ಹೈದರಾಬಾದ್: 2ನೇ ಹಂತದ ಮಹಾಮಾರಿ ಕೊರೊನಾ ವೈರಸ್ ಹಾವಳಿಗೆ ತುತ್ತಾಗಿರುವ ಭಾರತ ಸಂಕಷ್ಟಕ್ಕೆ ಸಿಲುಕಿದೆ. ಆಕ್ಸಿಜನ್, ಬೆಡ್ ಹಾಗೂ ಔಷಧಿ ಕೊರತೆಯಿಂದ ಸಮಸ್ಯೆ ಎದುರಿಸುತ್ತಿದೆ. ಈ ಮಧ್ಯೆ ಅನೇಕರು ಭಾರತೀಯರ ಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ.
ಇದೀಗ ಆಸ್ಟ್ರೇಲಿಯಾದ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ತಮ್ಮ ಕೈಲಾದ ಸಹಾಯ ಮಾಡಿ, ಭಾರತೀಯರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆಡುತ್ತಿರುವ ವೇಗಿ 50 ಸಾವಿರ ಡಾಲರ್(37 ಲಕ್ಷ ರೂ) ನೆರವು ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ: ಹೋಗುವವರೆಲ್ಲ ಹೋಗಲಿ, ಆದ್ರೆ ಐಪಿಎಲ್ ವೇಳಾಪಟ್ಟಿಯಂತೆ ಮುಂದುವರಿಯಲಿದೆ: ಬಿಸಿಸಿಐ
ಇದಕ್ಕೆ ಸಂಬಂಧಿಸಿಂತೆ ಟ್ವೀಟ್ ಮಾಡಿರುವ ವೇಗದ ಬೌಲರ್ ಕಮ್ಮಿನ್ಸ್, ಪಿಎಂ ಕೇರ್ಸ್ ಫಂಡ್ಗೆ ಈ ಹಣ ದೇಣಿಗೆ ನೀಡುತ್ತಿರುವುದಾಗಿ ಹೇಳಿದ್ದು, ಆಕ್ಸಿಜನ್ ಖರೀದಿಗೆ ಬಳಸುವಂತೆ ಮನವಿ ಮಾಡಿದ್ದಾರೆ. ಇದರ ಜತೆಗೆ ಬೇರೆಯವರು ಸಹಾಯ ಮಾಡುವಂತೆ ಅವರು ಕೇಳಿಕೊಂಡಿದ್ದಾರೆ.