ಹ್ಯಾಂಗ್ಝೌ (ಚೀನಾ): ಇಲ್ಲಿನ ಪಿಂಗ್ಫೆಂಗ್ ಕ್ಯಾಂಪಸ್ ಕ್ರಿಕೆಟ್ ಸ್ಟೇಡಿಯಂನಲ್ಲಿಂದು ಏಷ್ಯನ್ ಗೇಮ್ಸ್ 2023ರ (Asian Games Womens T20I 2023) ಮಹಿಳಾ ಕ್ರಿಕೆಟ್ ಫೈನಲ್ನಲ್ಲಿ ಭಾರತ ತಂಡವು ಶ್ರೀಲಂಕಾವನ್ನು ಮಣಿಸಿ ಚಿನ್ನಕ್ಕೆ ಮುತ್ತಿಕ್ಕಿದೆ. 19 ರನ್ನಿಂದ ಸೋತ ಶ್ರೀಲಂಕಾ ತಂಡ ಬೆಳ್ಳಿಗೆ ತೃಪ್ತಿಪಟ್ಟಿದೆ.
ಭಾರತ ಕೊಟ್ಟಿದ್ದ 116 ರನ್ನ ಗುರಿಯನ್ನು ಬೆನ್ನತ್ತಿದ ಲಂಕಾ ವನಿತೆಯರ ಬಳಗ ನಿಗದಿತ ಓವರ್ ಅಂತ್ಯಕ್ಕೆ 8 ವಿಕೆಟ್ ನಷ್ಟಕ್ಕೆ 97 ಕಲೆ ಹಾಕುವಲ್ಲಿ ಮಾತ್ರ ಶಕ್ತವಾಯಿತು. ಸಿಂಹಳದ ವನಿತೆಯರನ್ನು 19 ರನ್ನಿಂದ ಕಟ್ಟಿಹಾಕಿದ ಹರ್ಮನ್ಪ್ರೀತ್ ಕೌರ್ ಪಡೆ ಭಾರತಕ್ಕೆ ಎರಡನೇ ಚಿನ್ನದ ಪದಕ ಗೆದ್ದರು.
ಭಾರತ ವನಿತೆಯರ ಇನ್ನಿಂಗ್ಸ್:ಚಿನ್ನದ ಪದಕದ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಟಾಸ್ ಗೆದ್ದು, ಮೊದಲು ಬ್ಯಾಟ್ ಮಾಡಲು ನಿರ್ಧರಿಸಿತ್ತು. ಬ್ಯಾಟಿಂಗ್ ಆರಂಭಿಸಿದ ಭಾರತ ತಂಡಕ್ಕೆ ಶ್ರೀಲಂಕಾ ತಂಡ ಶಾಕ್ ನೀಡಿತು. ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಕೇವಲ 9 ರನ್ ಗಳಿಸಿ ಪೆವಲಿಯನ್ ಹಾದಿ ಹಿಡಿದಿದ್ದರು. ಬಳಿಕ ಬಂದ ಜೆಮಿಮಾ ರಾಡ್ರಿಗಸ್ ಸ್ಮೃತಿ ಮಂಧಾನ ಜೊತೆ ಅದ್ಭುತ ಇನ್ನಿಂಗ್ಸ್ ಕಟ್ಟಿದರು. ಇಬ್ಬರು ಜೊತೆಗೂಡಿ 73 ರನ್ ಕಲೆ ಹಾಕಿದರು.
ಇನ್ನು ಸ್ಮೃತಿ ಮಂಧಾನ 45 ಎಸೆತಗಳಲ್ಲಿ 46 ರನ್ಗಳನ್ನು ಕಲೆ ಹಾಕಿದ್ರೆ, ಜೆಮಿಮಾ ರಾಡ್ರಿಗಸ್ 40 ಎಸೆತಗಳಲ್ಲಿ 42 ರನ್ಗಳನ್ನು ಬಾರಿಸಿದರು. ಆದ್ರೆ ಇವರ ಬಳಿಕ ಬಂದ್ ಆಟಗಾರ್ತಿಯರು ಯಾರು ಎರಡಂಕಿ ದಾಟಲೇ ಇಲ್ಲ. ಭಾರತ ಪರ ಸ್ಮೃತಿ ಮಂಧಾನ 45 ರನ್, ಶೆಫಾಲಿ ವರ್ಮಾ 9 ರನ್, ಜೆಮಿಮಾ ರಾಡ್ರಿಗಸ್ 42 ರನ್, ನಾಯಕಿ ಹರ್ಮನ್ಪ್ರೀತ್ ಕೌರ್ 2 ರನ್, ವಿಕೆಟ್ ಕೀಪರ್ ರಿಚಾ ಘೋಷ್ 9 ರನ್, ದೀಪ್ತಿ ಶರ್ಮಾ 1 ರನ್, ಪೂಜಾ ವಸ್ತ್ರಾಕರ್ 2 ರನ್, ಅಮಂಜೋತ್ ಕೌರ್ 1 ರನ್ ಗಳಿಸಿದ್ದರು. ಒಟ್ಟಿನಲ್ಲಿ ಭಾರತದ ವನಿತೆಯರ ತಂಡ ನಿಗದಿತ 20 ಓವರ್ಗಳಿಗೆ 7 ವಿಕೆಟ್ಗಳ ನಷ್ಟಕ್ಕೆ 116 ರನ್ಗಳನ್ನು ಕಲೆ ಹಾಕಿ ಎದುರಾಳಿ ಶ್ರೀಲಂಕಾ ತಂಡಕ್ಕೆ ಸಾಧಾರಣ ಮೊತ್ತದ ಗುರಿ ನೀಡಿತು. ಇನ್ನು ಶ್ರೀಲಂಕಾ ಪರ ಪ್ರಬೋಧಿನಿ, ಸುಗಂಧಿಕಾ ಕುಮಾರಿ ಮತ್ತು ರಣವೀರಾ ತಲಾ ಎರಡೆರಡು ವಿಕೆಟ್ಗಳನ್ನು ಪಡೆದು ಮಿಂಚಿದರು.