ಹಿಂದಿ, ತೆಲುಗು ಹಾಡುಗಳನ್ನು ತಮ್ಮ ವಿಡಿಯೋಗಳಿಗೆ ಬಳಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸುದ್ದಿಯಲ್ಲಿರುವ ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಈ ಬಾರಿ ಕನ್ನಡಿಗರ ಮನ ಗೆದ್ದಿದ್ದಾರೆ. ತಮ್ಮ ಮಗಳ ವಿಡಿಯೋಗೆ ಕನ್ನಡದ 'ಅಪ್ಪಾ ಐ ಲವ್ ಯೂ ಪಾ..' ಹಾಡನ್ನ ಸಿಂಕ್ ಮಾಡಿ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಐಪಿಎಲ್ ಪಂದ್ಯಾವಳಿ ಆಡುತ್ತಾ ಭಾರತವನ್ನು ಹೆಚ್ಚೆಚ್ಚು ಪ್ರೀತಿಸಲು, ಗೌರವಿಸಲು ಆರಂಭಿಸಿರುವ ಸನ್ ರೈಸರ್ಸ್ ಹೈದರಾಬಾದ್ (SRH) ತಂಡದ ಆಟಗಾರ ಡೇವಿಡ್ ವಾರ್ನರ್ರನ್ನು ಭಾರತೀಯರೂ ಅಷ್ಟೇ ಪ್ರೀತಿಸುತ್ತಾರೆ. ಅವರ ಮಗಳು ಸ್ಟೇಡಿಯಂನಲ್ಲಿ 'Go Daddy' ಎಂದು ಬರೆದಿರುವ ಬೋರ್ಡ್ ಹಿಡಿದು ತಂದೆಗೆ ಶುಭ ಕೋರುತ್ತಿರುವ ವಿಡಿಯೋವನ್ನು ವಾರ್ನರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಈ ವಿಡಿಯೋ ಪ್ಲೇ ಮಾಡಿದಾಗ 2017ರಲ್ಲಿ ತೆರೆಗೆ ಬಂದ 'ಚೌಕ' ಸಿನಿಮಾದ 'ಅಪ್ಪಾ ಐ ಲವ್ ಯೂ ಪಾ..' ಹಾಡು ಕೇಳಿ ಬರುತ್ತದೆ.
ವಾರ್ನರ್ರ ಈ ಪೋಸ್ಟ್ಗೆ 'ಲವ್ ಯೂ ವಾರ್ನರ್ ಫಾರ್ ಕನ್ನಡ', 'ನಮ್ಮ RCB ತಂಡಕ್ಕೂ ಸೇರ್ಪಡೆಯಾಗಿ', 'ಕನ್ನಡಿಗ ಡೇವಿಡ್ ವಾರ್ನರ್' 'ಕನ್ನಡ ಹಾಡು ಬಳಸಿ ನಮ್ಮ ಹೃದಯ ಗೆದ್ದಿದ್ದೀರಿ' ಎಂದೆಲ್ಲಾ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.