ಲಂಡನ್:ಮುಂದಿನ ವಾರ ಓವಲ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಭಾರತದ ಚೇತೇಶ್ವರ ಪೂಜಾರ ಮತ್ತು ವಿರಾಟ್ ಕೊಹ್ಲಿ ಬಗ್ಗೆ ಆಸ್ಟ್ರೇಲಿಯಾ ತಂಡವು ಹೆಚ್ಚು ಚಿಂತೆಗೀಡಾಗಿದೆ. ಇವರ ಬಗ್ಗೆಯೇ ಆಸೀಸ್ ತಂಡ ಹೆಚ್ಚು ಚರ್ಚೆ ಮಾಡುತ್ತಿದೆ ಎಂದು ಮಾಜಿ ನಾಯಕ, ಖ್ಯಾತ ಕ್ರಿಕೆಟಿಗ ರಿಕಿ ಪಾಂಟಿಂಗ್ ತಿಳಿಸಿದ್ದಾರೆ.
ಭಾರತದ ಟೆಸ್ಟ್ ಬ್ಯಾಟಿಂಗ್ ಆಧಾರಸ್ತಂಭ ಪೂಜಾರ ಇಂಗ್ಲಿಷ್ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಸಾಕಷ್ಟು ಆಡಿದ್ದು, ತಮ್ಮ ಸಹ ಆಟಗಾರರಿಗೆ ಅಮೂಲ್ಯವಾದ ಒಳನೋಟಗಳನ್ನು ನೀಡಬಲ್ಲರು. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಎರಡು ಶತಕಗಳು ಮತ್ತು ಆರು ಅರ್ಧ ಶತಕಗಳನ್ನು ಸಿಡಿಸುವ ಮೂಲಕ ವಿರಾಟ್ ಕೊಹ್ಲಿ ತಮ್ಮ ಸಂಪೂರ್ಣ ಶ್ರೇಷ್ಠತೆಯನ್ನು ಹೊಂದಿದ್ದಾರೆ.
ಚೇತೇಶ್ವರ ಪೂಜಾರ ಮತ್ತು ವಿರಾಟ್ ಕೊಹ್ಲಿ ಆಸ್ಟ್ರೇಲಿಯನ್ ತಂಡವು ವಿರಾಟ್ ಬಗ್ಗೆ ಮಾತನಾಡುತ್ತದೆ. ಇದರ ಬಗ್ಗೆ ಯಾವುದೇ ಸಂದೇಹವಿಲ್ಲ. ಅದೇ ರೀತಿಯಾಗಿ ಪೂಜಾರ ಬಗ್ಗೆಯೂ ಚರ್ಚಿಸುತ್ತಿದೆ ಎಂದು ಪಾಂಟಿಂಗ್ ''ದಿ ಐಸಿಸಿ ರಿವ್ಯೂ''ನಲ್ಲಿ ಹೇಳಿದ್ದಾರೆ. ಪೂಜಾರ ಆಸ್ಟ್ರೇಲಿಯಾದ ಬೌಲರ್‌ಗಳು ಎಸೆದ ಸವಾಲುಗಳನ್ನು ಎದುರಿಸುತ್ತಾರೆ. ಆಸೀಸ್ ವಿರುದ್ಧ ಹೆಚ್ಚು ಟೆಸ್ಟ್ ರನ್ ಮತ್ತು ಶತಕಗಳನ್ನು ಗಳಿಸಿದ್ದಾರೆ. ಅವರ ಕೊಡುಗೆಯು ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಟ್ರೋಫಿಯನ್ನು ಎತ್ತಿಹಿಡಿಯುವ ಭಾರತದ ಅವಕಾಶಕ್ಕೆ ನಿರ್ಣಾಯಕವಾಗಿದೆ.
ಪೂಜಾರ ಈ ಹಿಂದೆ ಆಸ್ಟ್ರೇಲಿಯಾದಲ್ಲಿ ಸಾಕಷ್ಟು ಕಂಟಕವಾಗಿದ್ದರು. ಓವಲ್ ಮೈದಾನ ಸಹ ಆಸ್ಟ್ರೇಲಿಯನ್ ಪಿಚ್‌ನಂತೆಯೇ ಇರುತ್ತದೆ. ಹೀಗಾಗಿ ಪೂಜಾರ ವಿಕೆಟ್ಅನ್ನು ಬೇಗನೆ ಪಡೆಯಬೇಕು ಎಂದು ಆಸ್ಟ್ರೇಲಿಯಾ ಆಟಗಾರರಿಗೆ ಆರ್ಥವಾಗಿದೆ ಎಂದು ರಿಕಿ ಪಾಂಟಿಂಗ್ ಹೇಳಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಪೂಜಾರ ಆಸ್ಟ್ರೇಲಿಯಾ ವಿರುದ್ಧ 24 ಟೆಸ್ಟ್ ಪಂದ್ಯಗಳನ್ನಾಡಿ 2,033 ರನ್ ಮತ್ತು ಐದು ಶತಕಗಳನ್ನು ಬಾರಿಸಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ತಂಡಕ್ಕೆ ಹೆಚ್ಚು ಪ್ರಮುಖ ಕೊಡುಗೆಗಳನ್ನು ನೀಡುತ್ತಾರೆ ಎಂದು ನಾಯಕ ರೋಹಿತ್ ಶರ್ಮಾ ಸಹ ನಂಬಿದ್ದಾರೆ.
ಮತ್ತೊಂದೆಡೆ, ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ತಮ್ಮ ಮಿಂಚಿನ ಫಾರ್ಮ್‌ನ ಹೊರತಾಗಿ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್‌ನಲ್ಲಿ 186 ರನ್ ಗಳಿಸಿದ್ದರು. ಕಳೆದ ಕೆಲವು ವಾರಗಳಲ್ಲಿ ವಿರಾಟ್ ಬಹುಶಃ ಟಿ- 20 ಕ್ರಿಕೆಟ್‌ನಲ್ಲಿದ್ದರೂ ಅತ್ಯುತ್ತಮ ಲಯಕ್ಕೆ ಮರಳಿದ್ದಾರೆ ಎಂದು ಆಸ್ಟ್ರೇಲಿಯಾದ ಆಟಗಾರರಿಗೆ ಗೊತ್ತಾಗಿದೆ. ಕೊಹ್ಲಿ ಲಯದ ಬಗ್ಗೆ ಆಸೀಸ್ ಕ್ರಿಕೆಟಿಗರೇ ನನ್ನ ಬಳಿ ಹೇಳಿಕೊಂಡಿದ್ದಾರೆ. ಇದು ಆಸ್ಟ್ರೇಲಿಯಾ ತಂಡಕ್ಕೆ ಎಚ್ಚರಿಕೆಯಾಗಿದೆ ಎಂದು ಪಾಂಟಿಂಗ್ ಹೇಳಿದರು.
ಶುಭ್ಮನ್ ಗಿಲ್ ಬಗ್ಗೆಯೂ ಆಸ್ಟ್ರೇಲಿಯಾ ತಂಡದಲ್ಲಿ ಚರ್ಚೆ ನಡೆಯುತ್ತಿದೆ. ಬಾರ್ಡರ್-ಗವಾಸ್ಕರ್ ಸರಣಿಯ ಕೊನೆಯ ಎರಡು ಟೆಸ್ಟ್‌ಗಳು ಮತ್ತು ಐಪಿಎಲ್‌ನಲ್ಲಿ ಯುವ ಆಟಗಾರ ಗಿಲ್ ತೋರಿದ ಪ್ರದರ್ಶನದ ಕುರಿತು ಪಾಂಟಿಂಗ್ ಪ್ರಭಾವಿತರಾಗಿದ್ದಾರೆ. ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ಪರ ಗಿಲ್ ಮೂರು ಶತಕಗಳನ್ನು ಬಾರಿಸಿದ್ದರು. ಗಿಲ್ ಭಯಂಕರವಾದ ಯುವಕನಂತೆ ಕಾಣುತ್ತಾನೆ ಮತ್ತು ಆಟಿಟ್ಯೂಡ್ ಹೊಂದಿದ್ದಾನೆ ಎಂದು ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ. ಇಂಗ್ಲೆಂಡ್‌ನ ದಿ ಓವಲ್ ಮೈದಾನದಲ್ಲಿ ಜೂನ್ 7ರಿಂದ 11ರವರೆಗೆ ನಡೆಯಲಿರುವ ಎರಡನೇ ಆವೃತ್ತಿಯ ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ.
ಇದನ್ನೂ ಓದಿ:WTC Final 2023: ಭಾರತದ ಸ್ಪಿನ್ ಬೌಲರ್‌ಗಳು ಓವೆಲ್ ಪಿಚ್ನಲ್ಲೂ ಕಾಡುವ ಭಯ ಇದೆ - ಸ್ಟೀವ್ ಸ್ಮಿತ್