ಕರಾಚಿ: ಪಾಕಿಸ್ತಾನದ ಕ್ಯಾಪ್ಟನ್ ಬಾಬರ್ ಅಜಮ್ ಅಧಿಕಾರವಿಲ್ಲದ ನಾಯಕನಾಗಿದ್ದಾನೆಂದು ಇತ್ತೀಚೆಗೆ ಪಾಕ್ ಮಾಜಿ ಕ್ಯಾಪ್ಟನ್ ಶೋಯೆಬ್ ಮಲಿಕ್ ಟೀಕೆ ವ್ಯಕ್ತಪಡಿಸಿದ್ದರು. ಇದೀಗ ಅವರ ಹೇಳಿಕೆಗೆ ಬಾಬರ್ ತಿರುಗೇಟು ನೀಡಿದ್ದಾರೆ.
ತಂಡ ಮತ್ತು ಆಯ್ಕೆ ವಿಷಯಗಳಲ್ಲಿ ತನಗೆ ಸಂಪೂರ್ಣ ನಿಯಂತ್ರಣವಿದೆ. ಮುಖ್ಯ ಕೋಚ್ ಮಿಸ್ಬಾ -ಉಲ್-ಹಕ್ ಅವರಿಂದ ನಿರ್ದೇಶನ ಪಡೆದುಕೊಳ್ಳುತ್ತಿರುತ್ತೇನೆ ಎಂದಿದ್ದಾರೆ. ವರ್ಚುಯಲ್ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಬಾಬರ್, ನನಗೆ ಅರ್ಥವಾಗುತ್ತಿಲ್ಲ. ಸುದ್ದಿಗೋಷ್ಠಿ ವೇಳೆ ನನಗೆ ಅಧಿಕಾರವಿಲ್ಲ ಮತ್ತು ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರಶ್ನೆ ಮಾಡುತ್ತಾರೆ. ಆದರೆ, ಇದು ಕೊನೆಗೊಳ್ಳಬೇಕು ಎಂದರು.
ಇದನ್ನೂ ಓದಿ: ಚೆನ್ನೈ ವರ್ಸಸ್ ಹೈದರಾಬಾದ್: ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಡೇವಿಡ್ ಪಡೆ
ನಾನು ತಂಡದ ಮೇಲೆ ನಿಯಂತ್ರಣ ಹೊಂದಿದ್ದೇನೆ. ತಂಡದ ಆಯ್ಕೆ ಹಾಗೂ ಇತರ ವಿಷಯಗಳಲ್ಲಿ ಮಾಹಿತಿ ನೀಡುತ್ತೇನೆ. ಮೈದಾನದಲ್ಲಿ ಎಲ್ಲವನ್ನೂ ನಿಭಾಯಿಸುತ್ತೇನೆ. ಆಡುವ 11ರ ಬಳಗದ ಬಗ್ಗೆ ನಾನೇ ಫೈನಲ್ ನಿರ್ಧಾರ ಕೈಗೊಳ್ಳುತ್ತೇನೆ ಎಂದಿದ್ದಾರೆ. ನಾಯಕನಾಗಿ ನನ್ನ ಜವಾಬ್ದಾರಿಗಳ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ತಂಡದ ಮುಖ್ಯ ಕೋಚ್ನೊಂದಿಗೆ ನನಗೆ ಯಾವುದೇ ಸಮಸ್ಯೆಗಳಿಲ್ಲ ಎಂದಿದ್ದಾರೆ.
ಆಡಳಿತ ಮಂಡಳಿ ತಂಡದ ಪ್ರತಿಯೊಬ್ಬ ಆಟಗಾರನ ಬೆಂಬಲಕ್ಕಿದೆ. ಅದು ನನಗೆ ಸಂತೋಷ ನೀಡಿದೆ ಎಂದರು. ಗುರುವಾರದಿಂದ ಜಿಂಬಾಬ್ವೆ ವಿರುದ್ಧ ಟೆಸ್ಟ್ ಸರಣಿ ಆರಂಭಗೊಳ್ಳುತ್ತಿದ್ದು, ತಂಡಕ್ಕೆ ಇದು ಸುಲಭ ಕೆಲಸವಲ್ಲ. ಉತ್ತಮ ಪ್ರದರ್ಶನ ನೀಡುವ ಇರಾದೆ ಇದೆ ಎಂದರು. ಟೆಸ್ಟ್ ಶ್ರೇಯಾಂಕದಲ್ಲಿ ಜಿಂಬಾಬ್ವೆ ಕಡಿಮೆ ಅಂತರ ಹೊಂದಿರಬಹುದು. ಆದರೆ ಯಾವುದೇ ತಂಡವನ್ನ ಲಘುವಾಗಿ ತೆಗೆದುಕೊಳ್ಳಲಾಗುವುದಿಲ್ಲ ಎಂದರು.