ದುಬೈ:ಇಲ್ಲಿನ ಅಂತಾರಾಷ್ಟ್ರೀಯ ಕ್ರೀಡಾಂಗಣದ ಹೊರಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಆತಂಕ ಉಂಟು ಮಾಡಿದೆ. ಇದೇ ಮೈದಾನದಲ್ಲಿ ಭಾರತ ಮತ್ತು ಆಫ್ಘಾನಿಸ್ತಾನ ಮಧ್ಯೆ ಇನ್ನು ಕೆಲವೇ ನಿಮಿಷಗಳಲ್ಲಿ ಪಂದ್ಯ ನಡೆಯಲಿದೆ.
ನಿನ್ನೆ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಫ್ಘಾನಿಸ್ತಾನ ತಂಡ ಸೋಲು ಕಂಡ ಬಳಿಕ ಮೈದಾನಲ್ಲಿಯೇ ಉಭಯ ರಾಷ್ಟ್ರಗಳ ಅಭಿಮಾನಿಗಳ ಮಧ್ಯೆ ಹೊಡೆದಾಟವೇ ನಡೆದಿತ್ತು. ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿಯ ಕುರ್ಚಿಗಳನ್ನು ಕಿತ್ತು ಅಭಿಮಾನಿಗಳು ದಾಂಧಲೆ ಸೃಷ್ಟಿಸಿದ್ದರು.