ಅಬುಧಾಬಿ: ಪಾಕಿಸ್ತಾನ ಆರಂಭಿಕರಾದ ಮೊಹಮ್ಮದ್ ರಿಜ್ವಾನ್ ಮತ್ತು ಬಾಬರ್ ಅಜಮ್ ಜೋಡಿ ಟಿ20 ಕ್ರಿಕೆಟ್ನಲ್ಲಿ 5ನೇ ಬಾರಿಗೆ ಮೊದಲ ವಿಕೆಟ್ಗೆ ಶತಕದ ಜೊತೆಯಾಟ ನೀಡುವ ಮೂಲಕ ದಾಖಲೆ ಬರೆದಿದ್ದಾರೆ.
ಮಂಗಳವಾರ ಟಿ20 ವಿಶ್ವಕಪ್ನ ಸೂಪರ್ 12 ಪಂದ್ಯದಲ್ಲಿ ಪಾಕಿಸ್ತಾನ ಜೋಡಿ 113 ರನ್ಗಳ ಆರಂಭಿಕ ಜೊತೆಯಾಟ ನೀಡುವ ಮೂಲಕ 5ನೇ ಬಾರಿಗೆ ಶತಕದ ಜೊತೆಯಾಟ ನೀಡಿ ಭಾರತದ ರೋಹಿತ್ ಶರ್ಮಾ-ಶಿಖರ್ ಧವನ್ ಜೋಡಿ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು. ಭಾರತೀಯ ಜೋಡಿ ಚುಟುಕು ಕ್ರಿಕೆಟ್ನಲ್ಲಿ 4 ಬಾರಿ ಶತಕದ ಜೊತೆಯಾಟ ನಡೆಸಿದ್ದಾರೆ.
ನಮೀಬಿಯಾ ಬೌಲರ್ಗಳೆದುರು ಪಾಕಿಸ್ತಾನ ಜೋಡಿ ಆರಂಭದಲ್ಲಿ ಪರದಾಡಿದರೂ ನಂತರ ಸ್ಫೋಟಕ ಬ್ಯಾಟಿಂಗ್ ಮಾಡಿದರು. ಬಾಬರ್ 49 ಎಸೆತಗಳಲ್ಲಿ 70 ರನ್ಗಳಿಸಿದರೆ, ರಿಜ್ವಾನ್ 50 ಎಸೆತಗಳಲ್ಲಿ 8 ಬೌಂಡರಿ ಮತ್ತು 4 ಸಿಕ್ಸರ್ಗಳ ಸಹಿತ ಅಜೇಯ 79 ರನ್ಗಳಿಸಿದರು.