ಬ್ರಿಸ್ಬೇನ್:ಉತ್ತಮ ಪ್ರದರ್ಶನದ ಹೊರತಾಗಿಯೂ ಆಸ್ಟ್ರೇಲಿಯಾ ವಿರುದ್ಧ ಕ್ರಿಕೆಟ್ ಶಿಶು ಐರ್ಲೆಂಡ್ ಸೋಲನ್ನಪ್ಪಿದೆ. 42 ರನ್‌ಗಳ ಗೆಲುವು ಸಾಧಿಸಿದ ಬಲಿಷ್ಟ ಆಸ್ಟ್ರೇಲಿಯಾ ಗುಂಪು-1ರ ಅಂಕಪಟ್ಟಿಯಲ್ಲಿ ಸ್ಥಾನ ಬದಲಾವಣೆ ಮಾಡಿಕೊಂಡಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು. 180 ರನ್‌ಗಳ ಗುರಿ ಬೆನ್ನತ್ತಿದ ಐರ್ಲೆಂಡ್ 137 ರನ್ ಗಳಿಸಿ ತನ್ನೆಲ್ಲ ವಿಕೆಟ್ಗಳನ್ನು ಒಪ್ಪಿಸಿತು.
ಕೊನೆಯವರೆಗೂ ದಿಟ್ಟ ಹಾರಾಟ ನಡೆಸಿದ ಐರ್ಲೆಂಡ್ ಆಟಗಾರ ಲೋರ್ಕನ್ ಟಕರ್ 48 ಎಸೆತಳಲ್ಲಿ 71 ರನ್ ಗಳಿಸಿ ತಂಡದ ಗೌರವಕ್ಕೆ ಪಾತ್ರರಾದರು. ಇನ್ನುಳಿದಂತೆ, ಪಾಲ್ ಸ್ಟಿರ್ಲಿಂಗ್ 11, ನಾಯಕ ಆಂಡ್ರ್ಯೂ ಬಾಲ್ಬಿರ್ನಿ 6, ಹ್ಯಾರಿ ಟೆಕ್ಟರ್ 6, ಗರೆಥ್ ಡೆಲಾನಿ 14, ಮಾರ್ಕ್ ಅಡೇರ್ 11, ಫಿಯಾನ್ ಹ್ಯಾಂಡ್ 6 ರನ್ಗಳಿಸಿದರೆ ಉಳಿದವರು ಸಣ್ಣ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.