ಬ್ರಿಸ್ಬೇನ್ :ಆಸ್ಟ್ರೇಲಿಯಾ-ಇಂಗ್ಲೆಂಡ್ ತಂಡಗಳ ನಡುವೆ ಆರಂಭಗೊಂಡಿರುವ ಮೊದಲ ಆ್ಯಶಸ್ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಆಂಗ್ಲ ಪಡೆ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡ್ತಿದೆ. ಮೂರನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ನಷ್ಟಕ್ಕೆ 220 ರನ್ಗಳಿಕೆ ಮಾಡಿದ್ದು, 58 ರನ್ಗಳ ಹಿನ್ನೆಡೆಯಲ್ಲಿದೆ.
ಮೊದಲ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ಬೌಲಿಂಗ್ ದಾಳಿಗೆ ಸಂಪೂರ್ಣವಾಗಿ ತತ್ತರಿಸಿ ಕೇವಲ 147 ರನ್ಗಳಿಗೆ ಆಂಗ್ಲರ ಪಡೆ ಆಲೌಟ್ ಆಗಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಬ್ಯಾಟಿಂಗ್ ನಡೆಸಿದ್ದ ಆಸ್ಟ್ರೇಲಿಯಾ ತಂಡ ವಾರ್ನರ್ 94 ರನ್ ಹಾಗೂ ಟ್ರಾವಿಸ್ ಹೆಡ್ ಅಬ್ಬರದ 152 ರನ್ಗಳ ಸಹಾಯದಿಂದ 425 ರನ್ಗಳಿಕೆ ಮಾಡಿತ್ತು. ಜೊತೆಗೆ 278ರನ್ಗಳ ಮುನ್ನಡೆ ಪಡೆದುಕೊಂಡಿತ್ತು.
ಇದೀಗ ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಆರಂಭಿಸಿರುವ ಇಂಗ್ಲೆಂಡ್ ತಂಡ ಆರಂಭದಲ್ಲೇ ಎರಡು ವಿಕೆಟ್ ಕಳೆದುಕೊಂಡ ಹೊರತಾಗಿ ಕೂಡ ಡೇವಿಡ್ ಮಲನ್ ಅಜೇಯ 80ರನ್ ಹಾಗೂ ಕ್ಯಾಪ್ಟನ್ ರೂಟ್ ಅವರ ಅಜೇಯ 86 ರನ್ಗಳ ಸಹಾಯದಿಂದ 159ರನ್ಗಳ ಜೊತೆಯಾಟ ನೀಡಿದ್ದಾರೆ.