ಹೈದರಾಬಾದ್: ಹೈದರಾಬಾದ್ ಕ್ರಿಕೆಟ್ ಅಸೋಸಿಯೇಶನ್‌ನ (ಹೆಚ್‌ಸಿಎ) ಅಪೆಕ್ಸ್ ಕೌನ್ಸಿಲ್ ಅಜರುದ್ದೀನ್ ಅವರನ್ನು ಹೆಚ್‌ಸಿಎ ಅಧ್ಯಕ್ಷ ಹುದ್ದೆಯಿಂದ ತೆಗೆದು ಹಾಕಿದೆ. ಅಜರ್ ವಿರುದ್ಧ ಬಾಕಿ ಇರುವ ಪ್ರಕರಣಗಳು ಇತ್ಯರ್ಥವಾಗುವವರೆಗೂ ಅವರನ್ನು ಹೊರಗಿಡುವುದಾಗಿ ಹೆಚ್‌ಸಿಎ ಹೇಳಿದೆ. ಸದಸ್ಯರ ದೂರುಗಳನ್ನು ಪರಿಗಣಿಸಿ ಅಜರ್ ವಿರುದ್ಧ ಕ್ರಮಕೈಗೊಳ್ಳಲಾಗಿದೆ ಎಂದು ಅದು ತಿಳಿಸಿದೆ.
ಅಜರ್ ಮೇಲಿರುವ ಆರೋಪ ಏನು?
ಅಜರ್ ಹೆಚ್‌ಸಿಎ ನಿಯಮಗಳಿಗೆ ವಿರುದ್ಧವಾಗಿ ವರ್ತಿಸಿದ್ದಾರೆ ಎಂದು ಈ ತಿಂಗಳ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಶೋಕಾಸ್ ನೋಟಿಸ್ ನೀಡಲು ನಿರ್ಧರಿಸಲಾಗಿತ್ತು ಎಂದು ಅಪೆಕ್ಸ್ ಕೌನ್ಸಿಲ್ ತಿಳಿಸಿದೆ. ಅಲ್ಲದೆ, ಕೌನ್ಸಿಲ್ ಅಜರುದ್ದೀನ್ ಅವರ ಹೆಚ್‌ಸಿಎ ಸದಸ್ಯತ್ವವನ್ನು ರದ್ದುಗೊಳಿಸಿದೆ. ಇತರ ರಾಜ್ಯ ಕ್ರಿಕೆಟ್ ಸಂಘಗಳ ಮುಂದೆ ಹೆಚ್‌ಸಿಎ ಘನತೆಯನ್ನು ಕಡಿಮೆ ಮಾಡಿದ ಮತ್ತು ಸಂಸ್ಥೆಯ ನಿಯಮಗಳ ವಿರುದ್ಧ ನಿರ್ಧಾರಗಳನ್ನು ತೆಗೆದುಕೊಂಡ ಆರೋಪ ಅಜರ್ ಮೇಲಿದೆ.