ಕರ್ನಾಟಕ

karnataka

ETV Bharat / sports

2ನೇ ಟೆಸ್ಟ್​.. ಬಾಂಗ್ಲಾದೇಶದ ವಿರುದ್ಧ ಗೆಲುವಿನ ಸನಿಹದಲ್ಲಿ ಶ್ರೀಲಂಕಾ - Bangladesh need 260 runs

ಇದೀಗ ಲಿಟನ್ ದಾಸ್​(14) ಮತ್ತು ಮೆಹಿದಿ ಹಸನ್(4) ಕ್ರೀಸ್​ನಲ್ಲಿದ್ದಾರೆ. ಬಾಂಗ್ಲಾದೇಶ ಗೆಲ್ಲಲು 260 ರನ್​ಗಳ ಅಗತ್ಯವಿದೆ, ಲಂಕಾಗೆ 5 ವಿಕೆಟ್​ ಬೇಕಾಗಿದೆ. ನಾಳೆ ಅಂತಿಮ ದಿನವಾಗಿದ್ದು, ಟೆಸ್ಟ್​ ಪಂದ್ಯ ರೋಚಕ ಹಂತಕ್ಕೆ ತಲುಪಲಿದಿಯೇ ಎಂದು ಕಾದು ನೋಡಬೇಕಿದೆ..

ಬಾಂಗ್ಲಾದೇಶ ವಿರುದ್ಧ ಗೆಲುವಿನ ಸನಿಹದಲ್ಲಿ ಶ್ರೀಲಂಕಾ
ಬಾಂಗ್ಲಾದೇಶ ವಿರುದ್ಧ ಗೆಲುವಿನ ಸನಿಹದಲ್ಲಿ ಶ್ರೀಲಂಕಾ

By

Published : May 2, 2021, 9:12 PM IST

ಪಲ್ಲೆಕೆಲೆ : ಅತಿಥೇಯ ಶ್ರೀಲಂಕಾ ತಂಡ ನೀಡಿರುವ 437 ರನ್​ಗಳ ಬೃಹತ್ ಮೊತ್ತವನ್ನು ಬೆನ್ನತ್ತಿರುವ ಬಾಂಗ್ಲಾದೇಶ ತಂಡ 4ನೇ ದಿನದಂತ್ಯಕ್ಕೆ 5 ವಿಕೆಟ್ ಕಳೆದುಕೊಂಡಿದ್ದು 177 ರನ್​ಗಳಿಸಿದೆ.

3ನೇ ದಿನ 17ರನ್​ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ಲಂಕಾ ನಾಲ್ಕನೇ ದಿನವಾದ ಇಂದು 190 ರನ್​ಗಳಿಸಿದ್ದ ವೇಳೆ ಡಿಕ್ಲೇರ್ ಘೋಷಿಸಿಕೊಂಡು ಬಾಂಗ್ಲಾದೇಶಕ್ಕೆ 437ರನ್​ಗಳ ಗುರಿ ನೀಡಿತು. ನಾಯಕ ಕರುಣರತ್ನೆ 66 ರನ್​ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿದರು.

ಬೃಹತ್ ಮೊತ್ತವನ್ನು ಬೆನ್ನಟ್ಟಿದ ಬಾಂಗ್ಲಾದೇಶದ ವೇಗದ ಆಟಕ್ಕೆ ಮುಂದಾಗಿ ಪ್ರಮುಖ 5 ವಿಕೆಟ್ ಕಳೆದುಕೊಂಡಿದೆ. ತಮೀಮ್​ ಇಕ್ಬಾಲ್ 24, ಸೈಫ್ ಹಸನ್ 34, ನಜ್ಮುಲ್ ಹುಸೇನ್ 26, ಮೊಮಿನುಲ್ ಹಕ್ 32, ರಹೀಮ್ 40 ರನ್​ಗಳಿಸಿ ವಿಕೆಟ್​ ಒಪ್ಪಿಸಿದರು.

ಇದೀಗ ಲಿಟನ್ ದಾಸ್​(14) ಮತ್ತು ಮೆಹಿದಿ ಹಸನ್(4) ಕ್ರೀಸ್​ನಲ್ಲಿದ್ದಾರೆ. ಬಾಂಗ್ಲಾದೇಶ ಗೆಲ್ಲಲು 260 ರನ್​ಗಳ ಅಗತ್ಯವಿದೆ, ಲಂಕಾಗೆ 5 ವಿಕೆಟ್​ ಬೇಕಾಗಿದೆ. ನಾಳೆ ಅಂತಿಮ ದಿನವಾಗಿದ್ದು, ಟೆಸ್ಟ್​ ಪಂದ್ಯ ರೋಚಕ ಹಂತಕ್ಕೆ ತಲುಪಲಿದಿಯೇ ಎಂದು ಕಾದು ನೋಡಬೇಕಿದೆ. ಇದಕ್ಕೂ ಮೊದಲು ನಡೆದಿದ್ದ ಟೆಸ್ಟ್​ ಪಂದ್ಯ ನೀರಸ ಡ್ರಾನಲ್ಲಿ ಅಂತ್ಯಗೊಂಡಿತ್ತು.

ಇದನ್ನು ಓದಿ:ಅಂದು ಆರ್ಡರ್​ ಮಾಡಿದ್ದ ತ್ರೀಡಿ ಗ್ಲಾಸ್​ ಕೆಲಸ ಮಾಡುತ್ತಿದೆ.. ರಾಯುಡು ಆಟಕ್ಕೆ ಸೆಹ್ವಾಗ್ ಮೆಚ್ಚುಗೆ

ABOUT THE AUTHOR

...view details