ದುಬೈ: ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಅದ್ಭುತ ಪ್ರದರ್ಶನ ತೋರಿದ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ 3 ಪಂದ್ಯಗಳನ್ನು ಸರಣಿಯನ್ನು 2-1ರಲ್ಲಿ ಗೆಲ್ಲುವುದಕ್ಕೆ ನೆರವಾಗಿದ್ದರು. ಈ ಸರಣಿಯಲ್ಲಿ ಅದ್ಭುತ ಪ್ರದರ್ಶನ ಶ್ರೇಯಾಂಕ ಪಟ್ಟಿಯಲ್ಲಿ ಅವರ ಅಗ್ರಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.
ಈಗಾಗಲೇ ಅಗ್ರಸ್ಥಾನದಲ್ಲಿರುವ ಬಾಬರ್, ಆಸೀಸ್ ವಿರುದ್ಧದ ಸರಣಿಯ ಕೊನೆಯ 2 ಪಂದ್ಯಗಳಲ್ಲಿ ಕ್ರಮವಾಗಿ 105 ಮತ್ತು 115 ರನ್ಗಳಿಸಿದ್ದರು. ಇದು ಅವರ ಏಕದಿನ ಶ್ರೇಯಾಂಕದ ರೇಟಿಂಗ್ ಅಂಕವನ್ನು 891ಕ್ಕೆ ಏರಿಕೆಯಾಗಲು ನೆರವಾಗಿತ್ತು. ಈ ಮೂಲಕ ಸಾರ್ವಕಾಲಿಕ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ 15ನೇ ಸ್ಥಾನಕ್ಕೇರಿದ್ದು, ಭಾರತದ ಬ್ಯಾಟಿಂಗ್ ದಂತಕತೆ ಸಚಿನ್ ತೆಂಡೂಲ್ಕರ್(887) ಅವರನ್ನು ಹಿಂದಿಕ್ಕಿದರು.