ನವದೆಹಲಿ: ಭಾರತದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವಿಫಲರಾಗುತ್ತಿರಬಹುದು, ಆದರೆ ಆಲ್ರೌಂಡರ್ಗಳು ಕಳೆದ ಹಲವು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದಾರೆ. ಬಹುಶಃ ಅದಕ್ಕಾಗಿಯೇ ಬ್ಯಾಟಿಂಗ್‌ನಿಂದಾಗಿ ಕೆಲವು ಬ್ಯಾಕ್ ಆರ್ಡರ್ ಬೌಲರ್‌ಗಳು ತಂಡದಲ್ಲಿ ಉಳಿಯಲು ಅವಕಾಶವನ್ನು ಪಡೆಯುತ್ತಿದ್ದಾರೆ.
ಬೌಲಿಂಗ್ ವಿಭಾಗದ ಆಲ್ರೌಂಡರ್ಗಳು ಹೆಚ್ಚು ತಂಡಕ್ಕೆ ಸಹಕಾರಿಯಾಗುತ್ತಾರೆ. ಹೀಗಾಗಿ ತಂಡದಲ್ಲಿ ಅಕ್ಷರ್, ಅಶ್ವಿನ್ ಮತ್ತು ಜಡೇಜಾ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಇದರಿಂದ 8ನೇ ವಿಕೆಟ್ ವರಗೂ ಬ್ಯಾಟಿಂಗ್ ಬಲ ತಂಡಕ್ಕೆ ಇರುತ್ತದೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ಎಂಟು ಹಾಗೂ ಒಂಬತ್ತನೇ ವಿಕೆಟ್ ವರೆಗೆ ಬ್ಯಾಟಿಂಗ್ ಆಸರೆ ಇಟ್ಟುಕೊಂಡಿರುವುದು ಚಾಂಪಿಯನ್ ಆಟಕ್ಕೆ ಕಾರಣ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತದೆ.
ಕಳೆದ ಕೆಲವು ತಿಂಗಳುಗಳಿಂದ ಅಕ್ಷರ್ ಪಟೇಲ್ ಬ್ಯಾಟಿಂಗ್ ಮಾಡುವ ಮೂಲಕ ತಂಡವನ್ನು ಬೆಂಬಲಿಸುತ್ತಿರುವ ರೀತಿ, ತಂಡದಲ್ಲಿ ಅವರ ಸ್ಥಾನವನ್ನು ಖಚಿತಪಡಿಸಿಕೊಳ್ಳುತ್ತಿದೆ. ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಅಕ್ಷರ್ ಬ್ಯಾಟಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಇದು ಅವರು ಹೆಚ್ಚು ತಂಡದಲ್ಲಿ ಉಳಿದು ಕೊಳ್ಳಲು ಸಹಕಾರ ಮಾಡುತ್ತಿದೆ. ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲೂ ಅಕ್ಷರ್ ಸ್ಥಾನ ಗಳಿಸುವ ಸಾಧ್ಯತೆ ಇದೆ.
ಭಾರತದ ಸ್ಪಿನ್ ಬೌಲರ್ ಆಗಿ ತಂಡಕ್ಕೆ ಸೇರ್ಪಡೆಗೊಂಡಿರುವ ಅಕ್ಷರ್ ಅವರನ್ನು ಬಲಿಷ್ಠ ಆಲ್ ರೌಂಡರ್ ಎಂದು ಕರೆಯಲಾಗುತ್ತಿದೆ. ಪ್ರಸ್ತುತ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ - ಗವಾಸ್ಕರ್ ಟ್ರೋಫಿಯಲ್ಲಿ ಮತ್ತು ಅದಕ್ಕೂ ಮೊದಲು ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಅಕ್ಷರ್ ಪಟೇಲ್ ಅವರ ಬ್ಯಾಟಿಂಗ್ ಮತ್ತು ಬೌಲಿಂಗ್ ತಂಡಕ್ಕೆ ಉತ್ತಮ ಆಸರೆಯಾಗಿತ್ತು.