ಕರ್ನಾಟಕ

karnataka

ETV Bharat / sports

ಟಿ20 ವಿಶ್ವಕಪ್ : ನೆಟ್​ಬೌಲರ್​ ಆಗಿ ಭಾರತ ತಂಡ ಸೇರಿದ ಆವೇಶ್ ಖಾನ್ - ಟಿ20 ವಿಶ್ವಕಪ್​

ಆವೇಶ್​ ಖಾನ್​ 14ನೇ ಆವೃತ್ತಿಯಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದ್ದಾರೆ. ಅವರು 15 ಪಂದ್ಯಗಳಿಂದ 23 ವಿಕೆಟ್ ಪಡೆದಿದು ಲೀಗ್​ನಲ್ಲಿ ಗರಿಷ್ಠ ವಿಕೆಟ್ ಪಡೆದ 2ನೇ ಬೌಲರ್ ಎನಿಸಿಕೊಂಡಿದ್ದಾರೆ. ಅಲ್ಲದೆ 142ರಿಂದ 145ರ ವೇಗದಲ್ಲಿ ಬೌಲಿಂಗ್ ಮಾಡಬಲ್ಲರು ಎಂದು ಬಿಸಿಸಿಐ ಮೂಲಗಳು ಭಾವಿಸಿವೆ..

Avesh Khan set to join Team India as net bowler
ಆವೇಶ್ ಖಾನ್

By

Published : Oct 12, 2021, 9:25 PM IST

ನವದೆಹಲಿ :ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರತಿಭಾನ್ವಿತ ವೇಗದ ಬೌಲರ್ ಆವೇಶ್ ಖಾನ್ ಅವರಿಗೆ ನೆಟ್​ ಬೌಲರ್​ ಆಗಿ ಟಿ20 ವಿಶ್ವಕಪ್ ತಂಡವನ್ನು ಸೇರಿಕೊಳ್ಳುವುದಕ್ಕಾಗಿ ಐಪಿಎಲ್ ಮುಗಿದ ನಂತರವೂ ಯುಎಇನಲ್ಲೇ ಇರಲು ಬಿಸಿಸಿಐ ಸೂಚಿಸಿದೆ.

24 ವರ್ಷದ ಡೆಲ್ಲಿ ಬೌಲರ್​ ಬಿಸಿಸಿಐನಿಂದ ಅವಕಾಶ ಪಡೆದ 2ನೇ ಬೌಲರ್ ಆಗಿದ್ದಾರೆ. ಈಗಾಗಲೇ ಕಾಶ್ಮೀರಿ ಫಾಸ್ಟ್ ಬೌಲರ್​ ಉಮರ್​ ಮಲಿಕ್​ ಅವರ ಆಯ್ಕೆಯಾಗಿದ್ದಾರೆ. ಬಿಸಿಸಿಐ ಮೂಲಗಳ ಪ್ರಕಾರ ಡೆಲ್ಲಿ ವೇಗಿಯನ್ನು ವಿಶ್ವಕಪ್​ನ ಮೀಸಲು ಆಟಗಾರನಾಗಿ ಸೇರಿಸಿಕೊಳ್ಳುವ ಸಾಧ್ಯತೆ ಕೂಡ ಇದೆ ಎನ್ನಲಾಗುತ್ತಿದೆ.

ರಾಷ್ಟ್ರೀಯ ಆಯ್ಕೆಗಾರರು ಆವೇಶ್​ ಖಾನ್​ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಿದ್ದಾರೆ. ಆದರೆ, ಪ್ರಸ್ತುತ ಅವರು ನೆಟ್​ ಬೌಲರ್ ಆಗಿದ್ದಾರೆ. ಆದರೆ, ಮ್ಯಾನೇಜ್​ಮೆಂಟ್​ ಅವರನ್ನು ಭಾರತ ತಂಡಕ್ಕೆ ಉನ್ನತೀಕರಿಸಬಹುದು ಎಂದು ಭಾವಿಸಿದೆ ಎಂದು ಬಿಸಿಸಿಐ ಮೂಲ ಪಿಟಿಐಗೆ ಮಾಹಿತಿ ನೀಡಿದೆ.

ಆವೇಶ್​ ಖಾನ್​ 14ನೇ ಆವೃತ್ತಿಯಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದ್ದಾರೆ. ಅವರು 15 ಪಂದ್ಯಗಳಿಂದ 23 ವಿಕೆಟ್ ಪಡೆದಿದು ಲೀಗ್​ನಲ್ಲಿ ಗರಿಷ್ಠ ವಿಕೆಟ್ ಪಡೆದ 2ನೇ ಬೌಲರ್ ಎನಿಸಿಕೊಂಡಿದ್ದಾರೆ. ಅಲ್ಲದೆ 142ರಿಂದ 145ರ ವೇಗದಲ್ಲಿ ಬೌಲಿಂಗ್ ಮಾಡಬಲ್ಲರು ಎಂದು ಬಿಸಿಸಿಐ ಮೂಲಗಳು ಭಾವಿಸಿವೆ.

ಇದನ್ನು ಓದಿ:ಕೆಲವೇ ಕ್ರಿಕೆಟಿಗರು ಫ್ರಾಂಚೈಸಿಗೆ ನೀಡಲು ಸಾಧ್ಯವಾಗುವ ಕೊಡುಗೆಯನ್ನು ಕೊಹ್ಲಿ ಆರ್​ಸಿಬಿಗೆ ನೀಡಿದ್ದಾರೆ : ಗವಾಸ್ಕರ್​

ABOUT THE AUTHOR

...view details