ಕರ್ನಾಟಕ

karnataka

ETV Bharat / sports

ದ.ಆಫ್ರಿಕಾ ವಿರುದ್ಧ ಇನ್ನಿಂಗ್ಸ್‌ ಗೆಲುವು: ಟೆಸ್ಟ್​ ವಿಶ್ವಕಪ್​ ಫೈನಲ್‌ನತ್ತ ಆಸ್ಟ್ರೇಲಿಯಾ ಹೆಜ್ಜೆ

ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್​ ಕ್ರಿಕೆಟ್‌ ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ಇನ್ನಿಂಗ್ಸ್​ ಬಾಕಿ ಇರುವಾಗಲೇ ಆಲೌಟ್​ ಆಗುವ ಮೂಲಕ ಸರಣಿ ಕೈಚೆಲ್ಲಿತು.

australia-won-by-an-innings
ಆಸ್ಟ್ರೇಲಿಯಾ ದಕ್ಷಿಣ ಆಫ್ರಿಕಾ ಎರಡನೇ ಟೆಸ್ಟ್

By

Published : Dec 29, 2022, 6:04 PM IST

ಮೆಲ್ಬೋರ್ನ್(ಆಸ್ಟ್ರೇಲಿಯಾ): ಟೆಸ್ಟ್​ ಸರಣಿಯ ಎರಡನೇ ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾ ಜಯಭೇರಿ ಬಾರಿಸಿತು. ಹರಿಣ ಪಡೆ 182 ರನ್​ಗಳಿಂದ ಸೋಲನ್ನಪ್ಪಿದ್ದು ಸರಣಿ ಸೋಲು ಅನುಭವಿಸಿದೆ. ಈ ಮೂಲಕ ಆಸ್ಟ್ರೇಲಿಯಾ ತಂಡ 2-0 ಅಂತರದಿಂದ ಟೆಸ್ಟ್‌ ಸರಣಿಯನ್ನು ವಶಪಡಿಸಿಕೊಂಡಿದೆ. ಈ ಪಂದ್ಯದ ಗೆಲುವಿನೊಂದಿಗೆ ಕಾಂಗರೂ ಪಡೆ ಟೆಸ್ಟ್​ ವಿಶ್ವಕಪ್​ ಫೈನಲ್​ ಸ್ಥಾನವನ್ನು ಎದುರು ನೋಡುತ್ತಿದೆ.

ಮೊದಲ ಇನ್ನಿಂಗ್ಸ್​ನಲ್ಲಿ ಆಸೀಸ್ ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿದ ದ.ಆಫ್ರಿಕಾ 189 ರನ್​ಗಳನ್ನು ಗಳಿಸುವಷ್ಟರಲ್ಲಿ ತನ್ನೆಲ್ಲ ವಿಕೆಟ್​ಗಳನ್ನು ಕಳೆದುಕೊಂಡಿತ್ತು. ಬಳಿಕ, ಆಸ್ಟ್ರೇಲಿಯಾ ಪರ ಕ್ರೀಸ್‌​ಗಿಳಿದ ವಾರ್ನರ್​ ಅಮೋಘ ದ್ವಿಶತಕ ಮತ್ತು ಅಲೆಕ್ಸ್​ ಕ್ಯಾರಿ ಅವರ ಶತಕದ ನೆರವಿನಿಂದ 8 ವಿಕೆಟ್​ ನಷ್ಟಕ್ಕೆ ತಂಡ 575 ರನ್​ಗಳನ್ನು ಕಲೆ ಹಾಕುವ ಮೂಲಕ ಇನ್ನಿಂಗ್ಸ್​ ಮುನ್ನಡೆ ಸಾಧಿಸಿ ಡಿಕ್ಲೇರ್​​ ಘೋಷಿಸಿತು.

ನಾಲ್ಕನೇ ದಿನದಾಟ ಆರಂಭಿಸಿದ ದ.ಆಫ್ರಿಕಾ ತಂಡ ನಥನ್​ ಲಿಯಾನ್​ (58ಕ್ಕೆ 3) ಮತ್ತು ಸ್ಕಾಟ್ ಬೋಲ್ಯಾಂಡ್​ (49ಕ್ಕೆ 2)​ ಅವರ ಬಾಲಿಂಗ್​ ದಾಳಿಗೆ ಸಿಲುಕಿ 204 ರನ್​ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಇನ್ನಿಂಗ್ಸ್​ ಬಾಕಿ ಇರುವಾಗಲೇ ಆಫ್ರಿಕಾ ಸೋಲೊಪ್ಪಿಕೊಂಡಿತು. ಆಫ್ರಿಕಾ ಪರ ತೆಂಬಾ ಬವುಮಾ ಏಕಾಂಗಿ ಹೋರಾಟ ನಡೆಸಿ 65 ರನ್​ಗಳನ್ನು ಕಲೆ ಹಾಕಿ ತಂಡದ ಹೈಸ್ಕೋರರ್​ ಆಗಿದ್ದಾರೆ.

ಇದನ್ನೂ ಓದಿ:ಉಪ ನಾಯಕತ್ವ ಪಟ್ಟ: 'ಇದು ಕನಸೇ ಎಂದು ಅರೆಕ್ಷಣ ನನ್ನನ್ನೇ ಕೇಳಿಕೊಂಡಿದ್ದೆ': ಸೂರ್ಯಕುಮಾರ್

ABOUT THE AUTHOR

...view details