ಢಾಕಾ(ಬಾಂಗ್ಲಾದೇಶ): ಶೇರ್ ಬಾಂಗ್ಲಾ ರಾಷ್ಟ್ರೀಯ ಮೈದಾನದಲ್ಲಿ ನಡೆದ ಫೈನಲ್ ಟಿ-20 ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲ್ಯಾಂಡ್ ತಂಡ 27 ರನ್ಗಳ ಅಂತರದ ಗೆಲುವು ಸಾಧಿಸಿದೆ.
ಐದು ಪಂದ್ಯಗಳ ಟೂರ್ನಿಯಲ್ಲಿ ಅಮೋಘ ಸಾಧನೆ ಮಾಡಿರುವ ಬಾಂಗ್ಲಾದೇಶ 3-2 ಅಂತರದಿಂದ ಸರಣಿ ಗೆಲುವು ದಾಖಲಿಸಿದೆ. ಇನ್ನೊಂದೆಡೆ, ಬಾಂಗ್ಲಾ ತಂಡಕ್ಕಿದು ಕಿವೀಸ್ ವಿರುದ್ಧ ದೊರೆತ ಚೊಚ್ಚಲ ಟಿ-20 ಸರಣಿ ಗೆಲುವಾಗಿದೆ.
ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲ್ಯಾಂಡ್ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 161ರನ್ ಗಳಿಸಿತು. ತಂಡದ ಪರ ಆರಂಭಿಕ ಆಟಗಾರ ಫಿನ್ ಅಲೆನ್ ಸ್ಫೋಟಕ 41 ರನ್ ಹಾಗೂ ಕ್ಯಾಪ್ಟನ್ ಲಾಥಮ್ ಅಜೇಯ 50 ರನ್ಗಳಿಕೆ ಮಾಡಿದರು. ಇವರಿಗೆ ನಿಕೋಲಸ್ (20 ರನ್) ಹಾಗೂ ರವೀಂದ್ರ (17) ರನ್ ಗಳಿಸಿ ಉತ್ತಮ ಸಾಥ್ ನೀಡಿದರು.
ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಕ್ಯಾಪ್ಟನ್ ಲಾಥಮ್ 162 ರನ್ಗಳ ಗುರಿ ಬೆನ್ನತ್ತಿದ್ದ ಬಾಂಗ್ಲಾ ಆರಂಭದಲ್ಲೇ ಆಘಾತಕ್ಕೊಳಗಾಯಿತು. ಲಿಟನ್ ದಾಸ್ 10 ರನ್ಗಳಿಕೆ ಮಾಡಿದ್ರೆ, ಇದಾದ ಬಳಿಕ ಬಂದ ಸೌಮ್ಯ ಸರ್ಕಾರ್ 4 ರನ್, ಮುಸ್ತಫಿಜುರ್ 3 ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದರು. 23 ರನ್ಗಳಿಕೆ ಮಾಡಿದ್ದ ಮೊಹಮ್ಮದ್ ನಯೀಮ್ ಕೂಡ ಬೆನ್ ಸಿರ್ಸಾ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಒಂದಾದ ಹುಸೈನ್ (49 ರನ್) ಹಾಗೂ ಕ್ಯಾಪ್ಟನ್ ಮುಹ್ಮದುಲ್ಲಾ (23 ರನ್) ತಂಡಕ್ಕೆ ಆಸರೆಯಾದರೂ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲವಾದರು.
ಇದನ್ನೂ ಓದಿ: ನಾಳೆ ಮ್ಯಾಂಚೆಸ್ಟರ್‌ನಿಂದ ದುಬೈಗೆ ಸಿಎಸ್‌ಕೆ ಆಟಗಾರರ ಪ್ರಯಾಣ?: ಸಿಇಒ ಹೇಳಿದ್ದೇನು..
ತಂಡ ಕೊನೆಯದಾಗಿ 8 ವಿಕೆಟ್ ನಷ್ಟಕ್ಕೆ 134 ರನ್ ಗಳಿಕೆ ಮಾಡುವಲ್ಲಿ ಮಾತ್ರ ಶಕ್ತವಾಯಿತು. ಹೀಗಾಗಿ 27ರನ್ಗಳ ಅಂತರದ ಸೋಲು ಕಂಡಿದೆ. ಈಗಾಗಲೇ ಸರಣಿ ಕೈವಶ ಮಾಡಿಕೊಂಡಿದ್ದ ಕಾರಣ ಬಾಂಗ್ಲಾದೇಶ ಶಕೀಬ್ ಅಲ್ ಹಸನ್, ಮುಸ್ತುಫಿಜುರ್ಗೆ ವಿಶ್ರಾಂತಿ ನೀಡಿತ್ತು.