ಹೈದರಾಬಾದ್:ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರು ಹಳೆಯ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಕೊಂಡಿದ್ದಾರೆ. ಅಲ್ಲದೇ ಕೆಲವು ಹೃದಯಿಸ್ಪರ್ಶ ಸಾಲುಗಳನ್ನು ಬರೆದು ಫೋಟೋ ಮೇಲೆ ತಮ್ಮ ಅಭಿಮಾನ ವ್ಯಕ್ತಪಡಿಸಿದ್ದಾರೆ.
ಓಬೇರಾಯನ ಕಾಲದ ಸ್ಕೂಟರ್ ಮೇಲೆ ಕುಳಿತು ಸವಾರಿ ಮಾಡುತ್ತಿರುವ ಫೋಟೋ ಇದಾಗಿದ್ದು ತಮ್ಮ ಕ್ರಿಕೆಟ್ ವೃತ್ತಿ ಜೀವನದ ಸಾಧನೆಗೂ ಹಾಗೂ ಈ ವಾಹನಕ್ಕೂ ಇರುವ ಅವಿನಾಭಾವ ಸಂಬಂಧದ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಇದು "ನನ್ನ ಪ್ರತಿಭೆಗೆ ಸಿಕ್ಕ ಫಲ" ಎಂದು ಕ್ಯಾಪ್ಶನ್ ಬರೆದುಕೊಡಿರುವ ಅಜರುದ್ದೀನ್, ಸ್ಕೂಟರ್ ಮೇಲೆ ಇರುವ ತಮ್ಮ ಪ್ರೀತಿಯನ್ನು ಅಕ್ಷರಗಳ ಮೂಲಕ ವ್ಯಕ್ತಪಡಿಸಿದ್ದಾರೆ.
ನನ್ನ ವೃತ್ತಿಜೀವನದ ಆರಂಭದ ನೆನಪುಗಳು ಈ ಸ್ಕೂಟರ್ ಮೇಲಿದೆ. ಐಷಾರಾಮಿ ಕಾಲ ಇದಾಗಿದ್ದರೂ ಆ ಕಾಲದಲ್ಲಿ ಈ ಸ್ಕೂಟರ್ನಲ್ಲಿ ಓಡಾಡಿದ ಖುಷಿ ಇನ್ನೂ ಮಾಸಿಲ್ಲ. ಈ ಸ್ಕೂಟರ್ ನನ್ನ ಪಾಲಿನ ಅದೃಷ್ಟ. ಅಭ್ಯಾಸ ಮಾಡಲು ಹೋಗಬೇಕೆಂದರೆ ಇದನ್ನೇ ಹೆಚ್ಚು ಬಳಸುತ್ತಿದ್ದೆ ಎಂದು ಅಂದಿನ ತಮ್ಮ ದಿನಮಾನಗಳನ್ನು ಮೆಲುಕು ಹಾಕಿ ಟ್ವೀಟ್ ಮಾಡಿಕೊಂಡಿದ್ದಾರೆ.
99 ಟೆಸ್ಟ್ ಪಂದ್ಯಗಳನ್ನು ಆಡಿರುವ ಸ್ಟೈಲಿಶ್ ಬಲಗೈ ಬ್ಯಾಟ್ಸ್ಮನ್ ಮೊಹಮ್ಮದ್ ಅಜರುದ್ದೀನ್, ತಮ್ಮ ಪ್ರತಿಭೆಗೆ ಸಿಕ್ಕ ಈ ಕೊಡುಗೆಯನ್ನು ಈವರೆಗೂ ಬಹಳ ಎಚ್ಚರಿಕೆಯಿಂದ ನೋಡಿಕೊಂಡು ಬಂದಿದ್ದಾರೆ. ಸ್ಕೂಟರ್ನ ಹೆಡ್ಲೈಟ್ ಮೇಲೆ ಹಸಿರು ಬಣ್ಣದಿಂದ ಅವರ ಹೆಸರನ್ನು ಬರೆಯಲಾಗಿದ್ದು ಮಾಸದ ದಿನಮಾನದ ಕುರಿತು ಖುಷಿ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ತಮ್ಮ ಅಜ್ಜನನ್ನು ನೆನೆದು ಟ್ವೀಟ್ ಮಾಡಿದ್ದರು. ಅಲ್ಲದೇ ತಮ್ಮ ವೃತ್ತಿ ಜೀವನದ ಮೊದಲ ಮೂರು ಟೆಸ್ಟ್ ಪಂದ್ಯಗಳಲ್ಲಿ ಸತತ ಮೂರು ಶತಕಗಳನ್ನು ಸಿಡಿಸಿ ವಿಶ್ವ ದಾಖಲೆ ಬರೆದ ಬ್ಯಾಟ್ ಬಗ್ಗೆಯೂ ಸಹ ನೆನೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡಿದ್ದರು.