ಅಹಮದಾಬಾದ್: ಭಾರತದಲ್ಲಿ ಕೊರೊನಾ ವೈರಸ್ ಹಾವಳಿ ಜೋರಾಗಿರುವ ಕಾರಣ ಈಗಾಗಲೇ ಭಾರತದಿಂದ ಆಸ್ಟ್ರೇಲಿಯಾಕ್ಕೆ ತೆರಳುವ ವಿಮಾನ ರದ್ಧುಗೊಳಿಸಲಾಗಿದ್ದು, ಐಪಿಎಲ್ನಲ್ಲಿ ಭಾಗಿಯಾಗಿರುವ ಪ್ಲೇಯರ್ಸ್ಗೋಸ್ಕರ ವಿಶೇಷ ವಿಮಾನ ಕಳುಹಿಸುವುದಿಲ್ಲ ಎಂದು ಅಲ್ಲಿನ ಪ್ರಧಾನಿ ಘೋಷಣೆ ಸಹ ಮಾಡಿದ್ದಾರೆ.
ಇದೇ ಭಯದಲ್ಲಿ ಈಗಾಗಲೇ ಆಸ್ಟ್ರೇಲಿಯಾದ ಪ್ಲೇಯರ್ಸ್ ಆ್ಯಡಂ ಜಂಪಾ ಹಾಗೂ ಕೇನ್ ರಿಚರ್ಡ್ಸನ್ ಐಪಿಎಲ್ ತೊರೆದು ಸ್ವದೇಶಕ್ಕೆ ತೆರಳಿದ್ದಾರೆ. ಇದರ ಮಧ್ಯೆ ಕೂಡ ಮ್ಯಾಕ್ಸ್ವೆಲ್, ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಸೇರಿದಂತೆ ಅನೇಕ ಪ್ಲೇಯರ್ಸ್ ಇಲ್ಲೇ ಉಳಿದುಕೊಂಡಿದ್ದಾರೆ.
ಇದೀಗ ಈ ಪ್ಲೇಯರ್ಸ್ ಐಪಿಎಲ್ ಮುಕ್ತಾಯದ ಬಳಿಕ ಭಾರತ, ನ್ಯೂಜಿಲ್ಯಾಂಡ್ ಹಾಗೂ ಇಂಗ್ಲೆಂಡ್ ಪ್ಲೇಯರ್ಸ್ ಜತೆ ಚಾರ್ಟರ್ಡ್ ವಿಮಾನದಲ್ಲಿ ಇಂಗ್ಲೆಂಡ್ಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಇದಕ್ಕೆ ಸಂಬಂಧಿಸಿದಂತೆ ಮ್ಯಾಕ್ಸ್ವೆಲ್ ಸುಳಿವು ನೀಡಿದ್ದಾರೆ.