ಕರ್ನಾಟಕ

karnataka

ETV Bharat / sports

Asia Cup 2023: ವಾಘಾ ಗಡಿ ಮೂಲಕ ಪಾಕಿಸ್ತಾನ ಪ್ರವೇಶಿಸಿದ ರೋಜರ್ ಬಿನ್ನಿ, ರಾಜೀವ್ ಶುಕ್ಲಾ - ETV Bharath Kannada news

ಏಷ್ಯಾಕಪ್​ ಆತಿಥ್ಯ ವಹಿಸಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಆಹ್ವಾನದ ಹಿನ್ನೆಲೆಯಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಉಪಾಧ್ಯಕ್ಷ ರಾಜೀವ್ ಶುಕ್ಲಾ ಪಾಕ್​ಗೆ ತೆರಳಿದ್ದಾರೆ.

Asia Cup 2023
Asia Cup 2023

By ETV Bharat Karnataka Team

Published : Sep 4, 2023, 4:02 PM IST

ಅಮೃತಸರ (ಪಂಜಾಬ್): ಏಷ್ಯಾಕಪ್​ 2023 ಪಾಕಿಸ್ತಾನ ಮತ್ತು ಶ್ರೀಲಂಕಾ ಆತಿಥ್ಯದಲ್ಲಿ ನಡೆಯುತ್ತಿದೆ. ಪಾಕಿಸ್ತಾನದ ಲಾಹೋರ್​ನಲ್ಲಿ ಸಪ್ಟೆಂಬರ್​ 5 ಮತ್ತು 6ರಂದು ನಡೆಯಲಿರುವ ಪಂದ್ಯದಲ್ಲಿ ಬಿಸಿಸಿಐನ ಇಬ್ಬರು ಅಧಿಕಾರಿಗಳು ಇರಲಿದ್ದಾರೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಉಪಾಧ್ಯಕ್ಷ ರಾಜೀವ್ ಶುಕ್ಲಾ ವಾಘಾ ಗಡಿ ಮೂಲಕ ಪಾಕಿಸ್ತಾನಕ್ಕೆ ತೆರಳಿದ್ದಾರೆ..

ನಾಳೆ (ಮಂಗಳವಾರ) ನಡೆಯುವ ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ನಡುವಿನ ಪಂದ್ಯವನ್ನು ಗಡಾಫಿ ಕ್ರೀಡಾಂಗಣದಲ್ಲಿ ಉಪಸ್ಥಿತರಿದ್ದು, ವೀಕ್ಷಿಸಲಿದ್ದಾರೆ. ಅಲ್ಲದೇ ಬುಧವಾರ ನಡೆಯುವ ಸೂಪರ್​ ಫೋರ್​ ಹಂತದ ಮೊದಲ ಪಂದ್ಯವನ್ನು ವೀಕ್ಷಿಸಲಿದ್ದಾರೆ. ಏಷ್ಯನ್ ಕ್ರಿಕೆಟ್ ಮಂಡಳಿ (ಎಸಿಸಿ) ಮತ್ತು ಇತರ ಕ್ರಿಕೆಟ್ ಮಂಡಳಿಗಳ ಸದಸ್ಯರಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಆಹ್ವಾನ ನೀಡಿದ ನಂತರ ಬಿನ್ನಿ ಮತ್ತು ಶುಕ್ಲಾ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಸಂಪೂರ್ಣ ಕ್ರಿಕೆಟ್​ ಉದ್ದೇಶಿತ ಪ್ರವಾಸ: ತಮ್ಮ ಎರಡು ದಿನಗಳ ಭೇಟಿ ರಾಜಕೀಯ ಕಾರಣಗಳಿಗಾಗಿ ಅಲ್ಲ, ಆದರೆ ಸಂಪೂರ್ಣವಾಗಿ ಕ್ರಿಕೆಟ್ ಎಂದು ಶುಕ್ಲಾ ಸ್ಪಷ್ಟಪಡಿಸಿದ್ದಾರೆ. "ಈ ಎರಡು ದಿನಗಳ ಭೇಟಿಯು ಕ್ರಿಕೆಟ್‌ನ ದೃಷ್ಟಿಕೋನದಿಂದ ಸಂಪೂರ್ಣವಾಗಿ ಆಗಿದೆ, ರಾಜಕೀಯ ಏನೂ ಇಲ್ಲ, ಭೋಜನವನ್ನು ಆಯೋಜಿಸಲಾಗಿದೆ ಮತ್ತು ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ಮೂರು ತಂಡಳ ಪಂದ್ಯ ಅಲ್ಲಿ ನಡೆಯುತ್ತದೆ" ಎಂದಿದ್ದಾರೆ.

ಭಾರತ ತಂಡವು ಟೂರ್ನಿಗಾಗಿ ಪಾಕಿಸ್ತಾನಕ್ಕೆ ಏಕೆ ಪ್ರವಾಸ ಮಾಡಲಿಲ್ಲ ಮತ್ತು ಅಂತಹ ಪ್ರವಾಸದ ಭವಿಷ್ಯದ ಸಾಧ್ಯತೆಯ ಬಗ್ಗೆ ಕೇಳಿದಾಗ, ರಾಜೀವ್ ಶುಕ್ಲಾ ಅವರು "ಸರ್ಕಾರದ ಸಲಹೆಯಂತೆ ನಾವು ಹೋಗುತ್ತೇವೆ, ಸರ್ಕಾರ ಏನು ನಿರ್ಧರಿಸಿದರೂ ನಾವು ಅದನ್ನು ಮಾಡುತ್ತೇವೆ" ಎಂದು ಹೇಳಿದರು.

2006ರ ನಂತರ ಪಾಕಿಸ್ತಾನ ಭೇಟಿ:ಬಿಸಿಸಿಐ ಅಧ್ಯಕ್ಷ ಬಿನ್ನಿ ಮಾತನಾಡಿ,"ಏಷ್ಯಾಕಪ್​ನ ಪಂದ್ಯಗಳಿಗೆ ಕೊಲಂಬೊಗೆ ತೆರಳಿದ್ದೆವು, ಅದರಂತೆ ಪಾಕಿಸ್ತಾನಕ್ಕೆ ತೆರಳುತ್ತಿದ್ದೇವೆ. 2004 - 05ರಲ್ಲಿ ವೇಗದ ಬೌಲಿಂಗ್​ ಕುರಿತಾದ ಅಧ್ಯಯನಕ್ಕೆ ಸಂಬಂಧಿಸಿದಂತೆ ಭೇಟಿ ನೀಡಿದ್ದೆ. ಅದಾದ ನಂತರ ಈಗ ಹೋಗುತ್ತಿದ್ದೇನೆ" ಎಂದಿದ್ದಾರೆ.

2023ರ ಏಷ್ಯಾಕಪ್ ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಆಗಸ್ಟ್ 30 ಮತ್ತು ಸೆಪ್ಟೆಂಬರ್ 17ರ ನಡುವೆ ನಡೆಯಲಿದೆ. ಪಾಕಿಸ್ತಾನ, ನೇಪಾಳ ಮತ್ತು ಭಾರತ ಎ ಗುಂಪಿನಲ್ಲಿದೆ. ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ಬಿ ಗುಂಪಿನಲ್ಲಿವೆ. ಪಾಕಿಸ್ತಾನ ಕ್ರಿಕೆಟ್ ತಂಡವು ತಮ್ಮ ಮೊದಲ ಏಷ್ಯಾಕಪ್ ಅನ್ನು ನೇಪಾಳದ ವಿರುದ್ಧ ಆಗಸ್ಟ್ 30 ರಂದು ಆಡಿತು. ಸೆಪ್ಟೆಂಬರ್​ 17 ರಂದು ಕೊಲಂಬೊದಲ್ಲಿ ಸೂಪರ್​ ಫೋರ್​ನ ಟಾಪ್​ ಎರಡು ತಂಡಗಳಿಗೆ ಫೈನಲ್​ ನಡೆಯಲಿದೆ.

ಭಾರತ ತಂಡ ಏಷ್ಯಾಕಪ್​ನ ಮೊದಲ ಪಂದ್ಯವನ್ನು ಪಾಕಿಸ್ತಾನದ ವಿರುದ್ಧ ಆಡಿತು. ಮೊದಲು ಬ್ಯಾಟ್​ ಮಾಡಿದ ಭಾರತ 266 ರನ್​ ಗಳಿಸಿತ್ತು. ಎರಡನೇ ಇನ್ನಿಂಗ್ಸ್​ಗೆ ಅವಕಾಶ ಕೊಡದಂತೆ ಮಳೆ ಸುರಿದ ಹಿನ್ನೆಲೆ ಪಂದ್ಯವನ್ನು ರದ್ದು ಮಾಡಲಾಯಿತು. ಇಂದು ಗುಂಪು ಹಂತದ ಎರಡನೇ ಪಂದ್ಯವನ್ನು ನೇಪಾಳದ ವಿರುದ್ಧ ಆಡುತ್ತಿದೆ.

ಇದನ್ನೂ ಓದಿ:IND vs NEP: ಬುಮ್ರಾ ಬದಲು ಶಮಿ ಕಣಕ್ಕೆ.. ನೇಪಾಳದ ವಿರುದ್ಧ ಬೌಲಿಂಗ್​ ಆಯ್ಕೆ ಮಾಡಿಕೊಂಡ ರೋಹಿತ್​ ಶರ್ಮಾ

ABOUT THE AUTHOR

...view details