ಪರ್ತ್(ಆಸ್ಟ್ರೇಲಿಯಾ):ಟಿ20 ವಿಶ್ವಕಪ್ ಆತಿಥ್ಯ ವಹಿಸಿರುವ ಆಸ್ಟ್ರೇಲಿಯಾ ಗೆಲ್ಲಬೇಕಾದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಆಸೀಸ್ ಆಲ್ರೌಂಡರ್ ಮಾರ್ಕಸ್ ಸ್ಟೊಯಿನಿಸ್ರ ಬಿರುಗಾಳಿಯ ಬ್ಯಾಟಿಂಗ್ಗೆ ಲಂಕಾ ಸೊಲ್ಲೆತ್ತದೆ ಸೋಲೊಪ್ಪಿಕೊಂಡಿತು.
ಸ್ಟೊಯಿನಿಸ್ ಅತಿವೇಗದ ಅರ್ಧಶತಕ ದಾಖಲೆ:ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 20 ಓವರ್ಗಳಲ್ಲಿ 6 ವಿಕೆಟ್ಗೆ 157 ರನ್ ಬಾರಿಸಿತು. ಗುರಿ ಬೆನ್ನತ್ತಿದ ಕಾಂಗರೂ ಪಡೆ ಮಾರ್ಕಸ್ ಸ್ಟೊಯಿನಿಸ್ರ ಅತಿ ವೇಗದ ಅರ್ಧಶತಕ ಮತ್ತು ನಾಯಕ ಆ್ಯರೋನ್ ಫಿಂಚ್ರ ತಾಳ್ಮೆಯ ಆಟದಿಂದ ಗೆಲವು ಸಾಧಿಸಿತು.
ತಂಡ ಗೆಲ್ಲಲು 69 ರನ್ ಇದ್ದಾಗ ಮೈದಾನಕ್ಕೆ ಬಂದ ಮಾರ್ಕಸ್ ಸ್ಟೊಯಿನಿಸ್ ಲಂಕಾ ದಹನ ಮಾಡಿದರು. 6 ಸಿಕ್ಸರ್, 4 ಬೌಂಡರಿ ಸಮೇತ 18 ಎಸೆತಗಳಲ್ಲಿ 59 ರನ್ ಗಳಿಸಿದರು. ಉಳಿದ 10 ರನ್ಗಳು ಮಾತ್ರ ಆ್ಯರೋನ್ ಫಿಂಚ್ ಗಳಿಸಿದರು.
17 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಟಿ20 ವಿಶ್ವಕಪ್‌ನಲ್ಲಿ ಅತಿವೇಗದ ಫಿಫ್ಟಿ ಬಾರಿಸಿದ ಜಂಟಿ 2ನೇ ಆಟಗಾರ ಎಂಬ ದಾಖಲೆಯನ್ನೂ ಅವರು ಬರೆದರು. ಯುವರಾಜ್ ಸಿಂಗ್ 2007 ರಲ್ಲಿ 12 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಮೊದಲ ಸ್ಥಾನದಲ್ಲಿದ್ದರೆ, ಡಚ್ ಕ್ರಿಕೆಟಿಗ ಸ್ಟೀಫನ್ ಮೈಬರ್ಗ್ 17 ಎಸೆತಗಳಲ್ಲಿ 50 ರನ್ ಸಿಡಿಸಿದ್ದರು.