ಮೆಲ್ಬೋರ್ನ್: ಥಾಯ್ಲೆಂಡ್ನಲ್ಲಿ ರಜೆಗೆಂದು ತೆರಳಿ ಹೃದಯಾಘಾತದಿಂದ ಸಾವನ್ನಪ್ಪಿದ ಆಸ್ಟ್ರೇಲಿಯಾದ ಕ್ರಿಕೆಟ್ ದಂತಕತೆ ಶೇನ್ ವಾರ್ನ್ ಅವರ ಅಂತ್ಯಸಂಸ್ಕಾರವನ್ನು ಸರ್ಕಾರಿ ಗೌರವಗಳೊಂದಿಗೆ ನಡೆಸುವುದಾಗಿ ಭಾನುವಾರ ಆಸ್ಟ್ರೇಲಿಯಾ ಸರ್ಕಾರ ಖಚಿತಪಡಿಸಿದೆ.
ಆಸ್ಟ್ರೇಲಿಯಾದ ಸಂಸದ ಹಾಗೂ ವಿಕ್ಟೋರಿಯಾದ ಪ್ರೀಮಿಯರ್ ಡ್ಯಾನ್ ಆ್ಯಂಡ್ರ್ಯೂಸ್ ಟ್ವಿಟರ್ನಲ್ಲಿ ಈ ಬಗ್ಗೆ ಖಚಿತಪಡಿಸಿದ್ದಾರೆ. ನಾನು ವಾರ್ನ್ ಅವರ ಕುಟುಂಬದ ಜೊತೆಗೆ ಈ ಬಗ್ಗೆ ಮಾತನಾಡಿದ್ದು, ಅವರು ಸಾರ್ವಜನಿಕ ಶೋಕಾಚರಣೆಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.
" ನಾನು ಇಂದು ವಾರ್ನ್ ಕುಟುಂಬದೊಂದಿಗೆ ಮಾತನಾಡಿದ್ದೇನೆ ಮತ್ತು ಶೇನ್ ಅವರನ್ನು ನೆನಪಿಟ್ಟುಕೊಳ್ಳಲು ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡುವ ನನ್ನ ಪ್ರಸ್ತಾಪವನ್ನು ಅವರು ಒಪ್ಪಿಕೊಂಡಿದ್ದಾರೆ " ಎಂದು ಆ್ಯಂಡ್ರ್ಯೂಸ್ ಟ್ವೀಟ್ ಮಾಡಿದ್ದಾರೆ.