ದುಬೈ :ಮೊದಲ ಬಾರಿಗೆ ಟಿ-20 ವಿಶ್ವಕಪ್ಗೆ ಮುತ್ತಿಕ್ಕಿರುವ ಆಸ್ಟ್ರೇಲಿಯಾ ಆಟಗಾರರು (Australia Celebration T-20) ದುಬೈ ಮೈದಾನದಲ್ಲಿ ವಿಜಯೋತ್ಸವ ಆಚರಿಸಿದರು. ಇವರ ಈ ವಿಭಿನ್ನ ಸಂಭ್ರಮಾಚರಣೆ ವಿಡಿಯೋವನ್ನು ಐಸಿಸಿ ಹಂಚಿಕೊಂಡಿದೆ. ಶೂಗಳಲ್ಲಿ ಕೂಲ್ ಡ್ರಿಂಕ್ (Cool Drink) ಸುರಿದುಕೊಂಡು ಸೇವಿಸಿದ ಆಟಗಾರರು ಅಚ್ಚರಿ ಮೂಡಿಸಿದ್ದಾರೆ.
ಡ್ರೆಸ್ಸಿಂಗ್ ಕೋಣೆಯನ್ನು ಆಸ್ಟ್ರೇಲಿಯಾ ತಂಡದ ಆಟಗಾರರು (Australian men's team) ಸುತ್ತುವರೆದರು. ಈ ವೇಳೆ, ಆಸೀಸ್ ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್ ಮತ್ತು ಆಲ್ರೌಂಡರ್ ಸ್ಟೊಯಿನಿಸ್ ಶೂಗೆ ತಂಪು ಪಾನೀಯವನ್ನು ಸುರಿದು ಕುಡಿಯುವ ಮೂಲಕ ಅಚ್ಚರಿಗೆ ಗುರಿಯಾದರು. ವಿಡಿಯೋ ಸಾಮಾಜಿಕ ಜಾಲತಾಣ (Social network) ದಲ್ಲಿ ವೈರಲ್ ಆಗುತ್ತಿದೆ.