ಹಾಗ್ಲೆ ಓವಲ್(ಕ್ರೈಸ್ಟ್ ಚರ್ಚ್):ಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿವೆ. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡವು ಇಂಗ್ಲೆಂಡ್‌ಗೆ 356 ರನ್‌ಗಳ ಬೃಹತ್ ಗುರಿ ನೀಡಿದೆ. ಆಸಿಸ್ ಪರವಾಗಿ ಶತಕದಾಟವಾಡಿದ ಅಲಿಸ್ಸಾ ಹೀಲಿ 138 ಎಸೆತಗಳಿಗೆ 170 ರನ್ ಗಳಿಸಿ ವಿನೂತನ ದಾಖಲೆ ಬರೆದರು.
ಈ ಮೂಲಕ, ಅಲಿಸ್ಸಾ ಹೀಲಿ ಐಸಿಸಿ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಪುರುಷ ಮತ್ತು ಮಹಿಳಾ ವಿಭಾಗಗಳೆರಡರಲ್ಲೂ ಅತಿ ಹೆಚ್ಚು ರನ್ ಗಳಿಸಿರುವ ದಾಖಲೆಗೆ ಪಾತ್ರರಾದರು. ಇವರ ನಂತರದ ಸ್ಥಾನಗಳಲ್ಲಿ ಆಸ್ಟ್ರೇಲಿಯಾದ ಆ್ಯಡಂ ಗಿಲ್ಕ್ರಿಸ್ಟ್ (149 ರನ್) ರಿಕಿ ಪಾಟಿಂಗ್ (140 ರನ್) ಮತ್ತು ವಿವಿಯನ್ ರಿಚರ್ಡ್ಸ್ (138 ರನ್) ಇದ್ದಾರೆ.
ಹೀಲಿ ಜೊತೆಗೆ ಆರ್.ಹೇನ್ಸ್ 68 ರನ್, ಬೆತ್ ಮೂನಿ 62 ರನ್ ಗಳಿಸಿ ತಂಡ ಹೆಚ್ಚು ಮೊತ್ತ ದಾಖಲಿಸಲು ನೆರವಾದರು. ಇಂಗ್ಲೆಂಡ್ ಬೌಲಿಂಗ್ ವಿಚಾರಕ್ಕೆ ಬರುವುದಾದರೆ, ಅನ್ಯ ಶ್ರಬ್ಸೋಲ್ 3 ವಿಕೆಟ್ ಹಾಗು ಎಸ್ಸೆಸ್ಟೋನ್ 1 ವಿಕೆಟ್ ಪಡೆದರು.