ವೆಸ್ಟ್ ಇಂಡೀಸ್ ಪ್ರವಾಸದ ಟಿ20 ಪಂದ್ಯಕ್ಕಿ ಜುಲೈ 3 ರಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ತಂಡವನ್ನು ಪ್ರಕಟಿಸಿದೆ. 2007 ರಲ್ಲಿ ಧೋನಿ ಕೈಗೆ ಟಿ20 ನಾಯಕತ್ವವನ್ನು ಕೊಟ್ಟು ಹೊಸ ತಂಡ ರಚಿಸಿದಂತೆ ಈ ಬಾರಿ ನಿರ್ಧಾರ ಮಾಡಲಾಗಿದೆ. ಅನುಭವಿಗಳಿಗ ರೆಸ್ಟ್ ಅಥವಾ ಇನ್ನು ಮುಂದೆ ಟಿ20, ಏಕದಿನ ಮತ್ತು ಟೆಸ್ಟ್ಗೆ ಬೇರೆ ಬೇರೆ ತಂಡವನ್ನು ಮಾಡುತ್ತಾರಾ ಎಂಬುದಕ್ಕೆ ಯಾವುದೇ ಸ್ಪಷ್ಟನೆ ಇಲ್ಲ.
ಪ್ರಕಟಿತ ತಂಡದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ಅವಕಾಶ ನೀಡಲಾಗಿಲ್ಲ. ಬಹಳ ಸಮಯದಿಂದ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದ ಸಂಜು ಸ್ಯಾಮ್ಸನ್ಗೆ ಅವಕಾಶ ಸಿಕ್ಕಿದೆ. ಟಿ 20 ಅಗ್ರ ಶ್ರೇಯಾಂಕದ ಬ್ಯಾಟರ್ ಸೂರ್ಯ ಕುಮಾರ್ ಯಾದವ್ಗೆ ಉಪನಾಯಕನ ಪಟ್ಟವನ್ನು ಕಟ್ಟಲಾಗಿದ್ದು, ಗುಜರಾತ್ ಟೈಟಾನ್ಸ್ನ ಯಶಸ್ವಿ ನಾಯಕ ಹಾರ್ದಿಕ್ ಪಾಂಡ್ಯಗೆ ಟಿ20 ನಾಯಕತ್ವ ಮುಂದುವರೆಸಲಾಗಿದೆ.
2023ರ ಐಪಿಎಲ್ ಜೊತೆಗೆ ದೇಶೀಯ ತಂಡದಲ್ಲಿ ಮಿಂಚಿದ ಆಟಗಾರರಿಗೆ ತಂಡದಲ್ಲಿ ಮಣೆ ಹಾಕಲಾಗಿದೆ. ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ಮುಖೇಶ್ ಕುಮಾರ್, ರವಿ ಬಿಷ್ಣೋಯ್ ಸೇರಿದಂತೆ ಹಲವು ಶ್ರೇಷ್ಠ ಆಟಗಾರರು ಈ ತಂಡದಲ್ಲಿದ್ದಾರೆ. ಆದರೆ, ಅದ್ಭುತ ಬ್ಯಾಟ್ಸ್‌ಮನ್ ನಿತೀಶ್ ರಾಣಾ ಈ ಟಿ20 ತಂಡದಲ್ಲಿ ಸ್ಥಾನ ಪಡೆದಿಲ್ಲ. ಇಂಡಿಯನ್ ಪ್ರೀಮಿಯರ್ ಲೀಗ್ 2023 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕತ್ವದಲ್ಲಿ ನಿತೀಶ್ ರಾಣಾ 14 ಪಂದ್ಯಗಳಲ್ಲಿ 31.77 ಸರಾಸರಿ ಮತ್ತು 140.96 ಸ್ಟ್ರೈಕ್ ರೇಟ್‌ನಲ್ಲಿ 413 ರನ್ ಗಳಿಸಿದ್ದರು.