಂಗ್ಲಾದೇಶವನ್ನು ಅಲ್ಪ ಮೊತ್ತಕ್ಕೆ ಆಲೌಟ್ ಆಗುವಂತೆ ಮಾಡಿದರು.

ಇದನ್ನು ಓದಿ:ಟಿ20 ವಿಶ್ವಕಪ್​ನಲ್ಲಿ ವೈಫಲ್ಯ: ಕೊಹ್ಲಿ ODI ನಾಯಕತ್ವದಲ್ಲಿ ಮುಂದುವರಿಯುವುದು ಅನುಮಾನ!

ABOUT THE AUTHOR

...view details