ಅಡಿಲೇಡ್: ಪ್ರತಿಷ್ಠಿತ ಆ್ಯಶಸ್ ಸರಣಿಯ 2ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಪ್ರವಾಸಿ ಇಂಗ್ಲೆಂಡ್ಗೆ ಗೆಲ್ಲಲು 468 ರನ್ಗಳ ಅಸಾಧ್ಯ ಗುರಿಯನ್ನು ನೀಡಿದೆ. 237 ರನ್ಗಳ ಮೊದಲ ಇನ್ನಿಂಗ್ಸ್ ಮುನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 4ನೇ ದಿನ 9 ವಿಕೆಟ್ ಕಳೆದುಕೊಂಡು 230 ರನ್ಗಳಿಸಿದ್ದ ವೇಳೆ ಡಿಕ್ಲೇರ್ ಘೋಷಿಸಿಕೊಂಡು 468 ರನ್ಗಳ ಬೃಹತ್ ಗುರಿ ನೀಡಿತು.
ಮೊದಲ ಇನ್ನಿಂಗ್ಸ್ನಲ್ಲಿ ಶತಕ ಸಿಡಿಸಿದ್ದ ಮಾರ್ನಸ್ ಲಾಬುಶೇನ್ 2ನೇ ಇನ್ನಿಂಗ್ಸ್ನಲ್ಲಿ 51 ರನ್ ಗಳಿಸಿದರೆ, ಮೊದಲ ಪಂದ್ಯದ ಹೀರೋ ಟ್ರಾವಿಸ್ ಹೆಡ್ ಕೂಡ 51 ರನ್ಗಳಿಸಿದರು. ಇಂಗ್ಲೆಂಡ್ ಪರ ಡೇವಿಡ್ ಮಲನ್ 33ಕ್ಕೆ2, ಜೋರೂಟ್ 27ಕ್ಕೆ 2, ರಾಬಿನ್ಸನ್ 54ಕ್ಕೆ2, ಸ್ಟುವರ್ಟ್ ಮತ್ತು ಜೇಮ್ಸ್ ಆ್ಯಂಡರ್ಸನ್ ತಲಾ ಒಂದು ವಿಕೆಟ್ ಪಡೆದರು.
ಇಂಗ್ಲೆಂಡ್ ಆರಂಭಿಕ ಆಘಾತ