ಕರ್ನಾಟಕ

karnataka

ETV Bharat / sports

AFG vs SL: ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಲಂಕಾ.. ಪಂದ್ಯ ಜಯಿಸಿದವರಿಗೆ ಸೂಪರ್​ ಫೋರ್​ನಲ್ಲಿ ಸ್ಥಾನ - ETV Bharath Kannada news

ಗುಂಪು ಹಂತ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ಮುಖಾಮುಖಿ ಆಗುತ್ತಿದ್ದು, ಟಾಸ್​ ಗೆದ್ದ ಲಂಕಾ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದೆ.

Etv Bharat
Etv Bharat

By ETV Bharat Karnataka Team

Published : Sep 5, 2023, 2:48 PM IST

Updated : Sep 5, 2023, 3:29 PM IST

ಲಾಹೋರ್​(ಪಾಕಿಸ್ತಾನ): ಏಷ್ಯಾಕಪ್​ನ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ಮುಖಾಮುಖಿ ಆಗುತ್ತಿದೆ. ಈ ಪಂದ್ಯದ ಫಲಿತಾಂಶದಿಂದ ಬಿ ಗುಂಪಿನಲ್ಲಿ ಯಾರು ಸೂಪರ್​ ಫೋರ್​ಗೆ ಪ್ರವೇಶ ಪಡೆಯುತ್ತಾರೆ ಎಂಬುದು ತಿಳಿದು ಬರಲಿದೆ. ಟಾಸ್​ ಗೆದ್ದ ಶ್ರೀಲಂಕಾ ತಂಡ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದೆ. ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ಹಿಂದಿನ ಪಂದ್ಯದ ತಂಡದಲ್ಲೇ ಮುಂದುವರೆದಿವೆ.

ಏಷ್ಯಾಕಪ್​ನ ಬಿ ಗುಂಪಿನಲ್ಲಿ ಶ್ರೀಲಂಕಾ, ಬಾಂಗ್ಲಾದೇಶ ಮತ್ತುಅಫ್ಘಾನಿಸ್ತಾನ ಇದೆ. ಬಾಂಗ್ಲಾದೇಶ, ಶ್ರೀಲಂಕಾದ ವಿರುದ್ಧ ಸೋಲು ಕಂಡಿದ್ದು, ಅಫ್ಘಾನಿಸ್ತಾನದ ಮೇಲೆ ಜಯಿಸಿ 2 ಅಂಕಗಳನ್ನು ಪಡೆದುಕೊಂಡಿದೆ. ಶ್ರೀಲಂಕಾ, ಬಾಂಗ್ಲಾದೇಶವನ್ನು ಮಣಿಸಿರುವ ಭರವಸೆಯಲ್ಲೇ ಇಂದು ಮೈದಾನಕ್ಕಿಳಿದೆ. ಇಂದು ಶ್ರೀಲಂಕಾ ಗೆದ್ದಲ್ಲಿ ಅಫ್ಘಾನಿಸ್ತಾನ ಏಷ್ಯಾಕಪ್​ನ ಸೂಪರ್​ ಫೋರ್​ನಿಂದ ಹೊರ ಬೀಳಲಿದೆ. ಅಫ್ಘಾನಿಸ್ತಾನ ಗೆದ್ದಲ್ಲಿ ರನ್​ ರೇಟ್ ಆಧಾರದಲ್ಲಿ ಯಾರು ಸೂಪರ್​ ಫೋರ್​ ಪ್ರವೇಶ ಪಡೆಯುತ್ತಾರೆ ಎಂಬುದು ತಿಳಿದು ಬರಲಿದೆ.

ಏಷ್ಯಾಕಪ್​ಗೂ ಮುನ್ನ ಅಫ್ಘಾನಿಸ್ಥಾನ ಪಾಕಿಸ್ತಾನದ ವಿರುದ್ಧ ಪಂದ್ಯಗಳನ್ನು ಈ ಮೈದಾನದಲ್ಲಿ ಪಂದ್ಯಗಳನ್ನು ಆಡಿತ್ತು. ಹೀಗಾಗಿ ಲಂಕಾಗೆ ಕಠಿಣ ಆಗಲಿದೆ. ಪಾಕಿಸ್ತಾನದ ಪಿಚ್​ಗಳು ಹೆಚ್ಚು ರನ್​ ಗಳಿಸಲು ಸಹಕಾರಿಯಾಗಿರುವುದರಿಂದ ದೊಡ್ಡ ಮೊತ್ತವನ್ನು ಕಲೆಹಾಕುವ ಅಗತ್ಯ ಮೊದಲು ಬ್ಯಾಟ್​ ಮಾಡುತ್ತಿರುವ ಲಂಕಾ ಮೇಲಿದೆ.

ಏಕದಿನ ವಿಶ್ವಕಪ್​ನ ಅರ್ಹತಾ ಪಂದ್ಯದಲ್ಲಿ ಶ್ರೀಲಂಕಾ ತಂಡ ಉತ್ತಮ ಪ್ರದರ್ಶನ ನೀಡಿದೆ. ಈ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನವನ್ನು ಸುಲಭವಾಗಿ ಮಣಿಸಬಹುದು ಎಂಬ ಲೆಕ್ಕಾಚಾರವೂ ಇದೆ. ಆದರೆ, ಲಂಕಾ ಏಷ್ಯಾಕಪ್​ ವೇಳೆಗೆ ನಾಲ್ವರು ಪ್ರಮುಖ ಆಟಗಾರರನ್ನು ಗಾಯದ ಕಾರಣಕ್ಕೆ ಕಳೆದುಕೊಂಡಿರುವುದರಿಂದ ತಂಡ ಕೊಂಚ ದುರ್ಬಲವಾಗಿ ಕಾಣುತ್ತಿದೆ.

ಬಿಸಿಸಿಐ ಅಧಿಕಾರಿಗಳಿಂದ ಪಂದ್ಯ ವೀಕ್ಷಣೆ: ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿಯ ಅಧ್ಯಕ್ಷ ರೋಜರ್​ ಬಿನ್ನಿ ಮತ್ತು ಉಪಾಧ್ಯಕ್ಷ ರಾಜೀವ್​ ಶುಕ್ಲಾ ನಿನ್ನೆ ವಾಘಾ ಗಡಿಯ ಮೂಲಕ ಪಾಕಿಸ್ತಾನಕ್ಕೆ ತೆರಳಿದ್ದರು. ಇಂದು ಮತ್ತು ನಾಳೆ ಲಾಹೋರ್​ನ ಗಢಾಫಿ ಮೈದಾನದಲ್ಲಿ ನಡೆಯಲಿರುವ ಪಂದ್ಯವನ್ನು ವೀಕ್ಷಿಸಲಿದ್ದಾರೆ.

ತಂಡಗಳು ಇಂತಿವೆ.. ಅಫ್ಘಾನಿಸ್ತಾನ:ರಹಮಾನುಲ್ಲಾ ಗುರ್ಬಾಜ್ (ವಿಕೆಟ್​ ಕೀಪರ್), ಇಬ್ರಾಹಿಂ ಝದ್ರಾನ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ (ನಾಯಕ), ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಗುಲ್ಬದಿನ್ ನೈಬ್, ಕರೀಂ ಜನತ್, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ಫಜಲ್ಹಕ್ ಫರೂಕ್

ಶ್ರೀಲಂಕಾ: ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಲ್ ಮೆಂಡಿಸ್ (ವಿಕೆಟ್​ ಕೀಪರ್​), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ದಸುನ್ ಶನಕ (ನಾಯಕ), ದುನಿತ್ ವೆಲ್ಲಲಾಗೆ, ಮಹೀಶ್ ತೀಕ್ಷಣ, ಕಸುನ್ ರಜಿತ, ಮತೀಶ ಪತಿರಣ

ಇದನ್ನೂ ಓದಿ:World Cup 2023: ವಿಶ್ವಕಪ್​ಗೆ ಟೀಂ ಇಂಡಿಯಾ ಪ್ರಕಟ.. ಕೆಎಲ್ ರಾಹುಲ್​ಗೆ ಸ್ಥಾನ

Last Updated : Sep 5, 2023, 3:29 PM IST

ABOUT THE AUTHOR

...view details