ಮುಲ್ತಾನ್(ಪಾಕಿಸ್ತಾನ):ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ 5 ವಿಕೆಟ್ಗಳ ಭರ್ಜರಿ ಗೆಲುವು ದಾಖಲು ಮಾಡಿದೆ. ಇದರ ಜೊತೆಗೆ ತಂಡದ ಕ್ಯಾಪ್ಟನ್ ಬಾಬರ್ ಆಜಂ ವಿಶ್ವದಾಖಲೆಯ ಶತಕ ಸಿಡಿಸಿ, ಕಿಂಗ್ ಕೊಹ್ಲಿ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ. ವೆಸ್ಟ್ ಇಂಡೀಸ್ ನೀಡಿದ್ದ 306ರನ್ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ ಕೇವಲ 5 ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ಮುಟ್ಟಿತ್ತು. ಪಂದ್ಯದಲ್ಲಿ ಕ್ಯಾಪ್ಟನ್ ಬಾಬರ್ ಆಜಂ 103ರನ್ ಸಿಡಿಸಿದರು. ಈ ಮೂಲಕ ಏಕದಿನದಲ್ಲಿ ಸತತವಾಗಿ ಮೂರನೇ ಶತಕ ಸಿಡಿಸಿರುವ ಸಾಧನೆ ಮಾಡಿರುವ ಬಾಬರ್, ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಕ್ರಮವಾಗಿ 114, 105ರನ್ಗಳಿಸಿದ್ದರು.
ಈ ಹಿಂದೆ ಕೂಡ 2016ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಬಾಬರ್ ಕ್ರಮವಾಗಿ 120,123 ಹಾಗೂ 117ರನ್ಗಳಿಕೆ ಮಾಡಿದ್ದರು. ಇದೀಗ ಮತ್ತೊಮ್ಮೆ ಸತತವಾಗಿ ಮೂರು ಶತಕ ಸಾಧನೆ ಮಾಡಿದ್ದಾರೆ. ವಿಶೇಷವೆಂದರೆ ಏಕದಿನದಲ್ಲಿ ಬಾಬರ್ ಬ್ಯಾಟ್ನಿಂದ ಸಿಡಿದ 17ನೇ ಶತಕ ಇದಾಗಿದೆ.