ಮುಂಬೈ(ಮಹಾರಾಷ್ಟ್ರ):ಭಾರತ ಮಹಿಳಾ ತಂಡವನ್ನು 190 ರನ್ಗಳಿಂದ ಆಸಿಸ್ ಮಹಿಳಾ ತಂಡ ಮಣಿಸಿದೆ. ಆಸ್ಟ್ರೇಲಿಯಾ ಮಹಿಳಾ ತಂಡವು ಸರಣಿಯಲ್ಲಿ ಅಜೇಯವಾಗಿ 3-0 ಮುನ್ನಡೆ ಸಾಧಿಸಿದೆ. ಇಂದಿನ ಮ್ಯಾಚ್ನಲ್ಲಿ ಫೋಬೆ ಲಿಚ್‌ಫೀಲ್ಡ್ ಅವರ ಅದ್ಭುತ ಶತಕದ ನೆರವಿನಿಂದ ಆಸ್ಟ್ರೇಲಿಯಾ ಮಹಿಳಾ ತಂಡವು 7 ವಿಕೆಟ್‌ಗೆ 338 ರನ್ ಕಲೆ ಹಾಕಿದೆ.
ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕಿ ಹೀಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆರಂಭಿಕ ಆಟಗಾರ್ತಿಯರಾದ ಫೋಬೆ ಲಿಚ್‌ಫೀಲ್ಡ್ ಹಾಗೂ ಅಲಿಸ್ಸಾ ಹೀಲಿ ತಂಡಕ್ಕೆ ಅದ್ಭುತ ಆರಂಭ ನೀಡಿದರು. ದೀಪ್ತಿ ಶರ್ಮಾ, ಹೀಲಿಯನ್ನು ಔಟ್ ಮಾಡುವ ಮೊದಲು ಇವರಿಬ್ಬರು 189 ರನ್‌ಗಳ ಆರಂಭಿಕ ಜೊತೆಯಾಟವನ್ನು ಆಡಿದರು. ಆಟಗಾರ್ತಿ ಲಿಚ್‌ಫೀಲ್ಡ್ ಮಾತ್ರ ರನ್ ಗಳಿಕೆಯನ್ನು ಹೆಚ್ಚಿಸುತ್ತಲೇ ಸಾಗಿದರು. ಲಿಚ್‌ಫೀಲ್ಡ್ ಒಟ್ಟು 119 ರನ್‌ಗಳನ್ನು ಗಳಿಸಿದರು.
ಆಸ್ಟ್ರೇಲಿಯಾದ ಆರಂಭಿಕ ಆಟಗಾರರ ವಿಕೆಟ್ ಉರುಳಿದ ನಂತರ, ಒಂದಾದ ಬಳಿಕ ಒಂದರಂತೆ ವಿಕೆಟ್‌ಗಳು ಉರುಳುತ್ತಲೇ ಇದ್ದವು. ಅಂತಿಮವಾಗಿ ಅಲಾನಾ ಕಿಂಗ್ 14 ಎಸೆತಗಳಲ್ಲಿ ಅಜೇಯ 26 ರನ್ ಗಳಿಸಿದರು. ಆಸ್ಟ್ರೇಲಿಯಾ ತಂಡವು 7 ವಿಕೆಟ್‌ಗೆ 338 ರನ್ ಕಲೆ ಹಾಕಿತು. ಶ್ರೇಯಾಂಕಾ ಪಾಟೀಲ್ 3 ವಿಕೆಟ್ ಪಡೆದರೆ, ಅಮನ್‌ಜೋತ್ ಕೌರ್ 2 ವಿಕೆಟ್ ಗಳಿಸಿದರು. ದೀಪ್ತಿ ಶರ್ಮಾ ಹಾಗೂ ಪೂಜಾ ವಸ್ತ್ರಾಕರ್ ತಲಾ ಒಂದೊಂದು ವಿಕೆಟ್ ಗಳಿಸಿದರು.
16 ವರ್ಷಗಳ ನಂತರ ಗೆಲುವಿಗಾಗಿ ಕಾಯುತ್ತಿರುವ ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ನಿರಾಸೆಯಾಗಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ಸರಣಿಯ ಕೊನೆಯ ಏಕದಿನ ಪಂದ್ಯವನ್ನು ಗೆಲ್ಲುವ ಕನಸು ಭಗ್ನವಾಗಿದೆ. ಟಾಸ್ ಗೆದ್ದ ಆಸೀಸ್ ನಾಯಕಿ ಬ್ಯಾಟಿಂಗ್ ಮಾಡುವ ನಿರ್ಧಾರ ಮಾಡಿದ್ದರು. ಉಭಯ ತಂಡಗಳು ಒಂದೊಂದು ಬದಲಾವಣೆ ಮಾಡಿಕೊಂಡಿದ್ದವು. ಎರಡನೇ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಡಿಕ್ಕಿಯಾಗಿ ಗಾಯಗೊಂಡ ಸ್ನೇಹ ರಾಣಾ ಬದಲಿಗೆ ಮನ್ನತ್ ಕಶ್ಯಪ್ ತಂಡದಲ್ಲಿ ಸ್ಥಾನ ಪಡೆದಿದ್ದರು. ಕಶ್ಯಪ್ಗಿದು ಪಾದಾರ್ಪಣೆಯ ಪಂದ್ಯ ಆಗಿತ್ತು. ಆಸೀಸ್ ತಂಡದಲ್ಲಿ ಡಾರ್ಸಿ ಬ್ರೌನ್ ಬದಲಿಗೆ ಮೇಗನ್ ಸ್ಥಾನ ಗಿಟ್ಟಿಸಿಕೊಂಡಿದ್ದರು.
ತಂಡಗಳ ಮಾಹಿತಿ- ಭಾರತ:ಯಾಸ್ತಿಕಾ ಭಾಟಿಯಾ, ಸ್ಮೃತಿ ಮಂಧಾನ, ರಿಚಾ ಘೋಷ್ (ವಿಕೆಟ್ ಕೀಪರ್), ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ದೀಪ್ತಿ ಶರ್ಮಾ, ಮನ್ನತ್ ಕಶ್ಯಪ್, ಅಮನ್‌ಜೋತ್ ಕೌರ್, ಶ್ರೇಯಾಂಕಾ ಪಾಟೀಲ್, ಪೂಜಾ ವಸ್ತ್ರಾಕರ್, ರೇಣುಕಾ ಠಾಕೂರ್ ಸಿಂಗ್.
ಆಸ್ಟ್ರೇಲಿಯಾ: ಫೋಬೆ ಲಿಚ್‌ಫೀಲ್ಡ್, ಅಲಿಸ್ಸಾ ಹೀಲಿ(ವಿಕೆಟ್ ಕೀಪರ್/ನಾಯಕಿ), ಎಲ್ಲಿಸ್ ಪೆರ್ರಿ, ಬೆತ್ ಮೂನಿ, ತಾಲಿಯಾ ಮೆಕ್‌ಗ್ರಾತ್, ಆಶ್ಲೀ ಗಾರ್ಡ್ನರ್, ಅನ್ನಾಬೆಲ್ ಸದರ್ಲ್ಯಾಂಡ್, ಅಲಾನಾ ಕಿಂಗ್, ಜಾರ್ಜಿಯಾ ವೇರ್‌ಹ್ಯಾಮ್, ಕಿಮ್ ಗಾರ್ತ್, ಮೇಗನ್.
ಇದನ್ನೂ ಓದಿ:ಹರಿಣಗಳ ನಾಡಲ್ಲಿ ಸರಣಿ ಸಮಬಲದ ಗುರಿ: ಬ್ಯಾಟಿಂಗ್ ವೈಫಲ್ಯದಿಂದ ಹೊರಬರುವುದೇ ಭಾರತ?