ನವದೆಹಲಿ: ಭಾರತ ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮುಂ ಬರುವ ಏಷ್ಯನ್ ಗೇಮ್ಸ್ನಲ್ಲಿ ಆಡಬೇಕಾದಲ್ಲಿ ವನಿತೆಯರ ತಂಡ ಫೈನಲ್ಸ್ ಪ್ರವೇಶ ಪಡೆಯಬೇಕಾಗುತ್ತದೆ. ಏಷ್ಯನ್ ಗೇಮ್ಸ್‌ಗೆ ಭಾರತೀಯ ಕ್ರಿಕೆಟ್ ಪುರುಷ ಮತ್ತು ಮಹಿಳಾ ತಂಡ ನೇರ ಎಂಟರ ಘಟ್ಟಕ್ಕೆ ಪ್ರವೇಶ ಪಡೆದುಕೊಂಡಿದೆ. ಗೆಮ್ಸ್ನ ನಿಯಮದಂತೆ ಜೂನ್ 1ರ ಐಸಿಸಿ ಟಿ -20 ಅಂತಾರಾಷ್ಟ್ರೀಯ ಶ್ರೇಯಾಂಕದ ಆಧಾರದ ಮೇಲೆ ಭಾರತ, ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ನೇರ ಸ್ಥಾನವನ್ನು ಪಡೆದುಕೊಂಡಿದೆ.
ಈ ನೇರ ಪ್ರವೇಶ ಪಡೆದಿರುವ ಸಂತೋಷ ಭಾರತೀಯ ವನಿತೆಯ ತಂಡಕ್ಕೆ ಒಂದೆಡೆ ಆದರೆ, ಇನ್ನೊಂದೆಡೆ ನಾಯಕಿ ಇಲ್ಲದೇ ಮೈದಾನಕ್ಕೆ ಇಳಿಯ ಬೇಕಾದ ಪರಿಸ್ಥಿತಿ ಎದುರಾಗಿದೆ. ಹೌದು, ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧದ ಏಕದಿನ ಪಂದ್ಯದಲ್ಲಿ ಅಂಪೈರಿಂಗ್ ಅನ್ನು ಸಾರ್ವಜನಿಕವಾಗಿ ಟೀಕಿಸಿದ್ದಕ್ಕಾಗಿ ಹರ್ಮನ್‌ಪ್ರೀತ್‌ಗೆ ಎರಡು ಪಂದ್ಯಗಳಿಂದ ಐಸಿಸಿ ನಿಷೇಧ ಹೇರಿದೆ.
ಹೀಗಾಗಿ ಹರ್ಮನ್‌ಪ್ರೀತ್ ಅವರು ಕ್ವಾರ್ಟರ್-ಫೈನಲ್‌ನಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಸೆಮಿಫೈನಲ್ ಪಂದ್ಯದಲ್ಲಿ ಭಾರತ ಅರ್ಹತೆ ಪಡೆದು ಅಂತಿ ಪಂದ್ಯಕ್ಕೆ ಸ್ಥಾನ ಗಿಟ್ಟಿಸಿಕೊಂಡಲ್ಲಿ ನಾಯಕಿ ಕೌರ್ ಬ್ಯಾಟ್ ಹಿಡಿಯಲಿದ್ದಾರೆ. ಮಹಿಳೆಯರ ಸ್ಪರ್ಧೆಗಳು ಸೆಪ್ಟೆಂಬರ್ 19 ರಂದು ಪ್ರಾರಂಭವಾಗಲಿದೆ ಮತ್ತು ಸೆಪ್ಟೆಂಬರ್ 26 ರಂದು ಚಿನ್ನ ಮತ್ತು ಕಂಚಿನ ಪದಕದ ಸ್ಪರ್ಧೆಯಿಂದ ಕೊನೆಗೊಳ್ಳಲಿದೆ.
ರುತುರಾಜ್ ಗಾಯಕ್ವಾಡ್ ನೇತೃತ್ವದ ಪುರುಷರ ತಂಡವು ಸಹ ಐಸಿಸಿ ಟಿ20 ಶ್ರೇಯಾಂಕದ ಆಧಾರದ ಮೇಲೆ ಕ್ವಾರ್ಟರ್ ಫೈನಲ್‌ಗೆ ನೇರ ಪ್ರವೇಶ ಪಡೆದಿದೆ. ಪುರುಷರ ಈವೆಂಟ್ ಸೆಪ್ಟೆಂಬರ್ 28 ರಂದು ಪ್ರಾರಂಭವಾಗುತ್ತದೆ. ಏಕದಿನ ವಿಶ್ವಕಪ್ ಅಕ್ಟೋಬರ್ 5ಕ್ಕೆ ಆರಂಭವಾದರೆ, ಪುರುಷರ ಏಷ್ಯನ್ ಗೇಮ್ಸ್ ಫೈನಲ್ 7 ರಂದು ನಡೆಯಲಿದೆ. ಭಾರತೀಯ ಕ್ರಿಕೆಟ್ ತಂಡವು ಫೈನಲ್‌ಗೆ ಅರ್ಹತೆ ಪಡೆದರೆ ಅವರು ಸತತ ಮೂರು ದಿನ ಪಂದ್ಯವನ್ನು ಆಡಬೇಕಾಗುತ್ತದೆ. ಅಕ್ಟೋಬರ್ 5 ರಂದು ಕ್ವಾರ್ಟರ್ ಫೈನಲ್, ಅಕ್ಟೋಬರ್ 6 ಸೆಮಿಫೈನಲ್ ಮತ್ತು ಅಕ್ಟೋಬರ್ 7 ಫೈನಲ್ಸ್ ನಡೆಯಲಿದೆ.