ಕೈರ್ನ್ಸ್(ಆಸ್ಟ್ರೇಲಿಯಾ): ಪ್ರವಾಸಿ ನ್ಯೂಜಿಲ್ಯಾಂಡ್ ತಂಡದ ವಿರುದ್ಧ ನಿನ್ನೆ ನಡೆದ ಏಕದಿನ ಪಂದ್ಯದಲ್ಲಿ 113 ರನ್ಗಳ ಭರ್ಜರಿ ಗೆಲುವು ದಾಖಲು ಮಾಡಿರುವ ಆಸ್ಟ್ರೇಲಿಯಾ ತಂಡ ಒಂದು ಪಂದ್ಯ ಬಾಕಿ ಇರುವಾಗಲೇ ಸರಣಿ ಗೆದ್ದುಕೊಂಡಿತು.
ಗುರುವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 195 ರನ್ಗಳಿಸಿದರೆ, ನ್ಯೂಜಿಲ್ಯಾಂಡ್ 33 ಓವರ್ಗಳಲ್ಲಿ ಕೇವಲ 82 ರನ್ಗಳಿಗೆ ಆಲೌಟ್ ಆಯಿತು. ಲೆಗ್ಸ್ಪಿನ್ನರ್ ಜಂಪಾ ಕೈಚಳಕದ ಮುಂದೆ ಕಿವೀಸ್ ಆಟ ನಡೆಯಲಿಲ್ಲ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾದ ಮಾಜಿ ಕ್ಯಾಪ್ಟನ್ ಸ್ಟೀವ್ ಸ್ಮಿತ್ (61), ಸ್ಟಾರ್ಕ್ಸ್(38) ಹಾಗೂ ಹ್ಯಾಜಲ್ವುಡ್ (23) ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 195 ರನ್ಗಳಿಕೆ ಮಾಡಿತ್ತು. ನ್ಯೂಜಿಲ್ಯಾಂಡ್ ತಂಡದ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ವಾರ್ನರ್ (5), ಫಿಂಚ್ (0), ಸ್ಟೋಯ್ನಿಸ್ (0),ಲಾಬುಶೇನ್(5), ಅಲೆಕ್ಸ್ ಕ್ಯಾರಿ(12) ವಿಕೆಟ್ ಒಪ್ಪಿಸಿದರು.
ಬೌಲಿಂಗ್ನಲ್ಲಿ ಮಿಂಚಿದ ಬೌಲ್ಟ್ 4 ವಿಕೆಟ್, ಮ್ಯಾಟ್ ಹೆನ್ರಿ 3, ಸೌಥಿ ಹಾಗೂ ಸ್ಯಾಟ್ನರ್ 1 ವಿಕೆಟ್ ಪಡೆದುಕೊಂಡರು.