ಕೊಲಂಬೊ (ಶ್ರೀಲಂಕಾ): ಕುಸಲ್ ಮೆಂಡಿಸ್ ಮತ್ತು ಸದೀರ ಸಮರವಿಕ್ರಮ ಅವರ ಅರ್ಧಶತಕದ ನೆರವಿನಿಂದ ಆತಿಥೇಯ ಶ್ರೀಲಂಕಾ ತಂಡ ಬಾಂಗ್ಲಾ ವಿರುದ್ಧದ ಏಷ್ಯಾಕಪ್ನ ಸೂಪರ್ ಫೋರ್ ಪಂದ್ಯದಲ್ಲಿ ನಿಗದಿತ ಓವರ್ ಅಂತ್ಯಕ್ಕೆ 9 ವಿಕೆಟ್ಗಳನ್ನು ಕಳೆದುಕೊಂಡು 257 ರನ್ಗಳನ್ನು ಕಲೆಹಾಕಿದೆ. ಎರಡನೇ ಸೋಲಿನಿಂದ ತಪ್ಪಿಸಿಕೊಳ್ಳಲು ಬಾಂಗ್ಲಾದೇಶದ ಟೈಗರ್ಗಳು 258 ಗುರಿಯನ್ನು ಬೆನ್ನು ಹತ್ತಬೇಕಿದೆ.
ಇಲ್ಲಿನ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಬಾಂಗ್ಲಾದೇಶ ನಾಯಕ ಶಕೀಬ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ನಾಯಕನ ಈ ನಿರ್ಧಾರವನ್ನು ಬೌಲರ್ಗಳು ಸಮರ್ಥಿಸಿಕೊಂಡರು. ಇದರಿಂದ ತಂಡ ಸಾಮಾನ್ಯ ಗುರಿಯನ್ನು ಪಡೆಯಿತು. ಮೊದಲ ಓವರ್ನಲ್ಲೇ ಎಲ್ಬಿಡಬ್ಲ್ಯುಗೆ ಬಲವಾಗಿ ಮನವಿ ಮಾಡಿ ಬಾಂಗ್ಲಾ ತನ್ನ ಒಂದು ರಿವೀವ್ ಅವಕಾಶವನ್ನು ಕಳೆದುಕೊಂಡರೂ, ಆರಂಭಿಕರು 34 ರನ್ ಜೊತೆಯಾಟ ಮಾಡುತ್ತಿದ್ದಂತೆ ಹಸನ್ ಮಹಮೂದ್ 18 ರನ್ ಗಳಿಸಿ ಆಡುತ್ತಿದ್ದ ದಿಮುತ್ ಕರುಣಾರತ್ನೆ ವಿಕೆಟ್ ಪಡೆದರು.
ನಂತರ ಇನ್ನೊಬ್ಬ ಆರಂಭಿಕ ಪಾತುಮ್ ನಿಸ್ಸಾಂಕ ಜೊತೆ ಒಂದಾದ ಕುಸಲ್ ಮೆಂಡಿಸ್ ಉತ್ತಮ ಜೊತೆಯಾಟವನ್ನು ಕಟ್ಟಿದರು. ಈ ಜೋಡಿ 74 ರನ್ ಕಲೆಹಾಕಿತ್ತು. 40 ರನ್ ಗಳಿಸಿ ಅರ್ಧಶತಕದತ್ತ ಮುನ್ನಡೆಯುತ್ತಿದ್ದ ನಿಸ್ಸಾಂಕ, ಶೋರಿಫುಲ್ ಇಸ್ಲಾಂ ಬಾಲ್ನಲ್ಲಿ ಎಲ್ಬಿಡಬ್ಲ್ಯೂಗೆ ಬಲಿಯಾದರು. ನಿಸ್ಸಾಂಕ ವಿಕೆಟ್ ಬೆನ್ನಲ್ಲೇ ಕುಸಾಲ್ ಮೆಂಡಿಸ್ ಸಹ ತಮ್ಮ 24ನೇ ಅರ್ಧಶತಕ ಗಳಿಸಿ ವಿಕೆಟ್ ಒಪ್ಪಿಸಿದರು . ಅವರು 3 ಬಾಲ್ ಎದುರಿಸಿ 6 ಬೌಂಡರಿ ಮತ್ತು 1 ಸಿಕ್ಸ್ನಿಂದ 50 ರನ್ ಕೆಲೆಹಾಕಿದ್ದರು. ನಂತರ ಬಂದ ಚರಿತ್ ಅಸಲಂಕಾ (10) ಮತ್ತು ಧನಂಜಯ್ ಡಿ ಸಿಲ್ವ (6) ಬೇಗ ವಿಕೆಟ್ ನೀಡಿದರು.