ಕರಾಚಿ:ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲೂ ಬ್ಯಾಟರ್ಗಳೇ ಪ್ರಾಬಲ್ಯ ಸಾಧಿಸಿದ್ದಾರೆ. ಪ್ರವಾಸಿ ತಂಡ ಬರೋಬ್ಬರಿ 2 ದಿನದಲ್ಲಿ 180 ಓವರ್ ಬ್ಯಾಟಿಂಗ್ ಮಾಡಿ 505 ರನ್ಗಳಿಸಿ 3ನೇ ದಿನಕ್ಕೂ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದೆ. ತವರಿನ ಲಾಭ ಪಡೆಯುವಲ್ಲಿ ವಿಫಲರಾಗಿರುವ ಪಾಕಿಸ್ತಾನ ಎರಡು ದಿನಗಳಲ್ಲಿ 8 ವಿಕೆಟ್ ಪಡೆದುಕೊಂಡಿದೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ಒಂದು ಇನ್ನಿಂಗ್ಸ್ನಲ್ಲಿ ಮಾತ್ರ ಪ್ರವಾಸಿ ತಂಡದ ಎಲ್ಲಾ ವಿಕೆಟ್ ಪಡೆದರೆ, ಇತ್ತ ಆಸೀಸ್ ತಂಡ 2 ಇನ್ನಿಂಗ್ಸ್ ಸೇರಿ ಅತಿಥೇಯ ತಂಡದ 4 ವಿಕೆಟ್ಗಳನ್ನು ಮಾತ್ರ ಪಡೆದಿತ್ತು.ಇದೀಗ 2ನೇ ಟೆಸ್ಟ್ನಲ್ಲೂ ಬ್ಯಾಟರ್ಗಳಿಗೆ ಸೀಮಿತವಾಗಿದ್ದು, 2 ದಿನಗಳ ಕಾಲ ಬ್ಯಾಟಿಂಗ್ ಮಾಡಿರುವ ಆಸ್ಟ್ರೇಲಿಯಾ 8 ವಿಕೆಟ್ ಕಳೆದುಕೊಂಡು 505ರನ್ಗಳಿಸಿ 3ನೇ ದಿನಕ್ಕೂ ಬ್ಯಾಟಿಂಗ್ ಕಾಯ್ದಿರಿಸಿಕೊಂಡಿದೆ.
ಮೊದಲ ದಿನ ಆಸ್ಟ್ರೇಲಿಯಾ ತಂಡ 3 ವಿಕೆಟ್ ಕಳೆದುಕೊಂಡು 251 ರನ್ಗಳಿಸಿತ್ತು. ಉಸ್ಮಾನ್ ಖವಾಜ ಅಜೇಯ 126 ಮತ್ತು ನೇಥನ್ ಲಿಯಾನ್ ಖಾತೆ ತೆರೆಯದೇ ಕ್ರೀಸ್ನಲ್ಲಿದ್ದರು.