ಕರ್ನಾಟಕ

karnataka

ETV Bharat / sports

ಶ್ರೀಲಂಕಾ ವಿರುದ್ಧದ ಟಿ20 ಸರಣಿ: ಆಸ್ಟ್ರೇಲಿಯಾ ತಂಡ ಪ್ರಕಟ; ವಾರ್ನರ್​, ಸ್ಮಿತ್ ಕಮ್​ಬ್ಯಾಕ್​

ಮುಂಬರುವ ಐಸಿಸಿ ಟಿ-20 ವಿಶ್ವಕಪ್​ ಗಮನದಲ್ಲಿಟ್ಟುಕೊಂಡು ಕ್ರಿಕೆಟ್ ಆಸ್ಟ್ರೇಲಿಯಾ ಮಂಡಳಿ ಶ್ರೀಲಂಕಾ ವಿರುದ್ಧದ ಚುಟುಕು ಕ್ರಿಕೆಟ್​​ ಸರಣಿಗೋಸ್ಕರ ಬಲಿಷ್ಠ ತಂಡ ಪ್ರಕಟಿಸಿದ್ದು, ನಾಳೆ ಆಡುವ 11ರ ಬಳಗದಲ್ಲಿ ವಾರ್ನರ್, ಸ್ಮಿತ್​ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಈಗಾಗಲೇ ತಂಡವು ಅಭ್ಯಾಸದಲ್ಲಿ ನಿರತವಾಗಿದೆ.

Australia announce Team
Australia announce Team

By

Published : Jun 6, 2022, 3:39 PM IST

ಮೆಲ್ಬೋರ್ನ್​(ಆಸ್ಟ್ರೇಲಿಯಾ): ಶ್ರೀಲಂಕಾ ವಿರುದ್ಧ ಆರಂಭಗೊಳ್ಳಲಿರುವ ಟಿ-20 ಕ್ರಿಕೆಟ್​ ಸರಣಿಗೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಘೋಷಣೆಯಾಗಿದೆ. ಮುಂಬರುವ ವಿಶ್ವಕಪ್​ ಗಮನದಲ್ಲಿಟ್ಟುಕೊಂಡು ಸ್ಫೋಟಕ ಬ್ಯಾಟರ್ ಡೇವಿಡ್ ವಾರ್ನರ್​ ಹಾಗೂ ಮಾಜಿ ಕ್ಯಾಪ್ಟನ್ ಸ್ಟೀವ್​ ಸ್ಮಿತ್​ಗೆ ಅವಕಾಶ ನೀಡಲಾಗಿದೆ. ಕೊಲಂಬೊದ ಎಸ್​. ಪ್ರೇಮದಾಸ್ ಮೈದಾನದಲ್ಲಿ ಎಲ್ಲ ಪಂದ್ಯಗಳು ನಡೆಯಲಿವೆ.

ಈ ಹಿಂದೆ ಫೆಬ್ರವರಿ ತಿಂಗಳಲ್ಲಿ ಶ್ರೀಲಂಕಾ ಹಾಗೂ ಪಾಕಿಸ್ತಾನದ ವಿರುದ್ಧದ ಟಿ-20 ಸರಣಿಯಿಂದ ಹೊರಗುಳಿದಿದ್ದ ವಾರ್ನರ್​ ಹಾಗೂ ಸ್ಮಿತ್ ಇದೀಗ ತಂಡಕ್ಕೆ ಕಮ್​ಬ್ಯಾಕ್ ಮಾಡಿದ್ದಾರೆ. ಉಳಿದಂತೆ 2021ರ ವಿಶ್ವಕಪ್​​ನಲ್ಲಿ ಕಣಕ್ಕಿಳಿದಿದ್ದ 11 ಪ್ಲೇಯರ್​​ಗಳಿಗೆ ಮಣೆ ಹಾಕಲಾಗಿದೆ.

ಕಳೆದ ಕೆಲ ದಿನಗಳ ಹಿಂದೆ ಮುಕ್ತಾಯಗೊಂಡಿರುವ ಐಪಿಎಲ್​​ನಲ್ಲಿ ಡೇವಿಡ್​ ವಾರ್ನರ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಬ್ಯಾಟ್​ ಬೀಸಿದ್ದರು. 12 ಪಂದ್ಯಗಳಿಂದ 432ರನ್​​​ಗಳಿಕೆ ಮಾಡಿದ್ದ ವಾರ್ನರ್​​, ಇದೀಗ ತಂಡಕ್ಕೆ ಮರಳಿದ್ದಾರೆ. ಆದರೆ, ಕಳೆದ ಕೆಲ ತಿಂಗಳಿಂದ ಟಿ-20 ಕ್ರಿಕೆಟ್​ನಿಂದ ಹೊರಗುಳಿದಿದ್ದ ಸ್ಮಿತ್ ಈ ಸಲ ಚಾನ್ಸ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ:34ನೇ ವಸಂತಕ್ಕೆ ಕಾಲಿಟ್ಟ ರಹಾನೆ.. ವಿಭಿನ್ನ ರೀತಿಯಲ್ಲಿ ವಿಶ್ ಮಾಡಿದ ಸೆಹ್ವಾಗ್​

ಪ್ರಮುಖವಾಗಿ ಶ್ರೀಲಂಕಾ ಸರಣಿಯಲ್ಲಿ ವೇಗದ ಬೌಲರ್​ ಪ್ಯಾಟ್ ಕಮ್ಮಿನ್ಸ್​ ಹಾಗೂ ಆ್ಯಡಂ ಜಂಪಾ ಹೊರಗುಳಿದಿದ್ದಾರೆ. ಇವರ ಸ್ಥಾನಕ್ಕೆ ಕೇನ್​ ರಿಚರ್ಡ್ಸನ್​ ಹಾಗೂ ಆಷ್ಟನ್​​ ಆಗರ್​ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ನಾಳೆಯ ಪಂದ್ಯದಲ್ಲಿ ವಾರ್ನರ್ ಹಾಗೂ ಸ್ಮಿತ್​ ಕಣಕ್ಕಿಳಿಯಲಿದ್ದಾರೆ.

ಆಸ್ಟ್ರೇಲಿಯಾ ತಂಡ ಇಂತಿದೆ:ಆರನ್​​ ಫಿಂಚ್​(ಕ್ಯಾಪ್ಟನ್​), ಸೇನ್​​ ಅಬಾಟ್​, ಆಷ್ಟನ್​​​ ಅಗರ್,ಜೋಸ್ ಹ್ಯಾಜಲ್​ವುಡ್, ಜೋಸ್ ಇಂಗ್ಲಿಸ್​, ಮಿಚೆಲ್​ ಮಾರ್ಷ್​, ಗ್ಲೆನ್ ಮ್ಯಾಕ್ಸ್​ವೆಲ್​, ರಿಚರ್ಡ್ಸನ್, ಕೇನ್​ ರಿಚರ್ಡ್ಸನ್​, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್​, ಮಾರ್ಕಸ್ ಸ್ಟೋಯ್ನಿಸ್, ಮಿಚೆನ್​ ಸ್ವೆಪ್ಸನ್, ಡೇವಿಡ್ ವಾರ್ನರ್, ಮ್ಯಾಥ್ ವಾರ್ನರ್​

ನಾಳೆಯ ಪಂದ್ಯಕ್ಕೆ ತಂಡ : ಆರನ್ ಫಿಂಚ್ (ಕ್ಯಾಪ್ಟನ್​), ಡೇವಿಡ್ ವಾರ್ನರ್, ಮಿಚೆಲ್​ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಸ್ಟೀವ್ ಸ್ಮಿತ್, ಮಾರ್ಕಸ್ ಸ್ಟೊಯ್ನಿಸ್​, ಮ್ಯಾಥ್ಯೂ ವೇಡ್, ಆಷ್ಟನ್ ಅಗರ್, ಮಿಚೆಲ್ ಸ್ಟಾರ್ಕ್, ಕೇನ್ ರಿಚರ್ಡ್‌ಸನ್, ಜೋಸ್​​ ಹ್ಯಾಜಲ್‌ವುಡ್

ABOUT THE AUTHOR

...view details