ಸಿಡ್ನಿ: ಶುಕ್ರವಾರ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಜೋಶ್ ಹೇಜಲ್ವುಡ್ರ ಮಾರಕ ದಾಳಿಗೆ ಮಣಿದ ಸಿಂಹಳೀಯರು, ಐದು ಪಂದ್ಯಗಳ ಟಿ 20 ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾವು ಶ್ರೀಲಂಕಾವನ್ನು 20ರನ್ಗಳಿಂದ ಸೋಲಿಸಿತು. ಮಳೆಯ ಕಾರಣ ಡಿಎಲ್ಎಸ್(DLS) ವಿಧಾನವನ್ನು ಬಳಸಿ ಶ್ರೀಲಂಕಾಗೆ 19 ಓವರ್‌ಗಳಲ್ಲಿ 143 ರನ್‌ಗಳ ಗುರಿಯನ್ನು ನೀಡಲಾಗಿತ್ತು.
ಆಸ್ಟ್ರೇಲಿಯಾವು 149/9 ರನ್ನ ಗುರಿಯನ್ನು ನೀಡಿತ್ತು. ಆದರೆ, ಮಳೆಯ ಕಾರಣ ಡಿಎಲ್ಎಸ್ ನಿಯಮದಂತೆ 19 ಓವರ್‌ಗಳಲ್ಲಿ 143ರನ್ ನೀಡಲಾಯಿತು. ಲಂಕನ್ನರ ನಾಲ್ಕು ವಿಕೆಟ್‌ಗಳನ್ನು ಹೇಜಲ್‌ವುಡ್ ಮತ್ತು ಮೂರು ವಿಕೆಟ್‌ಗಳನ್ನು ಝಾಂಪಾ ಉರುಳಿಸಿದರು. ಇದರಿಂದ ಆಸ್ಟ್ರೇಲಿಯಾವು 20ರನ್‌ಗಳ ಗೆಲುವು ಸಾಧಿಸಿತು.
ತಂಡದ ಸ್ಕೋರ್ 3 ಆಗಿದ್ದಾಗ ಧನುಷ್ ಗುಣತಿಲಕ ಅವರ ವಿಕೆಟ್ ಪಡೆಯುವ ಮೂಲಕ ಹೇಜಲ್‌ವುಡ್ ಶ್ರೀಲಂಕಾಗೆ ಆರಂಭಿಕ ಆಘಾತವನ್ನು ನೀಡಿದರು. ಪ್ಯಾಟ್ ಕಂಮ್ಮಿಂಗ್ಸ್ಗೆ ಪಾತುಂ ನಿಸ್ಸಾಂಕ್ ವಿಕೆಟ್ ನೀಡಿದರು. ಇದರಿಂದ ಎರಡನೇ ವಿಕೆಟ್ನ ಜೊತೆ ಆಟ ತುಂಬಾ ಹೊತ್ತು ನಡೆಯಲಿಲ್ಲ.
ನಂತರ, ಚರಿತ್ ಅಸಲಂಕಾ ಮತ್ತು ನಿಸ್ಸಾಂಕ ಇನ್ನಿಂಗ್ಸ್ ಕಟ್ಟಲು ಪ್ರಯತ್ನಿಸಿದರು. ಆದರೆ ಝಂಪಾ ಅವರು ಎರಡು ವಿಕೆಟ್‌ಗಳನ್ನು ಒಟ್ಟಿಗೆ ಉರುಳಿಸಿದರು. 11 ನೇ ಓವರ್‌ನಲ್ಲಿ ತಂಡದ ಮೊತ್ತವು 64/4 ಆಗಿತ್ತು. ವನಿಂದು ಹಸರಂಗ ಕೇವಲ 13 ರನ್‌ಗೆ ಝಂಪಾ ಅವರ ಸ್ಪೆಲ್‌ಗೆ ಔಟಾದ ನಂತರ ಮಳೆಯಿಂದಾಗಿ ಆಟ ಸ್ಥಗಿತಗೊಂಡು 19 ಓವರ್‌ಗಳಲ್ಲಿ 143 ರನ್‌ಗಳ ಗುರಿಯನ್ನು ಪರಿಷ್ಕರಿಸಲಾಯಿತು.