ಹೈದರಾಬಾದ್:ಮಹಾಮಾರಿ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಅನೇಕ ದೇಶಗಳು ಭಾರತದೊಂದಿಗೆ ಕೈ ಜೋಡಿಸುತ್ತಿದ್ದು, ಇದೀಗ ಆಸ್ಟ್ರೇಲಿಯನ್ ಕ್ರಿಕೆಟ್ ಮೀಡಿಯಾ ಅಸೋಷಿಯೇಷನ್ ಕೂಡ ಸಹಾಯಹಸ್ತ ಚಾಚಿದೆ.
ಭಾರತದಲ್ಲಿ ಕೋವಿಡ್ ವಿರುದ್ಧದ ಹೋರಾಟಕ್ಕೆ 4,200 ಡಾಲರ್ ಹಣ(3 ಲಕ್ಷ 11 ಸಾವಿರ ರೂ) ದೇಣಿಗೆ ನೀಡಿದೆ. ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದೆ.
ಕೊರೊನಾ ಹೋರಾಟಕ್ಕೆ ಈಗಾಗಲೇ ನಿಕೂಲಸ್ ಪೂರನ್, ಪ್ಯಾಟ್ ಕಮ್ಮಿನ್ಸ್, ಬ್ರೇಟ್ ಲೀ, ಸಚಿನ್ ತೆಂಡೂಲ್ಕರ್ ಹಾಗೂ ರಾಜಸ್ಥಾನ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ ಸಹಾಯ ಮಾಡಿವೆ.
ಇದನ್ನೂ ಓದಿ: ಮಾವಿ ಒಂದೇ ಓವರ್ನಲ್ಲಿ 6 ಬೌಂಡರಿ: ಸಿಕ್ರೆಟ್ ಬಹಿರಂಗ ಪಡಿಸಿದ ಪೃಥ್ವಿ ಶಾ
ಭಾರತ ಮಹಾಮಾರಿ ಕೊರೊನಾ ವಿರುದ್ಧ ಹೋರಾಟ ನಡೆಸಿದ್ದು, ನಿತ್ಯ ಲಕ್ಷಾಂತರ ಕೋವಿಡ್ ಪ್ರಕರಣ ಹಾಗೂ ಸಾವಿರಾರು ಜನರು ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ಕೆಲವೊಂದು ರಾಜ್ಯಗಳಲ್ಲಿ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಪ್ರಮುಖವಾಗಿ ಮಹಾರಾಷ್ಟ್ರ, ಕರ್ನಾಟಕ, ಕೇರಳ, ಪಂಜಾಬ್ ಸೇರಿದಂತೆ ಕೆಲವೊಂದು ರಾಜ್ಯಗಳಲ್ಲಿ ದಾಖಲೆಯ ಕೋವಿಡ್ ಪ್ರಕರಣ ಕಂಡು ಬರುತ್ತಿವೆ.