ಮುಂಬೈ :ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ಮತ್ತು ಹೊಸದಾಗಿ ಏಕದಿನ ನಾಯಕನಾಗಿ ನೇಮಕಗೊಂಡಿರುವ ರೋಹಿತ್ ಶರ್ಮಾ ನಡುವೆ ಯಾವುದೇ ಬಿರುಕಿಲ್ಲ.
ಇದನ್ನೇ ನಾನು ಕಳೆದ ಎರಡೂವರೆ ವರ್ಷಗಳಿಂದ ಹೇಳುತ್ತಿದ್ದೇನೆ ಎಂದು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳುವ ಮುನ್ನ ನಡೆದ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ರೋಹಿತ್ ಶರ್ಮಾ ಗಾಯದ ಕಾರಣ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯುಂದ ಹೊರ ಬಂದಿದ್ದರು. ನಂತರ ಟೆಸ್ಟ್ ತಂಡದ ನಾಯಕನಾಗಿರುವ ವಿರಾಟ್ ಕೊಹ್ಲಿ ಕೂಡ 3 ಪಂದ್ಯಗಳ ಏಕದಿನ ಸರಣಿಯಲ್ಲಿ ವೈಯಕ್ತಿಕ ಕಾರಣಗಳಿಂದ ಆಡದಿರಲು ನಿರ್ಧರಿಸಿದ್ದಾರೆ ಎಂದು ವರದಿಗಳಾಗಿದ್ದವು. ಕೊಹ್ಲಿಯ ಈ ನಿರ್ಧಾರ ಭಾರತ ತಂಡದಲ್ಲಿ ಎಲ್ಲವೂ ಸರಿಯಲ್ಲ ಎಂಬ ಚರ್ಚೆಗೀಡು ಮಾಡಿತ್ತು.
ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಕೂಡ ನಾಯಕತ್ವ ಬದಲಾವಣೆಯಾಗಿರುವ ಸಂದರ್ಭದಲ್ಲಿ ಈ ಇಬ್ಬರು ನಾಯಕರು ಪ್ರತ್ಯೇಕ ಮಾದರಿ ಕ್ರಿಕೆಟ್ ಸರಣಿಗೆ ಅಲಭ್ಯರಾಗುತ್ತಿರುವುದು ಇಲ್ಲದ ವದಂತಿಗೆ ಕಾರಣವಾಗಲಿದೆ.
ವಿಶ್ರಾಂತಿ ತೆಗೆದುಕೊಳ್ಳುವುದರಲ್ಲಿ ತಪ್ಪಿಲ್ಲ. ಆದರೆ, ಈ ಸಂದರ್ಭದಲ್ಲಿ ತೆಗೆದುಕೊಳ್ಳುತ್ತಿರುವುದರಿಂದ ತಂಡದಲ್ಲಿ ಬಿರುಕು ಮೂಡಿದೆ ಎನ್ನುವ ವದಂತಿಗೆ ಪುಷ್ಠಿ ನೀಡಲಿದೆ ಎಂದು ಟ್ವೀಟ್ ಮಾಡಿದ್ದರು.
"ನಾನು ಏಕದಿನ ಸರಣಿಯಿಂದ ವಿಶ್ರಾಂತಿ ಬೇಕೆಂದು ಎಲ್ಲೂ ಹೇಳಿಲ್ಲ ಮತ್ತು ನಾನು ಏಕದಿನ ತಂಡಕ್ಕೆ ಲಭ್ಯನಿದ್ದೇನೆ ಎಂದು ರೋಹಿತ್ ನಾಯಕತ್ವದಲ್ಲಿ ಆಡುವುದಕ್ಕೆ ಇಷ್ಟಪಡುತ್ತಿಲ್ಲ" ಎನ್ನುವ ವದಂತಿಗೆ ತೆರೆ ಎಳೆದಿದ್ದಾರೆ.
ರೋಹಿತ್ ಶರ್ಮಾ ಜೊತೆಗಿನ ಬಾಂಧವ್ಯದ ಬಗ್ಗೆ ಮಾತನಾಡಿದ ಅವರು, ನನಗೆ ರೋಹಿತ್ ಜೊತೆಗೆ ಯಾವುದೇ ಸಮಸ್ಯೆಯಿಲ್ಲ. ನಾನಿದನ್ನ ಕಳೆದ ಎರಡುವರೆ ವರ್ಷಗಳಿಂದ ಸ್ಪಷ್ಟಪಡಿಸುತ್ತಲೇ ಇದ್ದೇನೆ. ಇದರಿಂದ ನಾನು ದಣಿದಿದ್ದೇನೆ.
ನನ್ನ ಯಾವುದೇ ಕ್ರಿಯೆ ಅಥವಾ ಹೇಳಿಕೆಗಳು ಎಂದಿಗೂ ತಂಡದ ಘನತೆಯನ್ನು ತಗ್ಗಿಸುವಂತಿರುವುದಿಲ್ಲ. ನಾನು ಸಂಪೂರ್ಣವಾಗಿ ಭಾರತೀಯ ಕ್ರಿಕೆಟ್ಗೆ ಬದ್ಧನಾಗಿದ್ದೇನೆ ಎಂದು ಕೊಹ್ಲಿ ಹೇಳಿದ್ದಾರೆ.
ಇದನ್ನೂ ಓದಿ:ದ.ಆಫ್ರಿಕಾ ವಿರುದ್ಧದ ಏಕದಿನ ಸರಣಿ ಆಡಲಿದ್ದೇನೆ : ಗೊಂದಲಕ್ಕೆ ತೆರೆ ಎಳೆದ ವಿರಾಟ್ ಕೊಹ್ಲಿ