ಚೆನ್ನೈ:ಮಹಾಮಾರಿ ಕೊರೊನಾ ಸೋಂಕಿಗೊಳಗಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಲ್ರೌಂಡರ್ ಅಕ್ಸರ್ ಪಟೇಲ್ ಸಂಪೂರ್ಣವಾಗಿ ಗುಣಮುಖರಾಗಿದ್ದು, ಇದೀಗ ಮರಳಿ ತಂಡ ಸೇರಿಕೊಂಡಿದ್ದಾರೆ.
ಕೊರೊನಾದಿಂದ ಗುಣಮುಖ: ಡೆಲ್ಲಿ ತಂಡ ಸೇರಿಕೊಂಡ ಆಲ್ರೌಂಡರ್ ಅಕ್ಸರ್ ಪಟೇಲ್! - ಡೆಲ್ಲಿ ಆಟಗಾರ ಅಕ್ಸರ್ ಪಟೇಲ್
ಡೆಲ್ಲಿ ಕ್ಯಾಪಿಟಲ್ ತಂಡದ ಆಲ್ರೌಂಡರ್ ಅಕ್ಸರ್ ಪಟೇಲ್ ಇದೀಗ ಕೊರೊನಾ ಮಹಾಮಾರಿಯಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.
![ಕೊರೊನಾದಿಂದ ಗುಣಮುಖ: ಡೆಲ್ಲಿ ತಂಡ ಸೇರಿಕೊಂಡ ಆಲ್ರೌಂಡರ್ ಅಕ್ಸರ್ ಪಟೇಲ್! Axar patel](https://etvbharatimages.akamaized.net/etvbharat/prod-images/768-512-11509746-thumbnail-3x2-wdfdfdf.jpg)
Axar patel
ಏಪ್ರಿಲ್ 1ರಿಂದಲೂ ಕ್ವಾರಂಟೈನ್ಗೊಳಗಾಗಿದ್ದ ಅಕ್ಸರ್ ಪಟೇಲ್ ಕೊರೊನಾ ವರದಿ ಪಾಸಿಟಿವ್ ಬಂದಿತ್ತು. ಆದರೆ, ಇದೀಗ ವರದಿ ನೆಗೆಟಿವ್ ಬಂದಿರುವ ಕಾರಣ ಅವರು ಹೋಂ ಐಸೋಲೇಷನ್ ಮುಗಿಸಿ ತಂಡ ಸೇರಿಕೊಂಡಿದ್ದಾರೆ. ಡೆಲ್ಲಿ ತಂಡದ ಪರ ಅಕ್ಸರ್ ಇಲ್ಲಿಯವರೆಗೆ ಯಾವುದೇ ಪಂದ್ಯದಲ್ಲೂ ಭಾಗಿಯಾಗಿಲ್ಲ.
ಅವರು ತಂಡಕ್ಕೆ ವಾಪಸ್ ಆಗಿರುವ ಬಗ್ಗೆ ಡೆಲ್ಲಿ ಕ್ಯಾಪಿಟಲ್ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದೆ. ಡೆಲ್ಲಿ ತಂಡದ ವೇಗದ ಬೌಲರ್ ಅನ್ರಿಚ್ ನಾರ್ಟ್ಜ್ ಬಳಿಕ ಅಕ್ಸರ್ ಪಟೇಲ್ಗೆ ಕೊರೊನಾ ಕಾಣಿಸಿಕೊಂಡಿತ್ತು.