ಕರ್ನಾಟಕ

karnataka

ETV Bharat / sports

ಟೆಸ್ಟ್ ಕ್ರಿಕೆಟ್​ನಿಂದ ನಿವೃತ್ತಿ ಹೊಂದುವ ಸುಳಿವು ನೀಡಿದ ಡೇವಿಡ್​ ವಾರ್ನರ್​

ಮುಂಬರುವ 12 ತಿಂಗಳುಗಳು ನನ್ನ ಟೆಸ್ಟ್ ಕ್ರಿಕೆಟ್‌ನಲ್ಲಿ ಕೊನೆಯ ದಿನಗಳಾಗಬಹುದು ಎಂದು ಆಸ್ಟ್ರೇಲಿಯಾ ತಂಡದ ಬ್ಯಾಟರ್​ ಡೇವಿಡ್ ವಾರ್ನರ್ ಹೇಳಿದ್ದಾರೆ.

Australia opening batter David Warner hints at Test retirement
ಟೆಸ್ಟ್ ಕ್ರಿಕೆಟ್​ನಿಂದ ನಿವೃತ್ತಿ ಹೊಂದುವ ಸುಳಿವು ನೀಡಿದ ಡೆವಿಡ್​ ವಾರ್ನರ್​

By

Published : Nov 14, 2022, 1:34 PM IST

ಆಸ್ಟ್ರೇಲಿಯಾ ಕ್ರಿಕೆಟ್​ ತಂಡದ ಆರಂಭಿಕ ಬ್ಯಾಟರ್​ ಡೇವಿಡ್ ವಾರ್ನರ್ ಮುಂದಿನ ವರ್ಷ ಟೆಸ್ಟ್ ಕ್ರಿಕೆಟ್​ನಿಂದ ನಿವೃತ್ತಿ ಹೊಂದುವ ಬಗ್ಗೆ ಸುಳಿವು ನೀಡಿದ್ದಾರೆ. ಆದರೆ ಅವರು ವೈಟ್​​ ಬಾಲ್ ಕ್ರಿಕೆಟ್ ಅಂಗಳದಲ್ಲಿ ಮುಂದುವರೆಯುವ ಸಾಧ್ಯತೆಯಿದೆ.

ಆತಿಥೇಯ ಆಸ್ಟ್ರೇಲಿಯಾ ತಂಡವು ಟಿ20 ವಿಶ್ವಕಪ್‌ನಿಂದ ಬೇಗ ನಿರ್ಗಮಿಸಿದ ಬಳಿಕ ವಾರ್ನರ್ ಈ ಹೇಳಿಕೆ ನೀಡಿದ್ದಾರೆ. 'ಬಹುಶಃ ನಾನು ಟೆಸ್ಟ್ ಕ್ರಿಕೆಟ್​ನಿಂದ ಮೊದಲ ದೂರ ಉಳಿಯಬಹುದು. ಮುಂಬರುವ 12 ತಿಂಗಳುಗಳು ನನ್ನ ಟೆಸ್ಟ್ ಕ್ರಿಕೆಟ್‌ನಲ್ಲಿ ಕೊನೆಯ ದಿನಗಳೂ ಆಗಬಹುದು. ಯಾಕೆಂದರೆ ಟಿ20 ವಿಶ್ವಕಪ್ ಟೂರ್ನಿಯು 2024 ಹಾಗೂ 2023ರಲ್ಲಿ ಏಕದಿನ ವಿಶ್ವಕಪ್ ಟೂರ್ನಿ ಇದೆ' ಎಂದು ಆಸ್ಟ್ರೇಲಿಯಾದ ಟಿವಿ ಕಾರ್ಯಕ್ರಮವೊಂದರಲ್ಲಿ ವಾರ್ನರ್ ಹೇಳಿದ್ದಾರೆ.

ಇದೇ ವೇಳೆ, ನಾನು ವೈಟ್​​​ ಬಾಲ್ ಕ್ರಿಕೆಟ್​ನ್ನೂ ಪ್ರೀತಿಸುತ್ತೇನೆ, ಅದೊಂದು ಅದ್ಭುತ. 2024ರ ಟಿ20 ವಿಶ್ವಕಪ್​ನಲ್ಲೂ ಆಡಲು ಬಯಸುತ್ತೇನೆ ಎನ್ನುತ್ತಾರೆ ವಾರ್ನರ್​. 36 ವರ್ಷದ ಎಡಗೈ ಬ್ಯಾಟರ್ 2011ರಲ್ಲಿ ತಂಡಕ್ಕೆ ಪಾದಾರ್ಪಣೆ ಮಾಡಿದ ಬಳಿಕ 96 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 24 ಶತಕ ಮತ್ತು 34 ಅರ್ಧಶತಕಗಳೊಂದಿಗೆ 46.52 ಸರಾಸರಿಯಲ್ಲಿ 7,817 ರನ್ ಪೇರಿಸಿದ್ದಾರೆ. ಅಲ್ಲದೆ, ಏಕದಿನ ಕ್ರಿಕೆಟ್​ನಲ್ಲಿ 138 ಪಂದ್ಯಗಳಿಂದ 5,799 ರನ್ ಹಾಗೂ ಮತ್ತು 99 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 2,894 ರನ್ ಬಾರಿಸಿದ್ದಾರೆ.

2023ರಲ್ಲಿ ಆಸ್ಟ್ರೇಲಿಯಾವು ಬಿಡುವಿಲ್ಲದ ಟೆಸ್ಟ್ ಕ್ರಿಕೆಟ್ ವೇಳಾಪಟ್ಟಿ ಹೊಂದಿದ್ದು, ಭಾರತದಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿ (ಫೆಬ್ರವರಿ-ಮಾರ್ಚ್) ಮತ್ತು ಇಂಗ್ಲೆಂಡ್‌ನಲ್ಲಿ ಜೂನ್ 16ರಿಂದ ಜುಲೈ 31ರವರೆಗೆ ಆ್ಯಶಸ್ ಸರಣಿ ಆಡಲಿದೆ. ಮುಂದಿನ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ಏಕದಿನ ವಿಶ್ವಕಪ್ ಭಾರತದಲ್ಲಿ ನಡೆಯಲಿದ್ದು, 2024ರಲ್ಲಿ ಕೆರಿಬಿಯನ್ ಮತ್ತು ಅಮೆರಿಕದ ಸಹಭಾಗಿತ್ವದಲ್ಲಿ ಟಿ20 ವಿಶ್ವಕಪ್ ಪಂದ್ಯಾವಳಿ ಆಯೋಜನೆಗೊಂಡಿದೆ.

ಇದನ್ನೂ ಓದಿ:ಟಿ20 ವಿಶ್ವಕಪ್‌ 11 ಬಳಗಕ್ಕೆ ಬಟ್ಲರ್​ ನಾಯಕ: ತಂಡದಲ್ಲಿ ಇಬ್ಬರು ಭಾರತೀಯರಿಗೆ ಸ್ಥಾನ

ABOUT THE AUTHOR

...view details