ದುಬೈ: ಬಾಂಗ್ಲಾದೇಶ ತಂಡವನ್ನು 8 ವಿಕೆಟ್ಗಳಿಂದ ಮಣಿಸುವ ಮೂಲಕ ಆಸ್ಟ್ರೇಲಿಯಾ ತಂಡ 2ನೇ ಗುಂಪಿನಲ್ಲಿ 2ನೇ ಸ್ಥಾನಕ್ಕೇರಿದ್ದಲ್ಲದೆ, 82 ಎಸೆತಗಳಿರುವಂತೆ ಜಯ ಸಾಧಿಸಿ ನೆಟ್ರನ್ರೇಟ್ನಲ್ಲಿ ದಕ್ಷಿಣ ಆಫ್ರಿಕಾವನ್ನು ಹಿಂದಿಕ್ಕಿದೆ.
ಸೆಮಿಫೈನಲ್ ರೇಸ್ನಲ್ಲಿ ಉಳಿದುಕೊಳ್ಳಲು ಗೆಲ್ಲಲೇಬೇಕಾದ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದ ಆಸ್ಟ್ರೇಲಿಯಾ ಬಾಂಗ್ಲಾದೇಶ ತಂಡವನ್ನು ಕೇವಲ 73 ಕ್ಕೆ ಆಲೌಟ್ ಮಾಡಿತ್ತು.
ಸತತ ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿದ್ದ ಬಾಂಗ್ಲಾದೇಶ ತಂಡ ಇಂದಿನ ಪಂದ್ಯದಲ್ಲೂ ತನ್ನ ಕಳಪೆ ಬ್ಯಾಟಿಂಗ್ ಮುಂದುವರಿಸಿತು. ವಿಶ್ವಕಪ್ಗೂ ಮುನ್ನ ನಡೆದಿದ್ದ ಆಸೀಸ್ ವಿರುದ್ಧ 5 ಪಂದ್ಯಗಳ ದ್ವಿಪಕ್ಷೀಯ ಸರಣಿಯಲ್ಲಿ 4-1ರಲ್ಲಿ ಜಯ ಸಾಧಿಸಿದ್ದ ಬಾಂಗ್ಲಾದೇಶ ಇಂದಿನ ಪಂದ್ಯದಲ್ಲಿ ಆಸೀಸ್ ಬೌಲರ್ಗಳಿಗೆ ಉತ್ತರಿಸಲಾಗದೆ 15 ಓವರ್ಗಳಲ್ಲಿ ಸರ್ವಪತನ ಕಂಡಿತು. ಮೊಹಮ್ಮದ್ ನಯೀಮ್ (17), ನಾಯಕ ಮಹಮುದುಲ್ಲಾ(16) ಮತ್ತು ಶಮೀಮ್ ಹೊಸೈನ್ (19) ಮಾತ್ರ ಎರಡಂಕಿ ರನ್ಗಳಿಸಿದರು. 4 ಮಂದಿ ಸೊನ್ನೆ ಸುತ್ತಿದರೆ, ಉಳಿದ ನಾಲ್ಕು ಬ್ಯಾಟರ್ಗಳು ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು.
ಆ್ಯಡಂ ಜಂಪಾ 19ಕ್ಕೆ 5, ಜೋಸ್ ಹೆಜಲ್ವುಡ್ 8ಕ್ಕೆ2, ಮಿಚೆಲ್ ಸ್ಟಾರ್ಕ್ 21ಕ್ಕೆ2, ಗ್ಲೇನ್ ಮ್ಯಾಕ್ಸ್ವೆಲ್ 6ಕ್ಕೆ1 ವಿಕೆಟ್ ಪಡೆದು ಬಾಂಗ್ಲಾದೇಶ ತಂಡವನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸಿ ಆಸ್ಟ್ರೇಲಿಯಾಗೆ 74 ರನ್ಗಳ ಸುಲಭ ಗುರಿ ಸಿಗುವಂತೆ ಮಾಡಿದರು.