ಮೆಲ್ಬೋರ್ನ್(ಆಸ್ಟ್ರೇಲಿಯಾ):ಸೆಪ್ಟೆಂಬರ್ 20ರಿಂದ ಭಾರತದ ವಿರುದ್ಧ ಆರಂಭಗೊಳ್ಳಿರುವ ಮೂರು ಪಂದ್ಯಗಳ ಟಿ20 ಸರಣಿ ಹಾಗೂ ಮುಂಬರುವ ಟಿ20 ವಿಶ್ವಕಪ್ಗೋಸ್ಕರ ಆಸ್ಟ್ರೇಲಿಯಾ ತಂಡ ಪ್ರಕಟಗೊಂಡಿದೆ. ಮುಖ್ಯವಾಗಿ ಟಿ-20 ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಸ್ಫೋಟಕ ಬ್ಯಾಟರ್ ಡೇವಿಡ್ ವಾರ್ನರ್ಗೆ ವಿಶ್ರಾಂತಿ ನೀಡಲಾಗಿದೆ.
ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾಗಿಯಾಗುವುದಕ್ಕೂ ಮುಂಚಿತವಾಗಿ ಆಸ್ಟ್ರೇಲಿಯಾ ಭಾರತದ ಪ್ರವಾಸ ಕೈಗೊಳ್ಳಲಿದ್ದು, ಈ ಟೂರ್ನಾಮೆಂಟ್ನಲ್ಲಿ ಭಾಗಿಯಾಗಲಿರುವ ತಂಡ ಪ್ರಕಟಗೊಂಡಿದೆ. ಡೇವಿಡ್ ವಾರ್ನರ್ಗೆ ವಿಶ್ರಾಂತಿ ನೀಡಲಾಗಿದ್ದು, ಅವರ ಸ್ಥಾನಕ್ಕೆ ಕ್ಯಾಮರೂನ್ ಗ್ರೀನ್ ಆಯ್ಕೆಯಾಗಿದ್ದಾರೆ.ಪಂಜಾಬ್ನ ಮೊಹಾಲಿಯಲ್ಲಿ ಸೆಪ್ಟೆಂಬರ್ 20 ರಂದು ಮೊದಲ T20 ಪಂದ್ಯ ಆರಂಭಗೊಳ್ಳಿದ್ದು, ತದನಂತರ ಎರಡನೇ ಪಂದ್ಯ (ಸೆಪ್ಟೆಂಬರ್ 23), ಮೂರನೇ (ಸೆಪ್ಟೆಂಬರ್ 25) ಪಂದ್ಯಗಳು ಕ್ರಮವಾಗಿ ನಾಗ್ಪುರ ಮತ್ತು ಹೈದರಾಬಾದ್‌ನಲ್ಲಿ ನಡೆಯಲಿವೆ.
ಆಸ್ಟ್ರೇಲಿಯಾ ಆಯ್ಕೆದಾರರ ಆಯ್ಕೆ ಸಮಿತಿ ಅಧ್ಯಕ್ಷ ಜಾರ್ಜ್ ಬೈಲಿ ಮಾತನಾಡಿದ್ದು, ಕ್ಯಾಮರೂನ್ ಆಟದಲ್ಲಿ ಸುಧಾರಣೆ ಕಂಡು ಬಂದಿದ್ದು, ಹೀಗಾಗಿ, ಟಿ20 ಸರಣಿಯಲ್ಲಿ ಅವಕಾಶ ನೀಡಿದ್ದೇವೆ ಎಂದಿದ್ದಾರೆ.ಭಾರತದ ಪ್ರವಾಸದ ಬಳಿಕ ಆಸ್ಟ್ರೇಲಿಯಾ ತವರು ನೆಲದಲ್ಲಿ ವೆಸ್ಟ್ ಇಂಡೀಸ್, ಇಂಗ್ಲೆಂಡ್ ಹಾಗೂ ತದನಂತರ ಭಾರತದ ವಿರುದ್ಧ ಮತ್ತೊಮ್ಮೆ ಟಿ20 ಸರಣಿಯಲ್ಲಿ ಸೆಣಸಲಿದೆ. ತಂಡದಲ್ಲಿ ಮುಖ್ಯವಾಗಿ ಟಿಮ್ ಡೇವಿಡ್ಗೆ ಅವಕಾಶ ನೀಡಲಾಗಿದೆ.