ಹಾಗ್ಲೆ ಓವಲ್(ಕ್ರೈಸ್ಟ್ ಚರ್ಚ್):2022ನೇ ಸಾಲಿನಐಸಿಸಿಮಹಿಳಾ ಏಕದಿನ ಕ್ರಿಕೆಟ್ ವಿಶ್ವಕಪ್ ಅನ್ನು ಆಸ್ಟ್ರೇಲಿಯಾ ತನ್ನದಾಗಿಸಿಕೊಂಡಿದೆ. ಆರು ಬಾರಿ ಚಾಂಪಿಯನ್ ಆಗಿದ್ದ ಆಸ್ಟ್ರೇಲಿಯಾ ತಂಡ 2017ರಲ್ಲಿ ನಡೆದ ವಿಶ್ವಕಪ್ ಸೆಮಿಫೈನಲ್ನಲ್ಲಿ ಪರಾಭವಗೊಂಡಿತ್ತು. 1978, 1982, 1988, 1997, 2005, 2013ರಲ್ಲಿ ಆಸಿಸ್ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಮಹಿಳೆಯರ ವಿಶ್ವಕಪ್ ಕ್ರಿಕೆಟ್: 7ನೇ ಬಾರಿ ಆಸ್ಟ್ರೇಲಿಯಾ ಚಾಂಪಿಯನ್ - ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್
ನ್ಯೂಜಿಲ್ಯಾಂಡ್ನ ಕ್ರೈಸ್ಟ್ ಚರ್ಚ್ನ ಹಾಗ್ಲೆ ಓವಲ್ ಕ್ರೀಡಾಂಗಣದಲ್ಲಿ ನಡೆದ ಮಹಿಳೆಯ ಏಕದಿನ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವನಿತೆಯರ ತಂಡ ಬೃಹತ್ ರನ್‌ಗಳ ಅಂತರದಿಂದ ಗೆಲುವು ಸಾಧಿಸಿತು.
ಇಂದು ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡವು ಇಂಗ್ಲೆಂಡ್‌ಗೆ 357 ರನ್‌ಗಳ ಬೃಹತ್ ಗುರಿ ನೀಡಿತು. ಆಸಿಸ್ ಪರ ಶತಕದಾಟವಾಡಿದ ಅಲಿಸ್ಸಾ ಹೀಲಿ 138 ಎಸೆತಗಳಿಗೆ 170 ರನ್ ಗಳಿಸಿ ವಿನೂತನ ದಾಖಲೆ ಬರೆದರು. ಹೀಲಿ ಜೊತೆಗೆ ಆರ್.ಹೇನ್ಸ್ 68 ರನ್, ಬೆತ್ ಮೂನಿ 62 ರನ್ ಗಳಿಸಿ ತಂಡ ಹೆಚ್ಚು ಮೊತ್ತ ದಾಖಲಿಸಲು ನೆರವಾದರು. ಇಂಗ್ಲೆಂಡ್ ತಂಡದ ಬೌಲಿಂಗ್ ವಿಚಾರಕ್ಕೆ ಬರುವುದಾದರೆ, ಅನ್ಯ ಶ್ರಬ್ಸೋಲ್ 3 ವಿಕೆಟ್ ಹಾಗು ಎಕ್ಲೆಸ್ಟೋನ್ 1 ವಿಕೆಟ್ ಪಡೆದರು.
357 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡದ ಪರವಾಗಿ ಶತಕದಾಟವಾಡಿದ ನಥಾಲಿ ಸಿವರ್ 142 ರನ್ ಗಳಿಸಿದ್ದು ವ್ಯರ್ಥವಾಯಿತು. ಇನ್ನುಳಿದಂತೆ, ಟ್ಯಾಮಿ ಬ್ಯೂಮೊಂಟ್ 27, ಹೀಥರ್ ನೈಟ್ 26, ಆ್ಯಮಿ ಜೋನ್ಸ್, 20, ಸೋಫಿಯಾ ಡಂಕ್ಲೆ 23, ಚಾರ್ಲಿ ಡೀನ್ 21 ರನ್ಗಳನ್ನಷ್ಟೇ ಗಳಿಸಿದರು. ಆಸ್ಟ್ರೇಲಿಯಾ ಮಾರಕ ಬೌಲಿಂಗ್ ದಾಳಿ ನಡೆಸಿದ್ದು, ಅಲನಾ ಕಿಂಗ್, ಜೆಸ್ ಜೊನಾಸ್ಸೆನ್ ತಲಾ ಮೂರು ವಿಕೆಟ್, ಮೆಗಾನ್ ಶುಟ್ 2, ತಹಿಲಾ ಮೆಗ್ರಾತ್ ಮತ್ತು ಅಶ್ಲೆ ಗಾರ್ಡನರ್ ತಲಾ ಒಂದು ವಿಕೆಟ್ ಪಡೆದಿದ್ದಾರೆ.