ಕರ್ನಾಟಕ

karnataka

ETV Bharat / sports

ಎಬಿಡಿ ರೀತಿ ಬ್ಯಾಟ್​ ಬೀಸಿದ ಸೂರ್ಯ! 1 ಓವರ್‌ 4 ಸಿಕ್ಸರ್: ಸಹ ಆಟಗಾರನಿಗೆ ಶಿರಬಾಗಿದ ಕೊಹ್ಲಿ​

ಹಾಂಗ್ ​ಕಾಂಗ್​​ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿ ಸೂರ್ಯಕುಮಾರ್​ ಯಾದವ್​ ಎದುರಾಳಿ ಬೌಲರ್​​​ಗಳ ಮೇಲೆ ಪರಾಕ್ರಮ ಮರೆದರು. ಮೈದಾನದ ಮೂಲೆ ಮೂಲೆಗೂ ಚೆಂಡನ್ನಟ್ಟಿದ ಈ ಆಟಗಾರ​​​ 360 ಡಿಗ್ರಿಯಲ್ಲಿ ಬ್ಯಾಟ್​​ ಬೀಸಿದ್ದಾರೆ.

Virat Kohli Bows To Suryakumar
Virat Kohli Bows To Suryakumar

By

Published : Sep 1, 2022, 11:04 AM IST

ದುಬೈ(ಯುಎಇ):ಏಷ್ಯಾ ಕಪ್​ ಕ್ರಿಕೆಟ್​​​ ಟೂರ್ನಿಯಲ್ಲಿ ಬುಧವಾರ ಹಾಂಗ್ ​ಕಾಂಗ್​ ವಿರುದ್ಧ ನಡೆದ ಪಂದ್ಯದಲ್ಲಿ ಸೂರ್ಯಕುಮಾರ್​ ಯಾದವ್​ ಬೌಂಡರಿ, ಸಿಕ್ಸರ್​​​ಗಳ ಸುರಿಮಳೆಗೈದರು. ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟರ್​​​ ಎಬಿ ಡಿವಿಲಿಯರ್ಸ್​ ಶೈಲಿಯಲ್ಲಿ 360 ಡಿಗ್ರಿಯಲ್ಲಿ ಬ್ಯಾಟಿಂಗ್ ಮಾಡಿದ ಅವರು, ಕೊನೆಯ ಓವರ್​​​ನಲ್ಲಿ ನಾಲ್ಕು ಸಿಕ್ಸರ್​​​​​​​​​ ಬಾರಿಸಿ, ಗಮನ ಸೆಳೆದರು.

ಕೆ ಎಲ್ ರಾಹುಲ್​ ವಿಕೆಟ್​ ಒಪ್ಪಿಸಿದ ಬಳಿಕ ಮೈದಾನಕ್ಕೆ ಬಂದ ಸೂರ್ಯಕುಮಾರ್​ ಯಾದವ್,​​​ ಮಾಜಿ ಕ್ಯಾಪ್ಟನ್​ ವಿರಾಟ್​​ ಕೊಹ್ಲಿ ಜೊತೆ ಸೇರಿ ಅಬ್ಬರಿಸಿದರು. ತಾವು ಎದುರಿಸಿದ 26 ಎಸೆತಗಳಲ್ಲಿ 6 ಬೌಂಡರಿ, 6 ಸಿಕ್ಸರ್ ಸೇರಿ ಅಜೇಯ 68 ರನ್​​​​​ಗಳಿಕೆ ಮಾಡಿದರು. ಕೊನೆಯ ಓವರ್​​​ನಲ್ಲಿ ನಾಲ್ಕು ಸಿಕ್ಸರ್​​ ಸಿಡಿಸಿ, ತಂಡದ ಮೊತ್ತ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದರು. ಇವರ ಆಟದ ವೈಖರಿಗೆ ವಿರಾಟ್​ ಕೊಹ್ಲಿ ಶಿರಬಾಗಿ ನಮಿಸಿದ್ದಾರೆ.

ಇದನ್ನೂ ಓದಿ:'ನೀವು ಸ್ಫೂರ್ತಿ..' ಪಂದ್ಯ ಸೋತರೂ ಕೊಹ್ಲಿಗೆ ಟೀಂ ಜರ್ಸಿ ನೀಡಿ ಗಮನ ಸೆಳೆದ ಹಾಂಗ್‌ ಕಾಂಗ್‌

ದಾಖಲೆ ನಿರ್ಮಿಸಿದ ಸೂರ್ಯಕುಮಾರ್​: ನಿನ್ನೆಯ ಪಂದ್ಯದಲ್ಲಿ ಆರಂಭದಿಂದಲೂ ಆರ್ಭಟಿಸಿದ ರೋಹಿತ್​ ಶರ್ಮಾ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​​ನಲ್ಲಿ ವೇಗವಾಗಿ ಅರ್ಧಶತಕ ಸಿಡಿಸಿರುವ ಭಾರತದ 9ನೇ ಬ್ಯಾಟರ್​ ಆಗಿ ಹೊರಹೊಮ್ಮಿದರು. ಇದರ ಜೊತೆಗೆ 22 ಎಸೆತಗಳಲ್ಲಿ ಅರ್ಧಶತಕ ಸಿಡಿಸಿರುವ ರೋಹಿತ್​ ಶರ್ಮಾ ದಾಖಲೆ ಸರಿಗಟ್ಟಿದ್ದಾರೆ.

360 ಡಿಗ್ರಿಯಲ್ಲಿ ಬ್ಯಾಟಿಂಗ್​​:ಹಾಂಗ್​ ಕಾಂಗ್​ ಬೌಲರ್ ಹಾರೋನ್​ ಅರ್ಷದ್​​​​ ಎಸೆದ ಕೊನೆಯ 20ನೇ ಓವರ್​​​ ಸಂಪೂರ್ಣವಾಗಿ ಎದುರಿಸಿದ ಸೂರ್ಯಕುಮಾರ್​ 26 ರನ್ ಕಲೆಹಾಕಿದರು. ಈ ಓವರ್​ನಲ್ಲಿ 4 ಸಿಕ್ಸರ್ ಸಿಡಿಸಿ ಪರಾಕ್ರಮ ಮೆರೆದರು. ಮೊದಲ ಎಸೆತದಲ್ಲಿ ಫುಲ್​ಟಾಸ್ ಬಾಲ್​ಗೆ ಕವರ್​ನಲ್ಲಿ ಸ್ವೀಪ್ ಶಾಟ್, 2ನೇ ಎಸೆತದಲ್ಲಿ ಡೀಪ್ ಎಕ್ಸ್​ಟ್ರಾ ಕವರ್ ಸಿಕ್ಸ್, ಮೂರನೇ ಎಸೆತದಲ್ಲಿ ನೇರ ಸಿಕ್ಸ್ ಸಿಡಿಸಿದರು. ಇದಾದ ಬಳಿಕ 4ನೇ ಎಸೆತ ಡಾಟ್, 5ನೇ ಎಸೆತದಲ್ಲಿ ಫೈನ್​ಲೆಗ್ ಮೂಲಕ ಇನ್ನೊಂದು ಸಿಕ್ಸರ್​ ಸಿಡಿಸಿದ ಅವರು, ಕೊನೆಯ ಎಸೆತದಲ್ಲಿ ಎರಡು ರನ್​ ಕಲೆ ಹಾಕಿದರು.

ABOUT THE AUTHOR

...view details