ಕರ್ನಾಟಕ

karnataka

ETV Bharat / sports

ಬಾಬರ್​​ ಆಜಂ ವಿಶ್ವದ ಅತ್ಯುತ್ತಮ ಬ್ಯಾಟರ್​​: ವಿರಾಟ್​ ಕೊಹ್ಲಿ - ಏಷ್ಯಾಕಪ್​​​ ಟೂರ್ನಿ

ಪಾಕಿಸ್ತಾನದ ಕ್ಯಾಪ್ಟನ್ ಬಾಬರ್ ಆಜಂ ವಿಶ್ವದ ಅತ್ಯುತ್ತಮ ಬ್ಯಾಟರ್​ ಎಂದು ವಿರಾಟ್​​ ಕೊಹ್ಲಿ ಗುಣಗಾನ ಮಾಡಿದ್ದಾರೆ.

Babar Azam Best Batter In The World
Babar Azam Best Batter In The World

By

Published : Aug 27, 2022, 6:33 PM IST

ದುಬೈ(ಯುಎಇ):ಸಾಂಪ್ರದಾಯಿಕ ಎದುರಾಳಿ ತಂಡಗಳಾದ ಭಾರತ ಮತ್ತು ಪಾಕಿಸ್ತಾನ ನಾಳೆ ಏಷ್ಯಾಕಪ್​​​ ಟಿ20 ಟೂರ್ನಿಯಲ್ಲಿ ಮುಖಾಮುಖಿಯಾಗಲಿವೆ. ಈ ಹೈವೋಲ್ಟೇಜ್​ ಪಂದ್ಯ ವೀಕ್ಷಣೆಗೆ ಕೋಟ್ಯಂತರ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಬಹುನೀರೀಕ್ಷಿತ ಪಂದ್ಯ ಆರಂಭಗೊಳ್ಳುವುದಕ್ಕೂ ಮುನ್ನ ಭಾರತ ತಂಡದ ಮಾಜಿ ನಾಯಕ ವಿರಾಟ್​​ ಕೊಹ್ಲಿ ಅವರು ಪಾಕಿಸ್ತಾನ ತಂಡದ ಕ್ಯಾಪ್ಟನ್​ ಬಾಬರ್​​ ಆಜಂ ಅವರ ಕುರಿತು ಗುಣಗಾನ ಮಾಡಿದ್ದಾರೆ.

2019ರ ವಿಶ್ವಕಪ್​​ ವೇಳೆ ಬಾಬರ್​ ಆಜಂ ಅವರನ್ನು ತಾವು ಮೊದಲ ಸಲ ಭೇಟಿಯಾಗಿದ್ದಕ್ಕಾಗಿ ಕೊಹ್ಲಿ ಹೇಳಿಕೊಂಡಿದ್ದು, ಅವರು ಯಾವಾಗಲೂ ಗೌರವದಿಂದ ನಡೆದುಕೊಂಡಿದ್ದಾರೆ. ಬ್ಯಾಟಿಂಗ್​​ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಈ ಪ್ಲೇಯರ್​​ ಪ್ರಸ್ತುತ ಮೂರು ಫಾರ್ಮೆಟ್​​​​ನಲ್ಲಿ ವಿಶ್ವದ ಅಗ್ರ ಬ್ಯಾಟ್ಸ್​ಮನ್​​ ಎಂದು ಹೇಳಿದ್ದಾರೆ.

ಇದನ್ನೂ ಓದಿ:Asia Cup 2022: ನಾಳೆ ಹೈವೋಲ್ಟೇಜ್​ ಪಂದ್ಯ.. ಮಾತುಕತೆಯಲ್ಲಿ ಮಗ್ನರಾದ ಬಾಬರ್​​-ರೋಹಿತ್​

ವಿಶ್ವ ಕ್ರಿಕೆಟ್​​ಗೆ ಅಗತ್ಯವಿರುವ ರೀತಿಯಲ್ಲೇ ಅವರು ಬ್ಯಾಟ್​ ಮಾಡ್ತಿದ್ದು, 2019ರ ವಿಶ್ವಕಪ್​​ನಲ್ಲಿ ಮ್ಯಾಂಚೆಸ್ಟರ್​​ನಲ್ಲಿ ನಡೆದ ಪಂದ್ಯದ ಬಳಿಕ ಅವರೊಂದಿಗೆ ಮಾತುಕತೆ ನಡೆಸಿದ್ದಾಗಿ ತಿಳಿಸಿದರು. ನಾವಿಬ್ಬರು ಒಟ್ಟಿಗೆ ಕುಳಿತುಕೊಂಡು ಕ್ರಿಕೆಟ್​ ಬಗ್ಗೆ ಮಾತನಾಡಿದ್ದೇವೆ. ಸಾಕಷ್ಟು ಗೌರವ ನೀಡುವುದನ್ನು ನಾನು ಕಂಡಿದ್ದೇನೆ. ಪ್ರಸ್ತುತ ಮೂರು ಸ್ವರೂಪದ ಕ್ರಿಕೆಟ್​​ನಲ್ಲಿ ಅವರು ವಿಶ್ವದ ಅಗ್ರ ಬ್ಯಾಟರ್​​ ಆಗಿದ್ದು, ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ ಎಂದರು.

ಅವರ ಬ್ಯಾಟಿಂಗ್​ ಶೈಲಿಯನ್ನು ನೋಡಿ ನಾನು ಆನಂದಿಸಿದ್ದೇನೆ. ವಿಶ್ವದ ಅಗ್ರ ಬ್ಯಾಟರ್​ ಆಗಿರುವ ಬಾಬರ್​ ಆಜಂ ಅವರ ವರ್ತನೆಯಲ್ಲಿ ಯಾವುದೇ ಬದಲಾವಣೆyನ್ನು ನಾನು ನೋಡಿಲ್ಲ. ಅವರ ಕ್ರಿಕೆಟ್​ ಬುನಾದಿ ತುಂಬಾ ಗಟ್ಟಿಯಾಗಿದೆ. ಅದು ಬಹಳಷ್ಟು ಜನರಿಗೆ ಪ್ರೇರಕವಾಗಿದೆ ಎಂದು ಬಣ್ಣಿಸಿದರು.

ಏಷ್ಯಾಕಪ್​​​ನಲ್ಲಿ ಭಾರತ- ಪಾಕಿಸ್ತಾನ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಮುಖಾಮುಖಿಯಾಗಲಿದ್ದು, ಉಭಯ ತಂಡಗಳು ನೆಟ್ಸ್​ನಲ್ಲಿ ಅಭ್ಯಾಸ ಆರಂಭಿಸಿವೆ. ಕಳೆದ ಎರಡು ದಿನಗಳ ಹಿಂದೆ ವಿರಾಟ್​ ಕೊಹ್ಲಿ ಹಾಗೂ ಬಾಬರ್ ಆಜಂ ಕೆಲಹೊತ್ತು ಮಾತುಕತೆ ನಡೆಸಿದ್ದರು.

ABOUT THE AUTHOR

...view details