ಲಾಹೋರ್ (ಪಾಕಿಸ್ತಾನ): ಶ್ರೀಲಂಕಾ ವಿರುದ್ಧ ಬ್ಯಾಟಿಂಗ್ ವೈಫಲ್ಯ ಕಂಡಿದ್ದ ಬಾಂಗ್ಲಾದೇಶ ಇಂದಿನ ಪಂದ್ಯದಲ್ಲಿ ಅಫ್ಘಾನಿಸ್ಥಾದ ವಿರುದ್ಧ ಉತ್ತಮ ಕಮ್ಬ್ಯಾಕ್ ಮಾಡಿದೆ. ಮೆಹಿದಿ ಹಸನ್ ಮಿರಾಜ್ ಮತ್ತು ನಜ್ಮುಲ್ ಹೊಸೈನ್ ಶಾಂಟೊ ಅವರು ಭರ್ಜರಿ ಶತಕ ಗಳಿಸಿದ್ದು, ಅಫ್ಘಾನಿಸ್ತಾನಕ್ಕೆ 335 ರನ್ನ ಬೃಹತ್ ಗುರಿಯನ್ನು ನೀಡಿದೆ.
ಮೊದಲ ವಿಕೆಟ್ಗೆ ಮೆಹಿದಿ ಹಸನ್ ಮಿರಾಜ್ ಮತ್ತು ಮೊಹಮ್ಮದ್ ನಯಿಮ್ 60 ರನ್ ಜೊತೆಯಾಟ ಮಾಡಿದರು. 28 ರನ್ ಗಳಿಸಿದ್ದ ನಯಿಮ್ ಕ್ಲೀನ್ ಬೌಲ್ಡ್ಗೆ ಬಲಿಯಾದರು. ಅವರ ಬೆನ್ನಲ್ಲೇ ತೌಹಿದ್ ಹೃದಯೋಯ್ ಶೂನ್ಯಕ್ಕೆ ಔಟ್ ಆದರು. ನಂತರ ಆರಂಭಿಕ ನಯಿಮ್ ಜೊತೆ ಸೇರಿಕೊಂಡ ನಜ್ಮುಲ್ ಹೊಸೈನ್ ಶಾಂಟೊ ಭರ್ಜರಿ ಇನ್ನಿಂಗ್ಸ್ ಕಟ್ಟಿದರು. ಮೂರನೇ ವಿಕೆಟ್ಗೆ ಈ ಜೋಡಿ 194 ರನ್ನ ಜೊತೆಯಾಟವನ್ನು ಮಾಡಿತು. 10.3 ಓವರ್ನಿಂದ 44.3 ಓವರ್ ವರೆಗೆ ಈ ಜೋಡಿ ಅಫ್ಘಾನಿ ಬೌಲರ್ಗಳ ಮೇಲೆ ಸವಾರಿ ಮಾಡಿತು.
ಹಸನ್ ಮಿರಾಜ್ 7 ಬೌಂಡರಿ ಮತ್ತು 3ಸಿಕ್ಸ್ ಬಾರಿಸಿ 119 ಬಾಲ್ನಲ್ಲಿ 112 ರನ್ ಗಳಿಸಿದರು. 112 ರನ್ ಗಳಿಸಿ ಆಡುತ್ತಿದ್ದ ಹಸನ್ ಮಿರಾಜ್ ಎಡಗೈ ಗಾಯಕ್ಕೆ ತುತ್ತಾಗಿ ಪಂದ್ಯದಿಂದ ಹೊರನಡೆದರು. ಬಾಂಗ್ಲಾಕ್ಕೆ ಅವರ ಗಾಯ ಮುಂದಿನ ಪಂದ್ಯದಲ್ಲಿ ಬಾಧಿಸಿದರೆ ಸಮಸ್ಯೆ ಆಗಲಿದೆ. ಅವರ ವಿಕೆಟ್ ಬೆನ್ನಲ್ಲೇ ನಜ್ಮುಲ್ ಹೊಸೈನ್ ಶತಕ ದಾಖಲಿಸಿದರು. 105 ಬಾಲ್ನಲ್ಲಿ 104 ರನ್ ಗಳಸಿದ ಅವರು ರನ್ ಔಟ್ಗೆ ಬಲಿಯಾದರು. ಅವರು ಈ ಇನ್ನಿಂಗ್ಸ್ನಲ್ಲಿ 9 ಬೌಂಡರಿ ಮತ್ತು 2 ಸಿಕ್ಸ್ ದಾಖಲಿಸಿದ್ದರು.