ಕೊಲಂಬೊ (ಶ್ರೀಲಂಕಾ): ಇಂಡೋ - ಪಾಕ್ ರೋಚಕ ಕದನಕ್ಕೆ ಯಾಕೋ ಮಳೆ ಆಗಾಗ ಕಾಡುತ್ತಿದೆ. ಮೀಸಲು ದಿನದ ಪಂದ್ಯದುದ್ದಕ್ಕೂ ವರುಣ ಅಡ್ಡಿ ಪಡಿಸಿ ಮ್ಯಾಚ್ 1 ಗಂಟೆ ತಡವಾಗಿ ಆರಂಭವಾಗಿತ್ತು. ನಂತರ ಭಾರತ ಮೊದಲ ಇನ್ನಿಂಗ್ಸ್ ಅನ್ನು ಸುಸೂತ್ರವಾಗಿ ಆಡಿತು. ರಾಹುಲ್ ಮತ್ತು ಕೊಹ್ಲಿಯ ಶತಕದ ನೆರವಿನಿಂದ ಭಾರತ 357 ರನ್ಗಳ ಬೃಹತ್ ಗುರಿಯನ್ನು ಪಾಕ್ಗೆ ನೀಡಿತು. ಈ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ 32 ಓವರ್ಗೆ 8 ವಿಕೆಟ್ನಷ್ಟಕ್ಕೆ 128 ರನ್ ಗಳಿಸಿತು. ಇಬ್ಬರು ಆಟಗಾರರು ಗಾಯದಿಂದ ಅಲಭ್ಯ ಆಗಿರುವ ಕಾರಣ ಭಾರತ 228 ರನ್ ಬೃಹತ್ ಜಯ ದಾಖಲಿಸಿತು.
11 ನೇ ಓವರ್ ವೇಳೆ ಮಳೆ ಬಂದು ಸುಮಾರು ಅರ್ಧಗಂಟೆಗಳ ಕಾಲ ಸ್ಥಗಿತಗೊಂಡ ನಂತರ ಪಂದ್ಯ ಮತ್ತೆ ಆರಂಭಯಿತು. ಆದರೆ ಪಾಕಿಸ್ತಾನದ ಬ್ಯಾಟರ್ಗಳು ಪಿಚ್ನಲ್ಲಿ ಗಟ್ಟಿಯಾಗಿ ನೆಲೆನಿಲ್ಲುವಲ್ಲಿ ವಿಫಲತೆ ಎದುರಿಸಿದರು. ಭಾರತ ಬೌಲರ್ಗಳು ಪಾಕ್ ಬ್ಯಾಟರ್ಗಳಿಗೆ ರನ್ ಗಳಿಸದಂತೆ ಕಡಿವಾಣ ಹಾಕಿದ್ದಲ್ಲದೇ ವಿಕೆಟ್ನ್ನು ಯಶಸ್ವಿಯಾಗಿ ಪಡೆದರು.
ಹೆಚ್ಚು ಕಡಿಮೆ ವರ್ಷಗಳ ನಂತರ ಏಕದಿನ ಕ್ರಿಕೆಟ್ನಲ್ಲಿ ಬೌಲಿಂಗ್ ಮಾಡುತ್ತಿರುವ ಜಸ್ಪ್ರೀತ್ ಬುಮ್ರಾ ಉತ್ತಮ ಕಮ್ಬ್ಯಾಕ್ ಮಾಡಿದರು. ಬುಮ್ರಾ ತಮ್ಮ ಮೂರನೇ ಓವರ್ನಲ್ಲಿ ಇಮಾನ್ ಉಲ್ ಹಕ್ ವಿಕೆಟ್ ಪಡೆದರು. ಈ ಮೂಲಕ ಗಾಯದಿಂದ ಮರಳಿದ ನಂತರ ಏಕದಿನ ಕ್ರಿಕೆಟ್ನಲ್ಲಿ ಪ್ರಥಮ ವಿಕೆಟ್ ಪಡೆದರು. ಅವರ ಪ್ರಬಾವಿ ಸ್ವಿಂಗ್ಗೆ ಪಾಕ್ ಬ್ಯಾಟರ್ಗಳು ರನ್ ಗಳಿಸಲೇ ಇಲ್ಲ.