ಮುಂಬೈ (ಮಹಾರಾಷ್ಟ್ರ): ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಮದುವೆಗೆ ಮತ್ತಷ್ಟು ಪುಷ್ಠಿ ಸಿಕ್ಕಿದೆ. ಈ ವರ್ಷದ ಕೊನೆಯಲ್ಲಿ ಅಥಿಯಾ ಮತ್ತು ರಾಹುಲ್ ವಿವಾಹ ನಡೆಯಲಿದೆ ಎಂಬ ಬದಲಾಗಿ ಮುಂದಿನ ವರ್ಷ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುವುದು ಪಕ್ಕಾ ಆಗಿದೆ.
ಹೌದು, ಬಿಸಿಸಿಐ ಮೂಲಗಳ ಪ್ರಕಾರ, ಕೆಎಲ್ ರಾಹುಲ್ ಮುಂದಿನ ವರ್ಷ ಜನವರಿಯಲ್ಲಿ ತಮ್ಮ ಬಹುಕಾಲದ ಗೆಳತಿಯನ್ನು ಮದುವೆಯಾಗಲಿದ್ದು, ಮಹಾರಾಷ್ಟ್ರದಲ್ಲಿ ವಿವಾಹ ಸಮಾರಂಭ ಜರುಗಲಿದೆ ಅಂತೆ.
ಕೆಎಲ್ ರಾಹುಲ್ ಮುಂದಿನ ವರ್ಷ ಅಥಿಯಾ ಅವರನ್ನು ಮದುವೆಯಾಗುವುದಾಗಿ ಕೆಲವು ದಿನಗಳ ಹಿಂದೆ ತಿಳಿಸಿದ್ದಾರೆ. ಅಲ್ಲದೇ, ಈ ಬಗ್ಗೆ ಅಥಿಯಾ ಅವರ ಕುಟುಂಬದ ಆಪ್ತ ಸದಸ್ಯರೂ ಕೂಡ ಮಾಹಿತಿ ನೀಡಿದ್ದಾರೆ. ಟಿ-20 ವಿಶ್ವಕಪ್ ಟೂರ್ನಿ ಬಳಿಕ ಟೀಂ ಇಂಡಿಯಾ ನ್ಯೂಜಿಲ್ಯಾಂಡ್ ಪ್ರವಾಸಕ್ಕೆ ಹೋಗಲಿದೆ. ಅದರ ನಂತರ ಕೆಎಲ್ ರಾಹುಲ್ ಮದುವೆ ಮಹಾರಾಷ್ಟ್ರದಲ್ಲಿ ನಡೆಯಲಿದೆ ಎಂಬುವುದಾಗಿ ಬಿಸಿಸಿಐ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.
ಕೆಎಲ್ ರಾಹುಲ್ ಮತ್ತು ಅಥಿಯಾ ಬಹಳ ಸಮಯದಿಂದ ಡೇಟಿಂಗ್ ಮಾಡುತ್ತಿದ್ದಾರೆ. ಅಥಿಯಾ ಅವರ ಖ್ಯಾತ ಬಾಲಿವುಡ್ ನಟ ಸುನೀಲ್ ಶೆಟ್ಟಿ ಕೂಡ ರಾಹುಲ್ ಜೊತೆಗೆ ಮಗಳ ಸಂಬಂಧವನ್ನು ಹಲವು ಬಾರಿ ಖಚಿತಪಡಿಸಿದ್ದಾರೆ. ಇದೇ ವೇಳೆ ಸುನೀಲ್ ಶೆಟ್ಟಿ ಅವರ ಮುಂಬೈನ ಖಂಡಾಲಾ ಬಂಗಲೆಯಲ್ಲಿ ವಿವಾಹ ನಡೆಯಲಿದೆ ಎಂದೂ ವರದಿಯಾಗಿದೆ.
ಇದನ್ನೂ ಓದಿ:ರಾಹುಲ್ ಮತ್ತು ಅಥಿಯಾ ಶೆಟ್ಟಿ ಮದುವೆ ಬಗ್ಗೆ ಮತ್ತೆ ಸುದ್ದಿ: ಆಲಿಯಾ - ರಣಬೀರ್ ಹಾದಿಯಲ್ಲಿ ಲವ್ ಬರ್ಡ್ಸ್