ಕರ್ನಾಟಕ

karnataka

ETV Bharat / sports

'ಶ್ರೇಷ್ಠರಲ್ಲಿ ಒಬ್ಬರು..': ವಿರಾಟ್​ ಕೊಹ್ಲಿ ಬಗ್ಗೆ ಆಸಿಸ್​ ಆಟಗಾರರ ಏಕೈಕ ಅಭಿಪ್ರಾಯ - Mitchell Starc

ವಿರಾಟ್​ ಕೊಹ್ಲಿಯ ಬಗ್ಗೆ ಆಸ್ಟ್ರೇಲಿಯಾ ಆಟಗಾರರಲ್ಲಿ ಅಭಿಪ್ರಾಯವನ್ನು ಐಸಿಸಿ ಸಂಗ್ರಹಿಸಿದೆ. ತನ್ನ ಇನ್​ಸ್ಟಾಗ್ರಾಮ್​ನ ಪೇಜ್​ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ ವಿರಾಟ್​ರನ್ನು ಎಲ್ಲರೂ ಶ್ರೇಷ್ಠ ಆಟಗಾರ ಎಂದಿದ್ದಾರೆ.

'ಶ್ರೇಷ್ಠರಲ್ಲಿ ಒಬ್ಬರು...': ವಿರಾಟ್​ ಕೊಹ್ಲಿ ಬಗ್ಗೆ ಆಸಿಸ್​ ಆಟಗಾರರ ಏಕೈಕ ಅಭಿಪ್ರಾಯ
'ಶ್ರೇಷ್ಠರಲ್ಲಿ ಒಬ್ಬರು...': ವಿರಾಟ್​ ಕೊಹ್ಲಿ ಬಗ್ಗೆ ಆಸಿಸ್​ ಆಟಗಾರರ ಏಕೈಕ ಅಭಿಪ್ರಾಯ

By

Published : Jun 4, 2023, 7:30 PM IST

ವಿರಾಟ್​ ಕೊಹ್ಲಿಯ ಆಟಕ್ಕೆ ವಿಶ್ವ ಮನ್ನಣೆ ದೊರೆತಿದೆ ಎಂದರೆ ತಪ್ಪಾಗದು. ಅವರ ದಾಖಲೆಗಳು ಅವರು ಗಳಿಸುವ ರನ್​ ಮತ್ತು ಅವರ ಬ್ಯಾಟಿಂಗ್​ ಶೈಲಿಗೆ ಕ್ರಿಕೆಟ್​ ಪ್ರಿಯರಂತೂ ಮೆಚ್ಚುತ್ತಾರೆ. ಕ್ರಿಕೆಟ್​ ಬಗ್ಗೆ ತಿಳಿಯದಿದ್ದರೂ ವಿರಾಟ್​ ಕೊಹ್ಲಿ ಅವರ ಆಟದ ಬಗ್ಗೆ ಮಾತನಾಡುವ ಮತ್ತು ಅವರ ಬ್ಯಾಟಿಂಗ್​ ಇಷ್ಟ ಪಡುವ ಬಹಳಷ್ಟು ಜನರಿದ್ದಾರೆ.

ಎರಡು ವರ್ಷಗಳ ಹಿಂದೆ ವಿರಾಟ್​ ಲಯ ಕಳೆದುಕೊಂಡು ರನ್​ ಗಳಿಸಲು ಪರದಾಡುತ್ತಿದ್ದರು. ಆದರೆ ಟಿ20 ಏಷ್ಯಾ ಕಪ್​ನಲ್ಲಿ ಫಾರ್ಮ್​ಗೆ ಮರಳಿರುವ ಕೊಹ್ಲಿ ಮತ್ತೆ ತಮ್ಮ ಬ್ಯಾಟ್​ ಮುಖಾಂತರ ಘರ್ಜಿಸಲು ಪ್ರಾರಂಭಿಸಿದ್ದಾರೆ. ವಿರಾಟ್ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ನಲ್ಲಿ ಆಸ್ಟ್ರೇಲಿಯನ್​ ಬೌಲರ್​ಗಳನ್ನು ಕಾಡುವುದರಲ್ಲಿ ಅನುಮಾನವಿಲ್ಲ. ಈ ಬಗ್ಗೆ ಆಸ್ಟ್ರೇಲಿಯನ್​ ಆಟಗಾರರಿಗೆ ಭಯ ಇದೆ. ಅವರೇ ವಿರಾಟ್​ ಫಾರ್ಮ್​ ಬಗ್ಗೆ ಮಾತಾಡಿದ್ದಾರೆ. ಅಲ್ಲದೇ ಹಿರಿಯ ಆಟಗಾರರು ಆಸ್ಟ್ರೇಲಿಯಾಕ್ಕೆ ವಿರಾಟ್​ ಕೊಹ್ಲಿ ಒಂದು ಥ್ರೆಟ್​ ಎಂದಿದ್ದಾರೆ. ಅದಕ್ಕೆ ಕಿಂಗ್​ ಕೊಹ್ಲಿ ಆಸಿಸ್​ ಮೇಲೆ ಗಳಿಸಿರುವ ರನ್​ ದಾಖಲೆಯೂ ಕಾರಣ.

2021ರಲ್ಲಿ ವಿರಾಟ್​ ಕೊಹ್ಲಿಗೆ ನಾಯಕತ್ವದ ಜವಾಬ್ದಾರಿಯಿಂದ ಟೆಸ್ಟ್​ ಚಾಂಪಿಯನ್​ಶಿಪ್​ನ್ನು ಗೆದ್ದಕೊಳ್ಳಲು ಆಗಿಲ್ಲ. ಈಗ ಆಟಗಾರನಾಗಿ ಭಾರತಕ್ಕೆ ಟೆಸ್ಟ್​ ಗದೆಯನ್ನು ಗೆದ್ದು ತರುವ ಚಿಂತನೆಯಲ್ಲಿ ರನ್​ ಮಷಿನ್​ ಇದ್ದಾರೆ. 2021 ರಲ್ಲಿ ಭಾರತ ಫೈನಲ್​ ಪಂದ್ಯವನ್ನು ಆಡಿತ್ತು ಮತ್ತು ರನ್ನರ್​ ಅಪ್​ಆಗಿ ಹೊರಹೊಮ್ಮಿತ್ತು. ನ್ಯೂಜಿಲೆಂಡ್​ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಈ ಬಾರಿ ಆಸಿಸ್​ ವಿರುದ್ಧ ಇಂಗ್ಲೆಂಡ್​ನ ಮೈದಾನದಲ್ಲಿ ಭಾರತ ಕಣಕ್ಕಿಳಿಯುತ್ತಿದೆ.

ವಿರಾಟ್​ ಆಸ್ಟ್ರೇಲಿಯಾದ ವಿರುದ್ಧ ಉತ್ತಮ ರೆಕಾರ್ಡ್​ ಹೊಂದಿದ್ದಾರೆ. ಕಾಂಗರೂ ಪಡೆಯ ಎದುರಿಸಿ ಆಡುರುವ 24 ಪಂದ್ಯಗಳಲ್ಲಿ 48.26 ಸರಾಸರಿಯಲ್ಲಿ 1979 ರನ್ ಗಳಿಸಿದರು. ಕೊಹ್ಲಿ ಟೆಸ್ಟ್‌ಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ 8 ಶತಕಗಳನ್ನು ಗಳಿಸಿದ್ದಾರೆ, ಈ ವರ್ಷದ ಆರಂಭದಲ್ಲಿ ಅಹಮದಾಬಾದ್‌ನಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿ 2023 ರ ನಾಲ್ಕನೇ ಟೆಸ್ಟ್‌ನಲ್ಲಿ ಅವರ ವಿರುದ್ಧ 186 ರನ್ ಗಳಿಸಿದ್ದರು.

ಕೊಹ್ಲಿ ಡಬ್ಲ್ಯೂಟಿಸಿ ಫೈನಲ್‌ಗೆ ತಯಾರಿ ನಡೆಸುತ್ತಿದ್ದಾರೆ. ಅವರು ಅದ್ಭುತ ಈ ಆವೃತ್ತಿಯ ಐಪಿಎಲ್​ನಲ್ಲಿ 2023 ಉತ್ತಮ ಲಯುದಲ್ಲಿ ಕಂಡುಬಂದಿದ್ದರು. ಐಪಿಎಲ್​ನಲ್ಲಿ 14 ಪಂದ್ಯದಲ್ಲಿ 2ಶತಕ ಮತ್ತು 6 ಅರ್ಧ ಶತಕದಿಂದ ಒಟ್ಟು 639 ರನ್‌ಗಳನ್ನು ಗಳಿಸಿದರು. ಈ ಆವೃತ್ತಿಯ ಐಪಿಎಲ್​ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ನಾಲ್ಕನೇ ಬ್ಯಾಟರ್​ ಆಗಿ ಹೊರಹೊಮ್ಮಿದ್ದಾರೆ.

ವಿರಾಟ್​ ಕೊಹ್ಲಿಯ ಬಗ್ಗೆ ಆಸ್ಟ್ರೇಲಿಯಾದ ಕ್ಯಾಮರೂನ್ ಗ್ರೀನ್, ಮಾರ್ನಸ್ ಲಬುಶೇನ್​, ಡೇವಿಡ್ ವಾರ್ನರ್ ಮತ್ತು ಪ್ಯಾಟ್ ಕಮ್ಮಿನ್ಸ್ ಸೇರಿದಂತೆ ತಮ್ಮ ಅಭಿಪ್ರಾಯವನ್ನು ಹೇಳಿಕೊಂಡಿದ್ದಾರೆ. ಐಸಿಸಿ ಇನ್​​ಸ್ಟಾಗ್ರಾಮ್​ನಲ್ಲಿ ಆಸಿಸ್​ ಆಟಗಾರರು ಕೊಹ್ಲಿ ಬಗ್ಗೆ ಹೇಳುತ್ತಿರುವ ವಿಡಿಯೋವನ್ನು ಹಂಚಿಕೊಂಡಿದೆ.

ಗ್ರೀನ್ ವಿರಾಟ್ ಕೊಹ್ಲಿಯನ್ನು ಭಾರತ ಕ್ರಿಕೆಟ್ ತಂಡದ ಸರ್ವೋತ್ಕೃಷ್ಟ ನಾಯಕ ಎಂದು ಉಲ್ಲೇಖಿಸಿದ್ದಾರೆ. ಗ್ರೀನ್ ಕೊಹ್ಲಿ ಅವರ ಕ್ರೀಡೆಯಲ್ಲಿನ ಅಚಲ ಬದ್ಧತೆಯನ್ನು ಮತ್ತು ತಂಡವನ್ನು ಮುನ್ನಡೆಸುವ ಅವರ ಸಾಮರ್ಥ್ಯವನ್ನು ಶ್ಲಾಘಿಸಿದರು. ಅವರ ಅಸಾಧಾರಣ ನಾಯಕತ್ವದ ಕೌಶಲ್ಯಕ್ಕೆ ಅವರ ದಶಕದ ಅವಧಿ ಸಾಕ್ಷಿಯಾಗಿದೆ ಎಂದಿದ್ದಾರೆ. "ಭಾರತದ ಹೆಮ್ಮೆಯ ಆಟಗಾರ, ಅವರು ಸ್ವಲ್ಪ ಸಮಯದವರೆಗೆ ನಾಯಕತ್ವದಲ್ಲಿ ಇದ್ದರು ಮತ್ತು ಅವರು ಮೂಲತಃ ಕಳೆದ ದಶಕದಿಂದ ತಂಡವನ್ನು ಚೆನ್ನಾಗಿ ಮುನ್ನಡೆಸಿದ್ದಾರೆ ಮತ್ತು ತುಂಬಾ ಯಶಸ್ವಿಯಾಗಿದ್ದಾರೆ" ಎಂದು ಗ್ರೀನ್ ಹೊಗಳಿದರು.

ಡೇವಿಡ್ ವಾರ್ನರ್ ಅವರು ಕೊಹ್ಲಿಯ ಅದ್ಭುತ ಕವರ್ ಡ್ರೈವ್‌ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಆದರೆ ಮಾರ್ನಸ್ ಲಬುಶೇನ್ 34 ವರ್ಷದ ಆಟಗಾರನನ್ನು ಆಟದ ಎಲ್ಲಾ ಸ್ವರೂಪಗಳಲ್ಲಿ ಶ್ರೇಷ್ಠರಲ್ಲಿ ಒಬ್ಬರು ಎಂದು ಬಣ್ಣಿಸಿದರು. ಉಸ್ಮಾನ್ ಖವಾಜಾ ಕೊಹ್ಲಿಯನ್ನು "ಸ್ಪರ್ಧಾತ್ಮಕ" ಎಂದು ಉಲ್ಲೇಖಿಸಿದ್ದಾರೆ ಮತ್ತು ಮಿಚೆಲ್ ಸ್ಟಾರ್ಕ್ ಅವರ ಪ್ರಭಾವಶಾಲಿ ಕೌಶಲ್ಯಗಳನ್ನು ಶ್ಲಾಘಿಸಿ, ಭಾರತೀಯ ಮಧ್ಯಮ ಕ್ರಮಾಂಕದ ಬೆನ್ನೆಲುಬು ಎಂದು ಕರೆದಿದ್ದಾರೆ.

ಕಮ್ಮಿನ್ಸ್ ಕೊಹ್ಲಿಯನ್ನು ಉತ್ತಮ ಆಟಗಾರ ಎಂದು ಬಣ್ಣಿಸಿದರು, ಅವರು ಯಾವಾಗಲೂ ಹೋರಾಟಕ್ಕೆ ಸಿದ್ಧರಾಗಿದ್ದಾರೆ ಎಂದಿದ್ದಾರೆ. ಸ್ಟೀವ್ ಸ್ಮಿತ್ ಅವರನ್ನು ಆಟದ ನಿಜವಾದ ಸೂಪರ್‌ಸ್ಟಾರ್ ಎಂದು ಶ್ಲಾಘಿಸಿದ್ದಾರೆ. "ಅವರು ದೀರ್ಘಕಾಲದಿಂದ ಸೂಪರ್‌ಸ್ಟಾರ್ ಆಗಿದ್ದಾರೆ, ಆಸ್ಟ್ರೇಲಿಯಾ ವಿರುದ್ಧ ಆಡುವುದನ್ನು ಇಷ್ಟಪಡುತ್ತಾರೆ. ಆಗಾಗ್ಗೆ ನಮ್ಮ ವಿರುದ್ಧ ರನ್ ಗಳಿಸುತ್ತಾರೆ. ಆದರೆ ಈ ವಾರ ನಾವು ಅವರನ್ನು ಕಟ್ಟಿಹಾಕಲು ಬಯಸುತ್ತೇವೆ" ಎಂದು ಸ್ಮಿತ್ ಹೇಳಿದರು.

ಇದನ್ನೂ ಓದಿ:ತೂಗುಗತ್ತಿಯ ಮೇಲೆ ರಹಾನೆ ಸ್ಥಾನ: ಟೆಸ್ಟ್​​ ಚಾಂಪಿಯನ್​ಶಿಪ್​ನಲ್ಲಿ ಬೆಸ್ಟ್​​ ಪ್ರದರ್ಶನ ನೀಡಲೇಬೇಕು

ABOUT THE AUTHOR

...view details